ಕತ್ತು ಸೀಳಿ ಬರ್ಬರ ಹತ್ಯೆ, ಕೋಳಿ ಸಾಗಾಣಿಕೆ ಮಾಡುತ್ತಿದ್ದ ಯುವಕನ ಕೊಲೆಯ ಸುತ್ತ ಹಲವು ಅನುಮಾನ
ಯುವಕನೊರ್ವನನ್ನು ಕತ್ತು ಸೀಳಿ ಬರ್ಬರ್ ವಾಗಿ ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಳಿ ಸಾಗಾಣಿಕೆ ಕೆಲಸ ಮಾಡುತ್ತಿದ್ದ ಯುವಕನ ಕೊಲೆಯ ಸುತ್ತ ಹಲವಾರು ಅನುಮಾನಗಳು ಹುಟ್ಟಿಕೊಂಡಿದೆ.
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್,
ಕೋಲಾರ (ಜು.10): ಯುವಕನೊರ್ವನನ್ನು ಕತ್ತು ಸೀಳಿ ಬರ್ಬರ ವಾಗಿ ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ. ಕೋಳಿ ಸಾಗಾಣಿಕೆ ಕೆಲಸ ಮಾಡುತ್ತಿದ್ದ ಯುವಕನ ಕೊಲೆಯ ಸುತ್ತ ಹಲವಾರು ಅನುಮಾನಗಳು ಹುಟ್ಟಿಕೊಂಡಿದ್ದು,ಕುಡಿದ ಮತ್ತಿನಲ್ಲಿ ಕೊಲೆ ನಡೆಯಿತಾ, ಇಲ್ಲಾ ಉದ್ದೇಶ ಪೂರ್ವಕವಾಗಿ ಕೊಲೆ ಮಾಡಲಾಗಿದ್ಯಾ ಅನ್ನೋ ಹಲವು ಅನುಮಾನಗಳು ಇದೀಗ ಮೂಡಿದೆ.
ಕೋಲಾರದ ಹೊರವಲಯದ ಎಪಿಎಂಸಿ (APMC) ಬಳಿಯಿರುವ ಲಕ್ಷ್ಮೀ ಬಾರ್ ಮುಂದೆ ಯುವಕನೋರ್ವನನ್ನು ಯಾರು ದುಷ್ಕರ್ಮಿಗಳು ಕತ್ತು ಸೀಳಿ ಬರ್ಬರ್ ವಾಗಿ ಕೊಲೆ ಮಾಡಲಾಗಿದೆ.ಕೋಲಾರದ ಶಾಹೀದ್ ನಗರದ ಅಮೀರ್ ಖಾನ್ ಅಲಿಯಾಸ್ ತನು (22) ಬರ್ಬರ್ ವಾಗಿ ಕೊಲೆಯಾದ ಯುವಕ. ಅಮೀರ್ ಖಾನ್ ಜು.9ರಂದು ಕೆಲಸಕ್ಕೆಂದು ಮನೆಯಿಂದ ಹೊರ ಬಂದವನು ಇಂದು ಕೊಲೆಯಾಗಿದ್ದಾನೆ. ಕೋಳಿ ಸಾಗಾಣಿಕೆ ಮಾಡುವ ಅಮೀರ್ ಖಾನ್ ಮುಂಗೋಪಿ ಜೊತೆಗೆ ಕುಡಿದು ಗಲಾಟೆ ಮಾಡುತ್ತಿದ, ಪ್ರತಿ ದಿನ ದುಡಿದ ಹಣವನ್ನು ಕುಡಿತಕ್ಕೆ ಮೀಸಲಿಟ್ಟು ಮನೆಯಲ್ಲಿ ಬಂದು ಗಲಾಟೆ ಮಾಡುತ್ತಿದ್ದ. ಈ ಬಗ್ಗೆ ಪೋಷಕರು ಅನೇಕ ಬಾರಿ ಬುದ್ದಿವಾದ ಹೇಳಿದರು ಸಹ ಪ್ರಯೋಜನವಾಗಿರಲಿಲ್ಲ, ಕುಡಿದು ಬಂದು ಮನೆಯಲ್ಲಿ ಮತ್ತು ಮನೆಯ ಸುತ್ತಮುತ್ತಲಿನ ಜನರ ಮೇಲೆ ಎರಗಿ ಗಲಾಟೆ ಮಾಡುವ ಪ್ರವೃತ್ತಿ.
ಪುನೀತ್ ರಾಜ್ ಕುಮಾರ್ ಪೋಟೊ ತೆಗೆಸಿದ್ದೆ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ
ನಿನ್ನೆ ಬೆಳಗ್ಗೆ ಮನೆಯಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವನು ರಾತ್ರಿ ಮನೆಗೆ ಬರಲಿಲ್ಲ, ಮನೆಯ ಅಕ್ಕಪಕ್ಕದವರು ಇಂದು ಮಗನನ್ನು ಯಾರು ಕತ್ತು ಸೀಳಿ ಕೊಲೆ ಮಾಡಲಾಗಿದೆ ಎಂದು ತಿಳಿಸಿದ ಮೇಲೆಯೇ ತಮಗೆ ಗೊತ್ತಾಗಿದ್ದು ಎನ್ನುತ್ತಾರೆ ಪೋಷಕರು.
ಇನ್ನು ಅಮೀರ್ ಖಾನ್ ಹಿನ್ನೆಲೆ ಕೂಡ ಅಷ್ಟಾಗಿ ಚೆನ್ನಾಗಿ ಇರಲಿಲ್ಲ, ಕುಡಿದು ಆಮಲಿನಲ್ಲಿ ಎಲ್ಲೆಂದರಲ್ಲಿ ಇರುತ್ತಿದ್ದ. ಕೋಳಿ ಸಾಗಾಣಿಕೆ ಕೆಲಸಕ್ಕೆ ಹೋಗುತ್ತಿದ ಅಮೀರ್ ಖಾನ್ ಬಂದ ಹಣದಲ್ಲಿ ಮನೆಗೂ ಒಂದು ರೂಪಾಯಿ ಸಹ ನೀಡುತ್ತಿರಲಿಲ್ಲ, ದುಡಿದ ಸಂಪೂರ್ಣ ಹಣವನ್ನು ಕುಡಿದು ಮಜಾ ಮಾಡುತ್ತಿದ್ದ. ಮದುವೆ ಮಾಡೋಣ ಎಂದರೆ ಹೆಂಡತಿ ಮಕ್ಕಳನ್ನು ನೋಡುವುದಿಲ್ಲ. ಸ್ಪಲ್ಪ ದಿನ ನೋಡೋಣ ಸರಿ ಹೋದರೆ ಮದುವೆ ಮಾಡೋಣ ಎಂದು ಕುಟುಂಬಸ್ಥರು ನಿರ್ಧಾರ ಮಾಡಿದ್ದರು.
ಟೊಮೆಟೊ ಬೆಲೆ ಗಗನಕ್ಕೆ, ಕೋಲಾರದಿಂದ 2 ಲಕ್ಷ ರೂ ಮೌಲ್ಯದ ಟೊಮೆಟೊ ತುಂಬಿದ
ಆದ್ರೆ ಕುಡಿತದ ಚಟಕ್ಕೆ ಬಿದ್ದ ಅಮೀರ್ ಖಾನ್ ಕೊಲೆಯಾಗಿ ಹೋಗಿದ್ದಾನೆ. ನಿನ್ನೆ ಸಹ ಕೆಲಸಕ್ಕೆಂದು ಹೋಗಿ ಎಪಿಎಂಸಿ ಬಳಿಯಿರುವ ಲಕ್ಷ್ಮೀ ಬಾರ್ ನಲ್ಲಿ ಎಣ್ಣೆ ಪಡೆದು ಕುಡಿದಿದ್ದಾನೆ. ಕುಡಿಯುವ ಸಂದರ್ಭದಲ್ಲಿ ಕಿತ್ತಾಟ ನಡೆದು ಕೊಲೆಯಾಗಿರಬಹುದು ಎಂಬುದು ಆರೋಪವಾಗಿದೆ. ಆದ್ರೆ ಅಮೀರ್ ಖಾನ್ ಜೊತೆ ಯಾರಾರು ಇದ್ದರೂ ಯಾವ ವಿಷಯಕ್ಕೆ ಗಲಾಟೆ ನಡೆದಿದೆ ಎಂಬುದು ಸತ್ಯಾಂಶ ಪೊಲೀಸರಿಂದ ಹೊರಬರಬೇಕಾಗಿದೆ.
ಇನ್ನು ಕೋಲಾರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾರ್ ನ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಶ್ವಾನದಳ ಕೊಲೆಯಾದ ಸ್ಥಳದಿಂದ ಒಂದಿಷ್ಟು ದೂರ ಹೋಗಿ ಮತ್ತೆ ವಾಪಸ್ಸು ಬಂದಿದೆ. ಬೆರಳಚ್ಚು ತಜ್ಞರು ಸಹ ಇಂಚಿಚು ಶೋಧ ಕಾರ್ಯ ನಡೆಸಿದರು. ಒಟ್ಟಾರೆ ಸುಂದರವಾದ ಬದುಕನ್ನು ಕಟ್ಟಿಕೊಂಡು ಬಾಳಬೇಕಾಗಿದ್ದ ಯುವಕ ಕುಡಿತದ ಚಟಕ್ಕೆ ಬಿದ್ದು ಚಿಕ್ಕವಯಸ್ಸಿನಲ್ಲಿಯೇ ಬರ್ಬರ್ ವಾಗಿ ಕೊಲೆ ಆಗಿರುವುದು ದುರಂತ.