ಕೊಲ್ಕತ್ತಾ(ಫೆ.23): ಅಪ್ರಾಪ್ತೆ ಮೇಲೆ ಮೂವರು ಅತ್ಯಾಚಾ ಮಾಡಿದ ಘಟನೆ ಪಾಟ್ನಾದಲ್ಲಿ ನಡೆದಿದೆ. 15 ವರ್ಷದ ಬಾಲಕಿಗೆ ನೆರವು ನೀಡುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಮಾಡಲಾಗಿದೆ.

ಪಾಟ್ನಾದ ಹೋಟೆಲ್ ಒಂದರಲ್ಲಿ ಮೂವರು ಸೇರಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ಆರೋಪಿಗಳು ಅತ್ಯಾಚಾರ ಮಾಡಿ ರೈಲಿನ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಘಟನೆ ನಡೆದಿದೆ ಎಂದು ಸ್ಥಳೀಯ ಪೊಲೀಸ್ ಆರ್ತಿ ಜೈಸ್ವಾಲ್ ತಿಳಿಸಿದ್ದಾರೆ.

ರಿಸೀವ್ ಮಾಡಿದ್ರೆ ಅತ್ತ ಕಡೆಯಿಂದ ಬೆತ್ತಲೆ ಲೋಕ..ದೊಡ್ಡ ದೊಡ್ಡವರಿಗೆಲ್ಲ ಬ್ಲಾಕ್ ಮೇಲ್!

ಅಮ್ಮ ಬೈದ ಕಾರಣ ಹುಡುಗಿ ಮನೆ ಬಿಟ್ಟು ಬಂದಿದ್ದಳು. ಆರೋಪಿಗಳನ್ನು ಸೂರಜ್ ರಾವ್, ಶ್ರವಣ್ ಕುಮಾರ್, ಕೃಷ್ಣ ಕುಮಾರ್ ಎಂದು ಗುರುತಿಸಲಾಗಿದೆ.

ಇನ್ನೊಂದು ಘಟನೆಯಲ್ಲಿ ಚಾಲಕನೊಬ್ಬ ದಿವ್ಯಾಂಗ ಅಪ್ರಾಪ್ತೆಯನ್ನು ಮನೆಯಲ್ಲಿಯೇ ಅತ್ಯಾಚಾರ ಮಾಡಿದ ಘಟನೆ ನಡೆದಿದೆ. ಫೆಬ್ರವರಿ 17ರಂದು ಘಟನೆ ನಡೆದಿರುವುದಾಗಿ ಸ್ಥಳೀಯ ಪೊಲೀಸ್ ಮುಕೇಶ್ ವರ್ಮಾ ಹೇಳಿದ್ದಾರೆ.