ಉಳ್ಳಾ​ಲ(ಫೆ.11): ಕೆಎಸ್‌ಆರ್‌​ಟಿಸಿ ನಿರ್ವಾ​ಹ​ಕ ರೈಲ್ವೇ ಸೇತು​ವೆ​ಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗ​ಳೂರು ಹೊರ​ವ​ಲ​ಯದ ಜಪ್ಪಿ​ನ​ಮೊ​ಗೇ​ರಿ​ನಲ್ಲಿ ಬುಧ​ವಾರ ನಡೆ​ದಿದೆ. 

ಬಂಟ್ವಾಳ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಎಸ್‌ಆ​ರ್‌​ಟಿಸಿ ಬಸ್‌ ನಿರ್ವಾ​ಹಕ ಬಾಲಕೃಷ್ಣ ಮೃತರು. ಇವರು ಆತ್ಮಹತ್ಯೆಗೆ ಮೊದಲು ಡೆತ್‌ ನೋಟ್‌ ಬರೆದಿಟ್ಟು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಧಾರವಾಡ: ಸಾಲ​ಬಾಧೆ ತಾಳದೆ ರೈತ ಆತ್ಮ​ಹ​ತ್ಯೆ

ಡೆತ್‌ ನೋಟ್‌ನಲ್ಲಿ ತನ್ನ ಸಹೋದರನ ವಿರುದ್ಧ ಅಸಮಾಧಾನ ಹೊರಹಾಕಿರುವ ಬಾಲಕೃಷ್ಣ ಅವರು ಕೆಎಸ್‌ಆರ್‌​ಟಿಸಿ ಸಂಸ್ಥೆಯಲ್ಲಿ ನಿರಂತರ ಕಿರುಕುಳ ನೀಡುತ್ತಿದ್ದ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಸಂಸ್ಥೆ ತನ್ನನ್ನು ಬದುಕಲು ಬಿಡುತ್ತಿಲ್ಲ, ಅಧಿಕಾರಿಗಳು ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಬರೆದಿರುವ ಅವರು, ನನ್ನ ಮಕ್ಕಳು ಹಾಗೂ ತಾಯಿಯನ್ನು ಒಳ್ಳೆಯದರಲ್ಲಿ ನೋಡಿಕೊಳ್ಳಿ ಎಂದ ಡೆತ್‌ನೋಟ್‌ನಲ್ಲಿ ಉಲ್ಲೇಖಿ​ಸಿ​ದ್ದಾರೆ. ರಾ.ಹೆ.66ರ ಅವಳಿ ಸೇತು​ವೆ​ಗ​ಳಲ್ಲಿ ಜನರು ನದಿ​ಗೆ ಹಾರ​ದಂತೆ ಸೇತು​ವೆಯ ಇಕ್ಕೆ​ಲ​ಗ​ಳಿಗೆ ತಂತಿಯ ತಡೆ​ಬೇಲಿ ಅಳ​ವ​ಡಿ​ಸಿದ ಬಳಿಕ ಆ ಸೇತು​ವೆ​ಯಿಂದ ನದಿಗೆ ಹಾರುವ ಪ್ರಕ​ರ​ಣ​ಗಳು ನಿಂತಿ​ವೆ.