* ರಾತ್ರಿ ಗೆಳೆಯನ ಮನೆಯಲ್ಲಿ ಭರ್ಜರಿ ಪಾರ್ಟಿ* ರಾತ್ರಿ ಮಲಗಿದವನು ಬೆಳಗ್ಗೆ ಶವ* ಗೆಳೆಯನೇ ಮಗನನ್ನು ಕೊಂದಿದ್ದಾನೆ ಎಂದ ನೊಂದ ತಾಯಿ
ಕೋಲ್ಕತ್ತಾ(ಜು.19): ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಯಲ್ಲಿ, ಯುವಕನೊಬ್ಬ ಅದೆಷ್ಟು ಮದ್ಯ ಸೇವಿಸಿದ್ದಾನೆಂದರೆ ಆತ ಸಾವನ್ನಪ್ಪಿದ್ದಾನೆ. ಈ ಪ್ರಕರಣ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ನಡೆದಿದೆ. 19 ವರ್ಷದ ಯುವಕನೊಬ್ಬ ಗಾಲ್ಫ್ ಗ್ರೀನ್ ಪ್ರದೇಶದ ತನ್ನ ಸ್ನೇಹಿತನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಪೊಲೀಸರ ಅನ್ವಯ ಆತ ರಾತ್ರಿ ಆಯೋಜಿಸಿದ್ದ ಬರ್ತ್‌ಡೇ ಪಾರ್ಟಿಗೆಂದು ಸ್ನೇಹಿತರ ಮನೆಗೆ ಹೋಗಿದ್ದರು. ಇಲ್ಲಿ ಮದ್ಯ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ ಮೃತಪಟಟ್ಟಿದ್ದಾನೆಂದು ಹೇಳಲಾಗಿದೆ.
ಗೆಳೆಯನ ಮನೆಯಲ್ಲಿ ಹುಟ್ಟುಹಬ್ಬ ಆಚರಣೆ
ಮಾಧ್ಯಮಗಳ ವರದಿಯನ್ವಯ ಮೃತ ಯುವಕನ ಹೆಸರು ರಿತೇಶ್ ಮೋದಕ್ ಆಗಿದೆ. ಆತ ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ರಾತ್ರಿ ತನ್ನ ಗೆಳೆಯ ಕೌಶಿಕ್ ಮಂಡಲ್ ಮನೆಗೆ ತೆರಳಿದ್ದ. ಇಲ್ಲೇ ಪಾರ್ಟಿ ಆಯೋಜಿಸಲಾಗಿತ್ತು.
ಗೆಳೆಯನ ವಿರುದ್ಧ ತಾಯಿ ಆರೋಪ
ಇನ್ನು ಮೃತ ಯುವಕನ ತಾಯಿ ತನ್ನ ಮಗನ ಸಾವಿಗೆ ಆತನ ಸ್ನೇಹಿತನೇ ಕಾರಣ ಎಂದು ದೂಷಿಸಿದ್ದಾನೆ. ಮಾಧ್ಯಮ ವರದಿಯನ್ವಯ, ಅತಿಯಾದ ಮದ್ಯಪಾನದಿಂದಾಗಿ ರಿತೇಶ್ ಮೋದಕ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಅವರು ಶುಕ್ರವಾರ ರಾತ್ರಿ 7.45 ರ ಸುಮಾರಿಗೆ ತನ್ನ ಸ್ನೇಹಿತನ ಮನೆಗೆ ತಲುಪಿ, ರಾತ್ರಿ ಇಡೀ ಅಲ್ಲೇ ಕಳೆದಿದ್ದಾನೆ.
ಬೆಳಗ್ಗೆದ್ದಾಗ ಬರ್ತ್‌ಡೇ ಬಾಯ್ ಸಾವು
ಕೌಶಿಕ್ ಮಂಡಲ್ ಬೆಳಿಗ್ಗೆ ಗೆಳೆಯ ರಿತೇಶ್ ಮೋದಕ್‌ನನ್ನು ಎಚ್ಚರಿಸಲು ಪ್ರಯತ್ನಿಸಿದಾಗ ಆತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ರಿತೇಶ್ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ಇದಾದ ಬಳಿ ಆಸ್ಪತ್ರೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ವಿವರಣೆ ನಿಡಿರುವ ಕೋಲ್ಕತ್ತಾ ಪೊಲೀಸರು 'ಮೂಗಿನಿಂದ ರಕ್ತದ ಕಲೆಗಳನ್ನು ಹೊರತುಪಡಿಸಿ ರಿತೇಶ್ ದೇಹದಲ್ಲಿ ಯಾವುದೇ ಬಾಹ್ಯ ಗಾಯದ ಗುರುತುಗಳು ಕಂಡುಬಂದಿಲ್ಲ. ಮರಣ ಪ್ರಮಾಣಪತ್ರದಲ್ಲಿ ಹೆಚ್ಚು ಮದ್ಯಪಾನ ಮಾಡಿರುವಿದರ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ ರಿತೇಶ್ ತಾಯಿ ತನ್ನ ಮಗನ ಸಾವಿಗೆ ಆತನ ಗೆಳೆಯ ಕೌಶಿಕ್ ಮಂಡಲ್ ಕಾರಣ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
