Kodagu: ಬೆರಳಿಗೆ ಹಾಕಿದ್ದ ಉಂಗುರ ನುಂಗಿ ಸಾವನ್ನಪ್ಪಿದ 8 ತಿಂಗಳ ಮಗು: ಪಾಲಕರ ಆಕ್ರಂದನ
ಕೊಡಗು ಜಿಲ್ಲೆಯ ಕರಡಿಗೋಡು ಗ್ರಾಮದಲ್ಲಿ 8 ತಿಂಗಳ ಮಗುವೊಂದು ತನ್ನ ಕೈ ಬೆರಳಿಗೆ ಹಾಕಿದ್ದ ಉಂಗುರವನ್ನು ನುಂಗಿ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ.
ಕೊಡಗು (ಮಾ.23): ಮಕ್ಕಳನ್ನು ಎಷ್ಟೇ ಕಾಳಜಿಯಿಂದ ನೋಡಿಕೊಂಡರೂ ಕೂಡ ಕಡಿಮೆಯೇ. ಆದರೆ, ಕೊಡಗು ಜಿಲ್ಲೆಯ ಕರಡಿಗೋಡು ಗ್ರಾಮದಲ್ಲಿ 8 ತಿಂಗಳ ಮಗುವೊಂದು ತನ್ನ ಕೈ ಬೆರಳಿಗೆ ಹಾಕಿದ್ದ ಅವರ ತಾಯಿಯ ಉಂಗುರವನ್ನು ನುಂಗಿ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ.
ಮನೆಯಲ್ಲಿ ಹಿರಿಯರಿರಬೇಕು ಎಂದು ಹೇಳುವುದು ಇದಕ್ಕೇ.? ಮಕ್ಕಳನ್ನು ಸಾಕಣೆ ಮಾಡಲು ಹಿರಿಯರ ಸಲಹೆ ಭಾರೀ ಅಗತ್ಯ ಇರುತ್ತದೆ. ಇನ್ನು ಮಕ್ಕಳ ಕಡೆಗೆ ಗಮನಹರಿಸದಿದ್ದರೆ ಪ್ರಾಣಕ್ಕೇ ಸಂಚಕಾರ ಬರುತ್ತದೆ ಎಂದು ಹಲವು ಹೇಳುತ್ತಾರೆ. ಆದರೆ, ಕೊಡಗು ಜಿಲ್ಲೆಯ ಕರಡಿಗೋಡು ಗ್ರಾಮದಲ್ಲಿ ಮಗುವನ್ನು ನೋಡಿಕೊಳ್ಳುವ ವಿಚಾರದಲ್ಲಿ ತಂದೆ ತಾಯಿ ಎಡವಟ್ಟು ಮಾಡಿಕೊಂಡಿದ್ದಾರೆ. 8 ತಿಂಗಳ ಮಗುವಿನ ಬೆರಳಿಗೆ ಹಾಕಿದ್ದ ಉಂಗುರವನ್ನು ಕಚ್ಚಿಕೊಳ್ಳುತ್ತಾ ಆಟವಾಡುತ್ತಿತ್ತು. ಇದನ್ನು ಪ್ರತಿನಿತ್ಯ ನೋಡುತ್ತಿದ್ದ ಪಾಲಕರು ನಿರ್ಲಕ್ಷ್ಯ ಮಾಡಿದ್ದಾರೆ. ಆದರೆ, ಇಂದು ಮಗುವಿನ ಬೆರಳಿನಲ್ಲಿ ಇದ್ದ ಉಂಗುರ ಬಿಚ್ಚಿಕೊಂಡಿದ್ದು, ಗಂಟಲಿಗೆ ಸೇರಿಕೊಂಡಿದೆ. ನಂತರ ಉಸಿರಾಟ ಸಮಸ್ಯೆ ಉಂಟಾಗಿದ್ದು, ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ.
ಅನೈತಿಕ ಸಂಬಂಧ ಶಂಕೆ: ವಿವಾಹಿತ ಸೋದರಿಯನ್ನೇ ಕೊಂದು ನದಿಗೆಸೆದ ಸೋದರರು!
ಶಸ್ತ್ರಚಿಕಿತ್ಸೆ ಮಾಡಿದರೂ ಬದುಕಲಿಲ್ಲ ಜೀವ: ಕರಡಿಗೋಡು ಗ್ರಾಮದ ಮುನೀರ್ ಎಂಬುವರ 8 ತಿಂಗಳ ಮಗು ಸಾವನ್ನಪ್ಪಿದೆ. ಮಗುವಿನ ಬೆರಳಿಗೆ ಹಾಕಿದ್ದ ಉಂಗುರವನ್ನು ನಿನ್ನೆ ರಾತ್ರಿ ನುಂಗಿದ್ದ ಮಗು, ಉಸಿರಾಟ ಸಮಸ್ಯೆ ಅನುಭವಿಸುತ್ತಿಯತ್ತು. ತಕ್ಷಣವೇ ಪೋಷಕರು ಮಗುವನ್ನು ಕೊಡಗು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇನ್ನು ವೈದ್ಯರು ಕೂಡ ಮಗುವನ್ನು ಉಳಿಸುವ ನಿಟ್ಟಿನಲ್ಲಿ ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಿ ಉಂಗುರ ತೆಗೆದಿದ್ಧರು. ಆದರೂ ಚಿಕಿತ್ಸೆ ಫಲಕಾರಿಯಾಗದೆ, ಬೆಳಿಗ್ಗೆ ಮಗು ಸಾವನ್ನಪ್ಪಿದೆ.
ನಾಲ್ಕು ದಿನದ ಹಸುಳೆಯಲ್ಲಿ ತುಳಿದು ಸಾಯಿಸಿದ ಪೊಲೀಸರು:
ಗಿರಿದಿಹ್, ಜಾರ್ಖಂಡ್: ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯಲ್ಲಿ ಬುಧವಾರ ನಾಲ್ಕು ದಿನದ ನವಜಾತ ಶಿಶುವನ್ನು ಪೊಲೀಸ್ ಅಧಿಕಾರಿಯೊಬ್ಬರು ತುಳಿದು ಸಾಯಿಸಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ತನಿಖೆಗೆ ಆದೇಶಿಸಿದ್ದಾರೆ. ಗಿರಿದಿಹ್ ಜಿಲ್ಲೆಯ ಕೊಸೊಗೊಂಡೋಡಿಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಈ ಮೃತ ಮಗುವಿನ ಅಜ್ಜನನ್ನು ಹುಡುಕಲು ಪೊಲೀಸರು ಅವರ ಮನೆಗೆ ತೆರಳಿದ್ದರು. ಈ ವೇಳೆ ಕೊಠಡಿಯೊಂದರಲ್ಲಿ ಮಲಗಿದ್ದ ನವಜಾತ ಶಿಶುವಿನ ಮೇಲೆ ಪೊಲೀಸರು ಕಾಲಿಟ್ಟಿದ್ದಾರೆ ಎನ್ನಲಾಗಿದೆ.
ಅಯ್ಯೋ ಕಂದಮ್ಮ..! 4 ದಿನದ ಹಸುಗೂಸನ್ನು ತುಳಿದು ಸಾಯಿಸಿದ ಪೊಲೀಸರು: ತನಿಖೆಗೆ ಆದೇಶಿಸಿದ ಸಿಎಂ
ಆರೋಪಿ ಹುಡುಕಾಟಕ್ಕೆ ಬಂದು ಮಗು ತುಳಿದರು: ದಿಯೋರಿ ಪೊಲೀಸ್ ಠಾಣೆಯ ಉಸ್ತುವಾರಿ ಸಂಗಮ್ ಪಾಠಕ್ ನೇತೃತ್ವದ ತಂಡವು ಆರೋಪಿ ಭೂಷಣ್ ಪಾಂಡೆ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ ನಂತರ ಅವರ ಮನೆಗೆ ಹೋಗಿತ್ತು. ಪೊಲೀಸರನ್ನು ನೋಡಿದ ಭೂಷಣ್ ಅವರ ಕುಟುಂಬದ ಸದಸ್ಯರೆಲ್ಲರೂ ನವಜಾತ ಶಿಶುವನ್ನು ಮನೆಯಲ್ಲಿಯೇ ಬಿಟ್ಟು ಮನೆಯಿಂದ ಓಡಿಹೋಗಿದ್ದರು ಎಂದು ಸ್ತಳೀಯ ಜನರು ಮಾಹಿತಿ ನೀಡಿದ್ದಾರೆ. ಅಲ್ಲದೆ, ಪೊಲೀಸರು ಆರೋಪಿಗಾಗಿ ಮನೆಯ ಮೂಲೆ ಮೂಲೆಯಲ್ಲಿ ಹುಡುಕುತ್ತಿದ್ದಾಗ ನಾಲ್ಕು ದಿನದ ಮಗು ಒಳಗೆ ಮಲಗಿತ್ತು ಎಂದು ಮೃತ ಮಗುವಿನ ತಾಯಿ ನೇಹಾದೇವಿ ಹೇಳಿದ್ದಾರೆ. ಬಳಿಕ, ಪೊಲೀಸರು ಮನೆಯಿಂದ ಹೊರ ಹೋದ ಬಳಿಕ, ನಾವು ಮನೆ ತಲುಪಿದಾಗ ತನ್ನ ಮಗು ಶವವಾಗಿ ಬಿದ್ದಿತ್ತು ಎಂದು ತಾಯಿ ಬೇಸರ ಪಟ್ಟುಕೊಂಡು ಹೇಳಿದ್ದಾರೆ.