ಮುಂಬೈ, (ನ.07): ಪಾನಿಪೂರಿ ತಯಾರು ಮಾಡುವುದನ್ನು ನೋಡಿದ್ರೆ ತಿನ್ನಬಾರದು ಅಂತಾರೆ. ಕರೆಕ್ಟ್ ಈ ಇಲ್ಲೊಬ್ಬ ಆಸಾಮಿ ಪಾನಿ ಪೂರಿ ಮಾಡುವುದನ್ನು ನೋಡಿದ್ರೆ ನಿಜವಾಗಲೂ ತಿನ್ನಲೇ ಬಾರದು.

ಹೌದು.. ಶೌಚಾಲಯದ ನೀರನ್ನ ಬಳಸಿ ಪಾನಿಪುರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬೆಳಕಿಗೆ ಬಂದಿದೆ.

ಇಂತಹ ಪಾನಿಪೂರಿ ನೀವೆಂದೂ ತಿಂದಿರಲಾರಿರಿ!

ರಂಕಾಲಾ ಸರೋವರದ ಬಳಿ ಇರುವ ವಿಶೇಷ ಪಾನಿಪುರಿವಾಲಾ ಎಂಬ ಅಂಗಡಿ ಮಾಲೀಕ ಈ ಕೆಲಸ ಮಾಡಿದ್ದಾನೆ. ಟಾಯ್ಲೆಟ್​​ನ ನೀರನ್ನ ಕ್ಯಾನ್​ನಲ್ಲಿ ತುಂಬಿಸಿಕೊಂಡು ಅದರಿಂದ ಪಾನಿಪುರಿ ತಯಾರಿಸಿದ್ದಾನೆ.

ಈ ವಿಚಾರ ಜನರ ಕಿವಿಗೆ ಬೀಳುತ್ತಿದ್ದಂತೆಯೇ ಅಂಗಡಿಗೆ ಆಗಮಿಸಿದ ಗ್ರಾಹಕರು ಅಂಗಡಿಯನ್ನ ನಾಶ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಬೀದಿಬದಿಯ ಪಾನಿಪೂರಿ ಅಂಗಡಿಗಳ ಪಾನಿ-ಪೂರಿ ತಯಾರಿಸುವ ರಹಸ್ಯ ಬಯಲಾಗುತ್ತಿರುವುದು ಇದೇ ಮೊದಲೇನಲ್ಲ. ಕಾಲಿನಿಂದ ತುಳಿದು ಹಿಟ್ಟು ನಾದಿ ಪೂರಿ ತಯಾರಿಸುವ, ಕೊಳಕು ನೀರಿನಿಂದ ಪಾನಿ ತಯಾರಿಸುವ ಪ್ರಕರಣಗಳು ವಿಡಿಯೋ ಸಮೇತ ಹಲವಾರು ಬಾರಿ ಬಯಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.