Asianet Suvarna News Asianet Suvarna News

ಕೆ.ಜಿ.ಹಳ್ಳಿ ಗಲಭೆ ಪ್ರಕರಣ; ಕೊಪ್ಪಳ ಪಿಎಫ್ಐ ಸಂಘಟನೆ ಜಿಲ್ಲಾಧ್ಯಕ್ಷ ಬಂಧನ

ಇಡೀ ದೇಶಾದ್ಯಂತ ಇಂದು ಎನ್ಐಎ ದಾಳಿ ನಡೆಸಿ ಹಲವರನ್ನು ಬಂಧಿಸಿದೆ.‌ಜೊತೆಗೆ ಬೆಂಗಳೂರಿನ ಕೆ ಜಿ ಹಳ್ಳಿ ಗಲಾಟೆಗೆ ಸಂಬಂಧಿಸಿದಂತೆಯೂ ಸಹ ಹಲವರನ್ನು ವಶಕ್ಕೆ ಪಡೆಯಲಾಗಿದೆ.‌ತಡ ರಾತ್ರಿ ಕೊಪ್ಪಳದಲ್ಲಿ ಪಿಎಫ್‌ಐ ಜಿಲ್ಲಾ ಅಧ್ಯಕ್ಷನನ್ನು ಬಂಧಿಸಿ ಪೊಲೀಸರು  ಬೆಂಗಳೂರಿಗೆ ಕರೆದೊಯ್ದಿದ್ದಾರೆ.

KG Hall riot case PFI  District president arrested at koppal rav
Author
First Published Sep 22, 2022, 11:58 AM IST

ವರದಿ- ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಸೆ.22) : ಇಡೀ ದೇಶಾದ್ಯಂತ ಇಂದು ಎನ್ಐಎ ದಾಳಿ ನಡೆಸಿ ಹಲವರನ್ನು ಬಂಧಿಸಿದೆ.‌ಜೊತೆಗೆ ಬೆಂಗಳೂರಿನ ಕೆ ಜಿ ಹಳ್ಳಿ ಗಲಾಟೆಗೆ ಸಂಬಂಧಿಸಿದಂತೆಯೂ ಸಹ ಹಲವರನ್ನು ವಶಕ್ಕೆ ಪಡೆಯಲಾಗಿದೆ.‌ಇದರ ಭಾಗವಾಗಿ ಕೊಪ್ಪಳದಲ್ಲಿಯೂ ಸಹ ಒರ್ವನನ್ನು ಬಂಧನ ಮಾಡಲಾಗಿದೆ. ಅಷ್ಟಕ್ಕೂ ಬಂಧನವಾಗಿರುವ ವ್ಯಕ್ತಿಯಾದರೂ ಯಾರು ಗೊತ್ತಾ? ಮುಂದೆ ಓದಿ.

NIA Raid: ಪಿಎಫ್‌ಐ - ಉಗ್ರ ಸಂಘಟನೆಗಳ ನಂಟಿನ ಬಗ್ಗೆ ತನಿಖೆ: 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ

ಇಂದು ತಡರಾತ್ರಿ 3 ಗಂಟೆ ಸುಮಾರಿಗೆ ಪೊಲೀಸರು ಬಂಧನ ಮಾಡಿರುವ ವ್ಯಕ್ತಿ ಯಾರು ಅಂತ ನೋಡೋದಾದ್ರೆ ಪಿಎಫ್ಐ(PFI) ಸಂಘಟನೆಯ ಜಿಲ್ಲಾಧ್ಯಕ್ಣ ಅಬ್ದುಲ್ ಫಯಾಜ್ ಅಲಿಯಾಸ್ ಮಹಮ್ಮದ್ ಫಯಾಜ್ ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದೆ. ಕಳೆದ ವರ್ಷ ನಡೆದ ಬೆಂಗಳೂರಿನ ಗಲಾಭೆ ಕೇಸ್ ಮಹಮ್ಮದ್ ಫಯಾಜ್ ಪಾತ್ರವೂ ಇದೆ ಎನ್ನಲಾಗಿದೆ.

2020 ರ ಅಗಸ್ಟ್ 13 ರಂದು ಬೆಂಗಳೂರಿ(Bengaluru)ನ ಕೆ ಜಿ ಹಳ್ಳಿ(K.G.Halli)ಯಲ್ಲಿ ಗಲಾಟೆ ನಡೆದಿತ್ತು. ಈ ಪ್ರಕರಣದಲ್ಲಿ ಕೆಲವರು ಶಾಸಕ ಅಖಂಡ ಶ್ರೀವಾಸಮೂರ್ತಿ(MLA akhanda Shrinivasmoorthy) ಮನೆ ಮೇಳೆ ದಾಳಿ ನಡೆಸಿ, ಗಲಾಟೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಹಲವರ ಮೇಲೆ ಪ್ರಕರ ದಾಖಲಾಗಿತ್ತು. ಈ ಗಲಾಟೆ ಕುರಿತು ಕೆ ಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಖ್ಯೆ 328  ರಲ್ಲಿ ಕೊಪ್ಪಳ(Koppala) ಪಿಎಫ್ಐ(PFI) ಸಂಘಟನೆಯ ಜಿಲ್ಲಾಧ್ಯಕ್ಷ ಅಬ್ದುಲ್ ಫಯಾಜ್(Abdul Fayaz) ಎನ್ನುವ ವ್ಯಕ್ತಿ ಭಾಗಿಯಾಗಿದ್ದ. ಈ ಹಿನ್ನಲೆಯಲ್ಲಿ ಬೆಂಗಳೂರು ಪೊಲೀಸರ ಸೂಚನೆ ಮೇರೆಗೆ ಅಬ್ದುಲ್ ಫಯಾಜ್ ನನ್ನು ಬಂಧಿಸಲಾಗಿದೆ.

ಕೊಪ್ಪಳ ಪೊಲೀಸರಿಂದ ಬಂಧನ :

ಬೆಂಗಳೂರು ಪೊಲೀಸರ ಸೂಚನೆ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಕೊಪ್ಪಳ ಪೊಲೀಸರು, ಕೆ ಜಿ ಹಳ್ಳಿ ಗಲಾಟೆ ಕುರಿತು ಪಿಎಫ್ಐ ಸಂಘಟನೆಯ ಜಿಲ್ಲಾಧ್ಯಕ್ಣ ಅಬ್ದುಲ್ ಫಯಾಜ್ ರನ್ನ ತಡರಾತ್ರಿ ಬಂಧಿಸಿದ್ದಾರೆ. ತಡರಾತ್ರಿ  ಸುಮಾರು 3 ಗಂಟೆಗೆ ಗಂಗಾವತಿ ನಗರದಲ್ಲಿನ ಅಬ್ದುಲ್ ಫಯಾಜ್ ಮನೆಗೆ ದಾಳಿ ಮಾಡಿ ಅಬ್ದುಲ್ ಫಯಾಜ್ ನನ್ನು ವಶಕ್ಕೆ ಪಡೆದು,ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.

ಎನ್ಐಎ ದಾಳಿಗೂ ಬಂಧನಕ್ಕೆ ಸಂಬಂಧವಿಲ್ಲ:

ಗಂಗಾವತಿಯಲ್ಲಿ ಪಿಎಪ್ಐ ಸಂಘಟನೆಯ ಜಿಲ್ಲಾಧ್ಯಕ್ಷನನ್ನು ಕೆ ಜಿ ಹಳ್ಳಿ ಗಲಾಟೆ ಪ್ರಕರಣದ ಹಿನ್ನಲೆಯಲ್ಲಿ ಬಂಧನ ಮಾಡಲಾಗಿದೆ. ಆದರೆ ಪಿಎಫ್ ಐ ಸಂಘಟನೆಯ ಜಿಲ್ಲಾಧ್ಯಕ್ಷ ಅಬ್ದುಲ್ ಫಯಾಜ್ ನನ್ನು ಬೇರೆ ಕಾರಣಕ್ಕಾಗಿಯೇ ಬಂಧನ ಮಾಡಲಾಗಿದೆ. ಎನ್ಐಎ ದಾಳಿಗೂ ಇದಕ್ಕೂ ಸಂಬಂಧ ಇಲ್ಲ ಎನಿಸುತ್ತದೆ ಎಂದು ಎಸ್ಪಿ ಅರುಣಾಂಗ್ಷು ಗಿರಿ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ ಚಾಕು ಇರಿತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಘಟನೆಯ ಹಿಂದೆ ಪಿಎಫ್‌ಐ?

ಒಟ್ಟಿನಲ್ಲಿ ದೇಶಾದ್ಯಂತ ಹಲವೆಡೆ ಎನ್ಐಎ ಈಗಾಗಲೇ ಪಿಎಫ್ಐ ಸಂಘಟನೆಯ ಕಚೇರಿ, ಮುಖಂಡರ ಮನೆಗಳ ಮೇಲೆ ದಾಳಿ ಮಾಡಿದೆ. ಅದರಂತೆ ಕೊಪ್ಪಳದಲ್ಲಿಯೂ ಸಹ ಪಿಎಫ್ಐ ಸಂಘಟನೆಯ ಜಿಲ್ಲಾಧ್ಯಕ್ಷನನ್ನು ಬಂಧನ ಮಾಡಲಾಗಿದೆ. ಆದರೆ ಈ ಬಂಧನ ಯಾವ ಕಾರಣಕ್ಕಾಗಿ ಆಗಿದೆ ಅನ್ನೋದನ್ನ ಪೊಲೀಸ್ ಇಲಾಖೆಯೇ ಬಹಿರಂಗಪಡಿಸಿದೆ.

Follow Us:
Download App:
  • android
  • ios