Asianet Suvarna News Asianet Suvarna News

ಮೈಸೂರು: ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಚಿನ್ನದ ವ್ಯಾಪಾರಿ, ಪತ್ನಿಗೆ ಚಾಕು ಇರಿತ

ಮಹಿಳೆಯೊಂದಿಗೆ ಅಪರಿಚಿತ ವ್ಯಕ್ತಿಯು ಆಹ್ವಾನ ಪತ್ರಿಕೆ ನೀಡಲು ಮನೆಗೆ ಬಂದಿದ್ದರು. ಪತಿ ಕಿರುಚಿದ್ದು ಕೇಳಿ ಹೊರ ಬಂದು ನೋಡಿದಾಗ ಅಪರಿಚಿತ ಅವರ ಹೊಟ್ಟೆ ಹಾಗೂ ಕೈಗೆ ಚುಚ್ಚಿ ಹಲ್ಲೆ ಮಾಡುತ್ತಿದ್ದ. ನಿನಗೆ ಏನು ಬೇಕೆಂದು ಕೇಳಿದಾಗ, ನಿಮ್ಮ ಮಗ ಬೇಕೆಂದು ಹೇಳಿದ. ನನ್ನ ಬಾಯಿಗೆ ಬಟ್ಟೆ ತುರುಕಿದ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಕೈಗೆ ಚಾಕುವಿನಿಂದ ಇರಿದ ದುಷ್ಕರ್ಮಿ. 

Knife Stab to Gold Trader and His Wife in Mysuru grg
Author
First Published Aug 18, 2023, 3:30 AM IST

ಮೈಸೂರು(ಆ.18):  ಮನೆಗೆ ಆಹ್ವಾನ ಪತ್ರ ನೀಡುವ ನೆಪದಲ್ಲಿ ಆಗಮಿಸಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಚಿನ್ನದ ವ್ಯಾಪಾರಿ ಮತ್ತು ಅವರ ಪತ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ಬುಧವಾರ ನಡೆದಿದೆ.

ಹೂಟಗಳ್ಳಿಯ ನಿವಾಸಿ ಬಾಬುರಾವ್‌ ಮತ್ತು ಅವರ ಪತ್ನಿ ಕಮಲಾಬಾಯಿ ಎಂಬವರೇ ಗಾಯಗೊಂಡವರು. ಬುಧವಾರ ಮಧ್ಯಾಹ್ನ ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಮಹಿಳೊಂದಿಗೆ ಆಗಮಿಸಿದ ವ್ಯಕ್ತಿ ಇಬ್ಬರಿಗೂ ಚಾಕುವಿನಿಂದ ಇರಿದು ಪರಾರಿಯಾಗಿದ್ದು, ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಲ್ಲಿ ಪೋಕ್ಸೋ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ: ಸ್ವಗ್ರಾಮಕ್ಕೆ ಮೃತದೇಹ!

ಮಹಿಳೆಯೊಂದಿಗೆ ಅಪರಿಚಿತ ವ್ಯಕ್ತಿಯು ಆಹ್ವಾನ ಪತ್ರಿಕೆ ನೀಡಲು ಮನೆಗೆ ಬಂದಿದ್ದರು. ಪತಿ ಕಿರುಚಿದ್ದು ಕೇಳಿ ಹೊರ ಬಂದು ನೋಡಿದಾಗ ಅಪರಿಚಿತ ಅವರ ಹೊಟ್ಟೆ ಹಾಗೂ ಕೈಗೆ ಚುಚ್ಚಿ ಹಲ್ಲೆ ಮಾಡುತ್ತಿದ್ದ. ನಿನಗೆ ಏನು ಬೇಕೆಂದು ಕೇಳಿದಾಗ, ನಿಮ್ಮ ಮಗ ಬೇಕೆಂದು ಹೇಳಿದ. ನನ್ನ ಬಾಯಿಗೆ ಬಟ್ಟೆ ತುರುಕಿದ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಕೈಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಗಾಯಾಳು ಕಮಲಾಬಾಯಿ ದೂರು ನೀಡಿದ್ದಾರೆ. ಈ ಸಂಬಂಧ ವಿಜಯನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow Us:
Download App:
  • android
  • ios