ವೈದ್ಯರ ಗಾಂಜಾಲೋಕ: ವಿದ್ಯಾರ್ಥಿಗಳು ಅಮಾನತು, ವೈದ್ಯರಿಗೆ ಗೇಟ್ ಪಾಸ್ ಕೊಟ್ಟ ಕೆಎಂಸಿ ಆಸ್ಪತ್ರೆ!
ಮಂಗಳೂರಿನಲ್ಲಿ ವೈದ್ಯರು ಮತ್ತು ವೈದ್ಯರ ಗಾಂಜಾ ಲೋಕ ಪ್ರಕರಣ ಸಂಬಂಧ ಮಂಗಳೂರಿನ ಕೆಎಂಸಿ ಆಸ್ಪತ್ರೆ ಆಡಳಿತ ಮಂಡಳಿ ಕೊನೆಗೂ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ದ ಶಿಸ್ತು ಕ್ರಮ ಕೈಗೊಂಡಿದೆ. ಈ ಮೂಲಕ ನಮ್ಮ ಸಂಸ್ಥೆ ಡ್ರಗ್ಸ್ ವಿಚಾರದಲ್ಲಿ ಪೊಲೀಸರ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಜ.20): ಮಂಗಳೂರಿನಲ್ಲಿ ವೈದ್ಯರು ಮತ್ತು ವೈದ್ಯರ ಗಾಂಜಾ ಲೋಕ ಪ್ರಕರಣ ಸಂಬಂಧ ಮಂಗಳೂರಿನ ಕೆಎಂಸಿ ಆಸ್ಪತ್ರೆ ಆಡಳಿತ ಮಂಡಳಿ ಕೊನೆಗೂ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ದ ಶಿಸ್ತು ಕ್ರಮ ಕೈಗೊಂಡಿದೆ. ಈ ಮೂಲಕ ನಮ್ಮ ಸಂಸ್ಥೆ ಡ್ರಗ್ಸ್ ವಿಚಾರದಲ್ಲಿ ಪೊಲೀಸರ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದೆ.
ಡ್ರಗ್ ಕೇಸ್(Drug case) ನಲ್ಲಿ ಸಿಕ್ಕಿ ಬಿದ್ದ ಇಬ್ಬರು ವೈದ್ಯರು(Doctors) ಹಾಗೂ ಏಳು ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಇಬ್ಬರು ವೈದ್ಯರಿಗೆ ಕೆಎಂಸಿ ಆಸ್ಪತ್ರೆ(KMC Hospital)ಯಿಂದ ಗೇಟ್ ಪಾಸ್ ನೀಡಲಾಗಿದೆ. ಇಬ್ಬರು ವೈದ್ಯರನ್ನು ವಜಾ ಮಾಡಿ ಗುತ್ತಿಗೆ ರದ್ದುಪಡಿಸಿರುವ ಆಸ್ಪತ್ರೆ ಆಡಳಿತ ಮಂಡಳಿ ಸದ್ಯ ಕಠಿಣ ಕ್ರಮ ಕೈಗೊಂಡಿದೆ.
ಗಾಂಜಾ ಸೇವನೆ ಆರೋಪ: ಪೊಲೀಸರ ವಿಚಾರಣೆಯಿಂದ ಮನನೊಂದ ಯುವಕ ಆತ್ಮಹತ್ಯೆ
ಕೆಎಂಸಿ ಮೆಡಿಕಲ್ ಆಫೀಸರ್(KMC Medical Officer) ಆಗಿದ್ದ ಕೇರಳ ಮೂಲದ ವೈದ್ಯ ಡಾ.ಸಮೀರ್(Dr sameer)(32) ಮತ್ತು ಮೆಡಿಕಲ್ ಸರ್ಜನ್ ಆಗಿದ್ದ ತಮಿಳುನಾಡು ಮೂಲದ ಮಣಿಮಾರನ್(Manimaran) ಮುತ್ತು(28) ವಜಾ ಮಾಡಲಾಗಿದೆ. ಉಳಿದ ಏಳು ವೈದ್ಯಕೀಯ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ.
ಅಮಾನತ್ತು ಮಾಡಲಾದ ಕೆಎಂಸಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು
- ಡಾ. ನದಿಯಾ ಸಿರಾಜ್(24)- ಕೇರಳ- ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿ
- ಡಾ.ವರ್ಷಿಣಿ ಪ್ರತಿ(26)- ಆಂಧ್ರಪ್ರದೇಶ- ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿ
- ಡಾ.ಹೀರಾ ಬಸಿನ್(26)- ಮಹಾರಾಷ್ಟ್ರ- ಎಂ.ಬಿ.ಬಿ.ಎಸ್
- ಡಾ.ಕ್ಷಿತಿಜ್ ಗುಪ್ತ(23)-ದೆಹಲಿ- ಎಂ.ಎಸ್. ಆರ್ಥೋ ವಿದ್ಯಾರ್ಥಿ
- ಡಾ.ವರ್ಷ ಕುಮಾರ್(27)-ತುಮಕೂರು- ಪೆಥಾಲಜಿ ಎಂ.ಡಿ ವಿದ್ಯಾರ್ಥಿ
- ಡಾ.ಕಿಶೋರಿಲಾಲ್ ರಾಮ್ ಜೀ(38)-ಎಂ.ಬಿ.ಬಿ.ಎಸ್ ವಿದ್ಯಾರ್ಥಿ ( ಫೇಲ್ ಆಗಿ 15 ವರ್ಷದಿಂದ ವಿದ್ಯಾಭ್ಯಾಸ) ಕೆಎಂಸಿ ಡೆಂಟಲ್ ಕಾಲೇಜು ವಿದ್ಯಾರ್ಥಿನಿ
- ಡಾ.ರಿಯಾ ಚಡ್ಡ(22)-ಪಂಜಾಬ್- ಡೆಂಟಲ್ ಬಿಡಿಎಸ್ ವಿದ್ಯಾರ್ಥಿನಿಯನ್ನು ಅಮಾನತು ಮಾಡಲಾಗಿದೆ.
ಮಂಗಳೂರು: ಗಾಂಜಾ ಕೇಸಲ್ಲಿ ಮತ್ತಿಬ್ಬರು ವೈದ್ಯರ ಬಂಧನ
ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್(Commissioner of Police, Mangalore) ಗೆ ಕೆಎಂಸಿ ಡೀನ್ ಉನ್ನಿಕೃಷ್ಣನ್(KMC Dean B Unnikrishnan) ಮಾಹಿತಿ ನೀಡಿದ್ದು, ಮಂಗಳೂರು ಕಮಿಷನರ್ ಕಚೇರಿಗೆ ಆಗಮಿಸಿ ಶಿಸ್ತು ಕ್ರಮ ತೆಗೆದುಕೊಂಡ ಬಗ್ಗೆ ಪತ್ರವನ್ನು ಡೀನ್ ಉನ್ನಿಕೃಷ್ಣನ್ ಕಮಿಷನರ್ ಗೆ ಹಸ್ತಾಂತರ ಮಾಡಿದ್ದಾರೆ.