Kodagu: ನಿನ್ನೆ ಮೊಮ್ಮಗ, ಇಂದು ತಾತ: ನರಭಕ್ಷಕ ಹುಲಿಗೆ 24 ಗಂಟೆಯಲ್ಲಿ ಒಂದೇ ಕುಟುಂಬದ ಇಬ್ಬರ ಬಲಿ
ನಿನ್ನೆ ಸಂಜೆ ತೋಟದಲ್ಲಿ ಆಟವಾಡುತ್ತಿದ್ದ ವೇಳೆ 12 ವರ್ಷದ ಬಾಲಕನನ್ನು ಕೊಂದು ಹಾಕಿದ್ದ ಹುಲಿ ಇಂದು ಬೆಳಗ್ಗೆ ಅದೇ ಕುಟುಂಬದ ತಾತನ್ನು ಕೊಂದು ಹಾಕಿದೆ. ಕೇವಲ 24 ಗಂಟೆಗಳಲ್ಲಿ ಒಂದೇ ಕುಟುಂಬದ ಇಬ್ಬರು ವ್ಯಕ್ತಿಗಳನ್ನು ಹುಲಿ ಬಲಿ ಪಡೆದಿದೆ.
ಕೊಡಗು (ಫೆ.13): ನಿನ್ನೆ ಸಂಜೆ ತೋಟದಲ್ಲಿ ಆಟವಾಡುತ್ತಿದ್ದ ವೇಳೆ 12 ವರ್ಷದ ಬಾಲಕನನ್ನು ಕೊಂದು ಹಾಕಿದ್ದ ಹುಲಿ ಇಂದು ಬೆಳಗ್ಗೆ ಅದೇ ಕುಟುಂಬದ ತಾತನ್ನು ಕೊಂದು ಹಾಕಿದೆ. ಕೇವಲ 24 ಗಂಟೆಗಳಲ್ಲಿ ಒಂದೇ ಕುಟುಂಬದ ಇಬ್ಬರು ವ್ಯಕ್ತಿಗಳನ್ನು ಹುಲಿ ಕೊಂದು ಹಾಕಿದ್ದು, ಅರ್ಧಂಬರ್ಧ ತಿಂದು ಹಾಕಿದೆ.
ಕೊಡಗು ಜಿಲ್ಲೆಯಲ್ಲಿ ಮತ್ತೆ ವ್ಯಾಘ್ರನ ಆರ್ಭಟ ಶುರುವಾಗಿದೆ. ನಿನ್ನ ಸಂಜೆಯ ವೇಳೆ ತೋಟದಲ್ಲಿ ಆಟವಾಡುತ್ತಿದ್ದ ಬಾಲಕನನ್ನು ಎಳೆದೊಯ್ದು ಕೊಂದು ದೇಹದ ಅರ್ಧ ಭಾಗವನ್ನು ತಿಂದು ಹಾಕಿತ್ತು. ಜನರು ಗುಂಪಾಗಿ ಹೋಗಿ ದಾಳಿ ಮಾಡಲು ಮುಂದಾದಾಗ ಮಗುವಿನ ದೇಹವನ್ನು ಅರ್ಧಕ್ಕೆ ತಿಂದು ಬಿಟ್ಟು ಹೋಗಿತ್ತು. ಹುಲಿ ದಾಳಿಗೆ ಮೃತಪಟ್ಟ ಬಾಲಕನ ಶವ ವೀಕ್ಷಣೆಗೆ ಬಂದು ಕುಟುಂಬದ ದುಖಃದಲ್ಲಿ ಭಾಗಿಯಾಗಲು ಬಂದಿದ್ದಾರೆ. ಮೊಮ್ಮಗನ ಸಾವಿನ ಸುದ್ದಿಯಿಂದ ನೊಂದಿದ್ದ ತಾತ ಬೆಳಗ್ಗೆ ಬಹಿರ್ದೆಸೆಗೆಂದು ತೋಟದ ಕಡೆಗೆ ಹೋದಾಗ ಆತನ ಮೇಲೆಯೂ ಹುಲಿ ದಾಳಿ ಮಾಡಿ ಕೊಂದು ಹಾಕಿದೆ.
ಹುಲಿಯ ದಾಳಿಗೆ 12 ವರ್ಷದ ಬಾಲಕ ಬಲಿ: ತೋಟದಲ್ಲಿ ಆಟವಾಡುತ್ತಿದ್ದಾಗ ದಾಳಿ
ತೋಟದಲ್ಲಿ ಕೆಲಸಕ್ಕೆಂದು ಬಂದವರು ಸಾವು: ಕೊಡಗಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಮತ್ತೆ ಹುಲಿ ದಾಳಿಗೆ ಬಲಿಯಾದ ವೃದ್ಧನನ್ನು ರಾಜು (60) ಎಂದು ಗುರುತಿಸಲಾಗಿದೆ. ಮೂಲತಃ ಮೈಸೂರು ಜಿಲ್ಲೆಯ ಕೊಳವಿಗೆ ಹಾಡಿಯ ನಿವಾಸಿಯಾಗಿದ್ದಾರೆ. ಬಾಡಗ ಗ್ರಾಮಕ್ಕೆ ಕಾಫಿ ತೋಟದ ಕೆಲಸಕ್ಕೆ ಬಂದಿದ್ದ ರಾಜು. ನಿನ್ನೆ ಬಾಲಕನನ್ನು ಕೊಂದಿದ್ದ ಘಟನೆಯ ಹಿನ್ನೆಲೆಯಲ್ಲಿ ಅಲ್ಲಿಗೆ ಬಂದಿದ್ದನು. ಇಂದು ಬೆಳಗ್ಗೆ ತೋಟದಲ್ಲಿ ವೃದ್ಧನನ್ನು ಹುಲಿ ಕೊಂದು ಹಾಕಿದೆ.
ಹುಲಿ ಶೂಟ್ ಮಾಡುವಂತೆ ಸ್ಥಳೀಯರ ಆಗ್ರಹ: ಕೇವಲ 24 ಗಂಟೆಯ ಅಂತದಲ್ಲಿ ಇಬ್ಬರನ್ನು ಕೊಂದ ಹುಲಿ ಶೂಟ್ ಮಾಡಲು ಸ್ಥಳೀಯರು ಆಗ್ರಹಿಸಿದ್ದಾರೆ. ಹುಲಿ ಶೂಟ್ ಮಾಡುವವರೆಗೆ ಶವ ತೆಗೆಯಲು ಬಿಡುವುದಿಲ್ಲ ಎಂದು ಸ್ಥಳೀಯರ ಹಠ ಹಿಡಿದಿದ್ದಾರೆ. ಬೆಳಿಗ್ಗೆಯಿಂದ ರಾಜು ಅವರ ಶವ ತೆಗೆಯಲು ಬಿಡದ ರೈತ ಸಂಘದ ಮುಖಂಡರು. ಆದರೆ ಸರ್ಕಾರದಿಂದ ಆದೇಶಬೇಕು ಎನ್ನುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು. ಆದೇಶ ಬರುವವರೆಗೆ ಶವ ಕಾಯುವುದಾಗಿ ಪ್ರತಿಭಟಿಸುತ್ತಿರುವ ರೈತರು. ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಡೆ ಒಡೆಯುತ್ತೇನೆ, ಹುಲಿಯನ್ನ ಕಾಡಿಗೆ ಅಟ್ಟುತ್ತೇನೆ: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಸವಾಲು
ನಿನ್ನೆ ಬಾಲಕನ ಕಾಲು ತಿಂದಿತ್ತು: ನಿನ್ನೆ ಬಾಲಕ ಚೇತನ್ ಮೇಲೆ ಹುಲಿ ದಾಳಿ ನಡೆದಿತ್ತು. ಬಾಲಕನ ಒಂದು ಕಾಲನ್ನು ಬಹುತೇಕ ತಿಂದು ಹಾಕಿತ್ತು. ಕೊಡಗಿನ ಪಲ್ಲೇರಿಯಲ್ಲಿ ದಾಳಿ ಮಾಡಿದ್ದ ಹುಲಿ. ತಡರಾತ್ರಿವರೆಗೂ ಶವ ತೆಗೆಯಲು ಅವಕಾಶ ನೀಡದ ಸ್ಥಳೀಯರು. ಸ್ಥಳದಲ್ಲಿ ಜಮಾಯಿಸಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ. ಸ್ಥಳಕ್ಕೆ ಉನ್ನತ ಅಧಿಕಾರಿಗಳು ಬರುವಂತೆ ತಿಳಿಸಿದ್ದಾರೆ. ಬಾಲಕನ ಕುಟುಂಬಕ್ಕೆ ಸ್ಥಳದಲ್ಲಿ ಎರಡುವರೆ ಲಕ್ಷ ಪರಿಹಾರ ಚೆಕ್ ವಿತರಣೆ ಮಾಡಲಾಗಿದೆ. ಬಳಿಕ ಶವ ತೆಗೆಯಲು ಅವಕಾಶ ನೀಡಿದ ಸ್ಥಳೀಯರು. ಸದ್ಯ ಕುಟ್ಟ ಆಸ್ಪತ್ರೆಯಲ್ಲಿ ಬಾಲಕನ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. \
ಇಬ್ಬರ ಸಾವು ಕೇಳಿ ಅಜ್ಜಿಯೂ ಸಾವು: ಕೊಡಗಿನ ಕಾಫಿ ತೋಟದಲ್ಲಿ ನರಭಕ್ಷಕ ಹುಲಿ ದಾಳಿಯ ಹಿನ್ನೆಲೆಯಲ್ಲಿ ಮೊಮ್ಮಗ ಮತ್ತು ತಾತನ ಸಾವಿನ ಸುದ್ದಿಯನ್ನ ಕೇಳಿ ಅಜ್ಜಿಯೂ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜಯಮ್ಮ (54) ಅಘಾತದಿಂದ ಸಾವನ್ನಪ್ಪಿದ ಅಜ್ಜಿಯಾಗಿದ್ದಾರೆ. ಇವರು ಹುಣಸೂರು ತಾಲೂಕು ಕೊಳುವಿಗೆ ಹಾಡಿಯಲ್ಲಿ ಮೃತಪಟ್ಟಿದ್ದಾರೆ. ಕೂಲಿ ಕೆಲಸಕ್ಕೆ ತೆರಳಿದ ಹನಗೋಡು ಹೋಬಳಿಯ ಕೊಳುವಿಗೆ ಗಿರಿಜನ ಹಾಡಿಯ ಆದಿವಾಸಿ ರಾಜು ಮೇಲೆ ಹುಲಿದಾಳಿ ಆಗಿತ್ತು. ಭಾನುವಾರ ಸಂಜೆ ಬಾಲಕ ಚೇತನ್ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು.
ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಆಕ್ರೋಶ:
ಹುಲಿದಾಳಿ ಆಗಿದ್ದರು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ 9 ಗಂಟೆವರೆಗೆ ಸ್ಥಳದಲ್ಲಿದ್ದು ಅಲ್ಲಿಂದ ವಾಪಸ್ ಆಗಿದ್ದಾರೆ. ಸಾಮಾನ್ಯವಾಗಿ ಹುಲಿ ಬೇಟೆ ಬಳಿಕ ಸುತ್ತಮುತ್ತಲ ಪ್ರದೇಶದಲ್ಲಿಯೇ ಇರುತ್ತದೆ. ಹೀಗಾಗಿ ಅರಣ್ಯ ಇಲಾಖೆ ಸಾಕಷ್ಟು ಜಾಗೃತೆ ವಹಿಸಬೇಕಾಗಿತ್ತು. ಆದರೆ ಬೆಳಿಗ್ಗೆ ಮತ್ತೊಬ್ಬರನ್ನು ಕೊಲ್ಲುವವರೆಗೂ ಸ್ಥಳಕ್ಕೆ ಯಾವೊಬ್ಬ ಅರಣ್ಯ ಅಧಿಕಾರಿಗಳೂ ಬಂದಿರಲಿಲ್ಲ. ಹೀಗಾಗಿ ತೋಟದಲ್ಲಿಯೇ ಇದ್ದ ಹುಲಿ ದಾಳಿಯಿಂದ ತಾತನೂ ಬಲಿಯಾಗಿದ್ದಾನೆ. ಅರಣ್ಯ ಇಲಾಖೆ ಅಲರ್ಟ್ ಆಗಿದ್ದರೆ ಮತ್ತೊಂದು ಬಲಿ ತಪ್ಪಿಸಬಹುದಿತ್ತು. ಆದರೆ ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಮತ್ತೊಂದು ಸಾವು ಆಗಿದೆ.
- ಮೋನಿಷ, ಎಂದು ಮೃತ ರಾಜು ಮಗಳು