Belgum crime: ಚಾಕೊಲೇಟ್‌ ಆಮಿಷವೊಡ್ಡಿ ಬಾಲಕಿ ಕಿಡ್ನಾಪ್‌ ಯತ್ನ

ಬೆಳಗಾವಿ ನಗರದಲ್ಲಿ ಹಾಡಹಗಲೇ ಬಾಲಕಿಯನ್ನು ಅಪಹರಣ ಮಾಡಲು ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ನಗರ ಪೊಲೀಸರು ಬಂಧಿಸಿ, ತೀವ್ರ ವಿಚಾರಣೆ ಗೊಳಪಡಿಸಿದ್ದಾರೆ.

Kidnapping minor girl attempt rape lured by chocolate in belgum crime rav

ಬೆಳಗಾವಿ (ಜು.13) : ನಗರದಲ್ಲಿ ಹಾಡಹಗಲೇ ಬಾಲಕಿಯನ್ನು ಅಪಹರಣ ಮಾಡಲು ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ನಗರ ಪೊಲೀಸರು ಬಂಧಿಸಿ, ತೀವ್ರ ವಿಚಾರಣೆ ಗೊಳಪಡಿಸಿದ್ದಾರೆ. ಇಲ್ಲಿನ ಮಾಳಮಾರುತಿ ನಗರದ ಗಜಾನನ ಪಾಟೀಲ (35) ಬಂಧಿತ ಆರೋಪಿ. ನಗರದ ಹಿಂದವಾಡಿ ಪ್ರದೇಶದಲ್ಲಿರುವ ಅಂಚೆ ಕಚೇರಿ ಹತ್ತಿರ ಮಂಗಳವಾರ ಸಂಜೆ ಟ್ಯೂಷನ್‌ ಗೆಂದು ಹೋಗುತ್ತಿದ್ದ 9 ವರ್ಷ ಬಾಲಕಿಗೆ ಚಾಕೋಲೇಟ್‌ ಕೊಡುವುದಾಗಿ ಆಮಿಷಯೊಡ್ಡಿ ಬಳಿಕ ಬಾಲಕಿಯ ಅಪಹರಣಕ್ಕೆ ಮುಂದಾಗಿ ಆಕೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಓಡಲು ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಚೀರಾಟದ ಧ್ವನಿ ಕೇಳಿದ ಸ್ಥಳೀಯರು ಅಪಹರಣಕಾರರನ್ನು ಬೆನ್ನಟ್ಟಿದ್ದಾರೆ. ಎಚ್ಚೆತ್ತು ಬಾಲಕಿಯನ್ನು ಅಲ್ಲಿಯೇ ಬಿಟ್ಟು ಆರೋಪಿ ಪರಾರಿಯಾ ಗಿದ್ದಾನೆ. ಈ ಪ್ರಕರಣದ ದೃಶ್ಯ ಸ್ಥಳೀಯ ಕಟ್ಟಡವೊಂದರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಟಿಳಕವಾಡಿ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿತ್ತು. ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು ಘಟನೆ ನಡೆದ 12 ಗಂಟೆಯೊಳಗೆ ಆರೋಪಿಗೆ ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಗಜಾನನ ಪಾಟೀಲನನ್ನು ಉದ್ಯಮಬಾಗ ಪೊಲೀಸ್‌ ಠಾಣೆಯಲ್ಲಿರಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಅಯ್ಯೋ ಪಾಪಿ: 5 ವರ್ಷದ ಬಾಲಕಿ ಮೇಲೆ 60 ವರ್ಷದ ಮುದುಕನಿಂದ ರೇಪ್‌; ಸಂತ್ರಸ್ತೆಗೆ ಬೆದರಿಕೆ

ಮಕ್ಕಳಿಬ್ಬರಿಗೆ ವಿಷ ಹಾಕಿದ ತಾಯಿ, ಬಾಲಕಿ ಸಾವು

ಕೊಳ್ಳೇಗಾಲ: ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿಯೇ ತನ್ನ ಮಕ್ಕಳಿಬ್ಬರಿಗೆ ವಿಷವುಣಿಸಿ ತಾನೂ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಓರ್ವ ಬಾಲಕಿ ಮೃತಪಟ್ಟಿದ್ದು, ತಾಯಿ ಮತ್ತೊಬ್ಬ ಮಗ ಜೀವನ್ಮರಣದ ಹೋರಾಟ ನಡೆಸುತ್ತಿರುವ ಘಟನೆ ಮಧುವನಹಳ್ಳಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಜರುಗಿದೆ. ಗ್ರಾಮದ ಷಣ್ಮುಗ ಎಂಬಾತನ ಪುತ್ರಿ ಸಿಂಧು (8) ಮೃತಪಟ್ಟಬಾಲಕಿ. ಪತ್ನಿ ಶೀಲಾ (30), ಪುತ್ರ ಯಶವಂತ್‌ (12) ಆಸ್ಪತ್ರೆ ಸೇರಿದ್ದಾರೆ. ಪತಿ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಇದರಿಂದ ನೊಂದ ಪತ್ನಿ ಶೀಲಾ ಮಕ್ಕಳಿಗೆ ವಿಷವುಣಿಸಿ ತಾನೂ ಕುಡಿದಿದ್ದಳು. ಇವರ ಚೀರಾಟ ಕೇಳಿ ಗ್ರಾಮಸ್ಥರು ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಳು.

ಕೌಟುಂಬಿಕ ಕಲಹಕ್ಕೆ ಬೇಸತ್ತ ಶೀಲಾ ಬುಧವಾರ ಬೆಳಗ್ಗೆ ತನ್ನೊಟ್ಟಿಗೆ ಇಬ್ಬರು ಮಕ್ಕಳಿಗೂ ವಿಷ ಕುಡಿಸಿದ್ದಾಳೆ. ಬಳಿಕ ಮೂವರ ರೋದನೆ ಕಂಡ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿ ದ್ದಾರೆ. ಈ ವೇಳೆ ಆಸ್ಪತ್ರೆ ಸೇರುವ ಮುನ್ನವೇ ಬಾಲಕಿ ಸಿಂಧು ಮೃತಪಟ್ಟಿದ್ದಾಳೆ.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿರೋಧ, 80 ಬಾಲಕಿಯರಿಗೆ ವಿಷವುಣಿಸಿದ ಶಾಲೆ!

ಮಂಗಳವಾರ ರಾತ್ರಿ ಪತಿ ಷಣ್ಮುಗ ಪಾನಮತ್ತನಾಗಿ ಮನೆಯಲ್ಲಿ ಗಲಾಟೆ ನಡೆಸಿದ್ದು, ಅಲ್ಲದೆ ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದ, ಇದರಿಂದ ಮನನೊಂದ ಪತ್ನಿ ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದಾಳೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios