Kolar Murder: ಪ್ರೇಮಿಗಳ ದಿನದಂದೇ ಹೆಂಡತಿಯ ಭೀಕರ ಹತ್ಯೆ..! ಅವಳಿಗಾಗಿ ಕೈ ಹಿಡಿದವಳನ್ನೇ ಮುಗಿಸಿಬಿಟ್ಟನಾ ಪಾಪಿ..?

ಗಾರ್ಮೆಂಟ್ಸ್ ನಲ್ಲಿ ಅರಳಿದ್ದ  ಪ್ರೀತಿ ಬೀದಿ ಹೆಣವಾಯ್ತು..!
ಪ್ರೇಮಿಗಳ ದಿನ ಹೆಂಡತಿಯ ಭೀಕರ ಹತ್ಯೆ ಮಾಡಿದ ಪತಿ
ಅವಳಿಗಾಗಿ ಕೈ ಹಿಡಿದವಳನ್ನೇ ಮುಗಿಸಿಬಿಟ್ಟನಾ ಪಾಪಿ..?

First Published Feb 18, 2024, 7:04 PM IST | Last Updated Feb 18, 2024, 7:04 PM IST

ಈ ಪ್ರೀತಿ ಅನ್ನೋದೆ ಹಾಗೆ ಯಾವಾಗ ಯಾರ ಮೇಲೆ ಹೇಗೆ ಹುಟ್ಟುತ್ತೋ ಗೊತ್ತಾಗೊಲ್ಲ. ಆಕೆ ಸುರದ್ರೂಪಿ ಹೆಣ್ಮಗಳು ನೋಡೋಕೆ ಮುದ್ದು ಮುದ್ದಾಗಿ ಇದ್ಳು. ಮಿಡಲ್ ಕ್ಲಾಸ್ ಹುಡುಗಿ ಬೇರೆ ತನ್ನ ಕುಟುಂಬನ್ನು ಸಹ ನೋಡ್ಕೋಳೋ ಜವಬ್ದಾರಿ ಆ ಹೆಣ್ ಮಗಳ ಮೇಲೆ ಇತ್ತು . ಅದೇ ಕಾರಣಕ್ಕೆ ಗಾರ್ಮೆಂಟ್ಸ್ ಒಂದಕ್ಕೆ ಕೆಲಸಕ್ಕೆ ಸೇರಿಕೊಂಡಿದ್ಳು. ಅದೇ ಗಾರ್ಮೆಂಟ್ಸ್ ನಲ್ಲಿ 6 ವರ್ಷದ ಹಿಂದೆ ಆತನೊಬ್ಬ ಪರಿಚಯವಾಗಿದ್ದ. ಮೊದಲಿಗೆ ಸ್ನೇಹದಲ್ಲಿ ಇದ್ದ ಜೋಡಿ ನಂತರ ಪ್ರೀತಿಗೆ ಬಿದ್ದಿತ್ತು. ಇನ್ನೇನು ಪ್ರೀತಿಸಿ(Love) ಬಿಟ್ಟಿದ್ದಾರೆ ಮದ್ವೆ ಮಾಡೋಣ ಎಂದು ಮನೆಯವ್ರು ಮದ್ವೆಯನ್ನು ಸಹ ಮಾಡಿದ್ರು. ಆದ್ರೆ 6 ವರ್ಷದಲ್ಲಿ ಆ ಕಿರಾತಕನ ಬಣ್ಣ ಬಯಲಾಗಿತ್ತು. ನಂತರ ನಡೆದಿದ್ದು ಘೋರ ದುರಂತ. ಪವಿತ್ರಗೆ ಬೇರೆ ಆಪ್ಷನ್ ಇರ್ಲೇ ಇಲ್ಲ. ಹಿಂಸೆ ಕೊಟ್ರೆ ಯಾರ್ ತಾನೆ ತಡ್ಕೋತಾರೆ ಹೇಳಿ. ಬೇಸತ್ತು ಕೊನೆಗೆ ಉರಿಗಾಂ ಪೊಲೀಸ್ ಠಾಣೆಗೆ ದೂರನ್ನು ನೀಡ್ತಾಳೆ. ಇದರಿಂದ ರೊಚ್ಚಿಗೆದ್ದ ಲೋಕೇಶ್ ಪವಿತ್ರಳನ್ನು ಕೊಲೆ(Murder) ಮಾಡಿಬಿಟ್ಟಿದ್ದ. ಅಸಲಿಗೆ ಇದೊಂದೆ ಕಾರಣಕ್ಕೆ ಪವಿತ್ರಳನ್ನು ಈ ರೀತಿ ಭೀಕರವಾಗಿ ಕೊಲೆ ಮಾಡಿಬಿಟ್ನಾ ಅಂತ ನೋಡೋದಾದ್ರೆ ಅಸಲಿ ಕಥೆ ಬೇರೆನೇ ಇದೆ. ಅಸಲಿಗೆ ಲೋಕೇಶ್ ಗೆ ಕೇವಲ ಹಣದಾಹ(Money) ಮಾತ್ರ ಇರ್ಲಿಲ್ಲ. ಆತನಿಗೆ ಇದ್ದಿದ್ದು ಹೆಣ್ ಮಕ್ಕಳ ಹುಚ್ಚು. ಚಪಲಚೆನ್ನಿಗರಾಯನಾದ ಲೋಕೇಶ್ ಗೆ ಊರ್ ತುಂಬಾ ಬರೇ ಅಫೇರ್ ಗಳೇ ಇತ್ತು. ನೀನು ಹಣ ಕೊಡಲ್ಲ ನೋಡು ಇವ್ಳು ನಂಗೆ ಹಣ ಹಾಗೂ ಸುಖ ಎರಡು ಕೊಡ್ತಾಳೆ ಎಂದು ತನ್ನ ಅಫೇರ್ ಗಳ ಫೋಟೋಗಳನ್ನ ಪವಿತ್ರಗೆ ಕಳಿಸುತ್ತಿದ್ದ. ಮೊದಲೇ ಕುಗ್ಗಿ ಹೋಗಿದ್ದ ಪವಿತ್ರಗೆ ಇದು ಬರಸಿಡಿಲು ಬಡಿದಂತೆ ಆಗಿತ್ತು. ಹಣದ ಆಸೆಗೆ, ಕಾಮದಾಸೆಗೆ ತಾನು ಪ್ರೀತಿಸಿ ಮದ್ವೆ ಆಗಿದ್ದ  ಹೆಂಡತಿಯನ್ನೇ ಭೀಕರವಾಗಿ ಹತ್ಯೆ ಮಾಡಿ ವಿಕೃತಿ ಮೆರೆದಿದ್ದಾನೆ.

ಇದನ್ನೂ ವೀಕ್ಷಿಸಿ:  Mohamed Muizzu: ಡ್ರ್ಯಾಗನ್ ಸಾಲದ ಶೂಲಕ್ಕೆ ಮಾಲ್ಡೀವ್ಸ್ ವಿಲವಿಲ! ಮಾಲ್ಡೀವ್ಸ್ ದ್ವೀಪ ದಹನ.. ಏನೇನು ಗೊತ್ತಾ ಕಾರಣ..?

Video Top Stories