ಕೇರಳದಲ್ಲಿ ಬಾಲಕಿ ಕಿಡ್ನ್ಯಾಪ್‌ ಕೇಸ್‌ ಸುಖಾಂತ್ಯ: 10 ಲಕ್ಷಕ್ಕೆ ಅಪಹರಿಸಿದ್ದ ಮಹಿಳಾ ಯೂಟ್ಯೂಬರ್ ಕುಟುಂಬ ಅರೆಸ್ಟ್

ಬಾಲಕಿ ಅಪಹರಣ ಪ್ರಕರಣ ಸಂಬಂಧ ವೈಜ್ಞಾನಿಕ, ಡಿಜಿಟಲ್ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಸಂಯೋಜನೆಯ ಆಧಾರದ ಮೇಲೆ ಎಂಜಿನಿಯರಿಂಗ್ ಪದವೀಧರ, ಆರೋಪಿ ಪದ್ಮಕುಮಾರ್, ಪತ್ನಿ ಅನಿತಾ ಕುಮಾರಿ ಮತ್ತು ಯೂಟ್ಯೂಬ್‌ನಲ್ಲಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಪುತ್ರಿ ಅನುಪಮಾ ಪದ್ಮನ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

kerala couple youtuber daughter arrested for kidnapping girl for 10 lakh ransom ash

ಕೊಲ್ಲಂ (ಕೇರಳ) (ಡಿಸೆಂಬರ್ 3, 2023): ಕೇರಳದಲ್ಲಿ ಭಾರಿ ಸದ್ದು ಮಾಡಿದ್ದ 6 ವರ್ಷದ ಬಾಲಕಿ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ಈ ವಾರದ ಆರಂಭದಲ್ಲಿ ಆರು ವರ್ಷದ ಬಾಲಕಿಯನ್ನು ಅಪಹರಿಸಿ ₹ 10 ಲಕ್ಷ ಹಣಕ್ಕಾಗಿ ಬೇಡಿಕೆ ಇಡಲಾಗಿತ್ತು. ಈ ಸಂಬಂಧ ಉದ್ಯಮಿ, ಅವರ ಪತ್ನಿ ಮತ್ತು ಅವರ ಯೂಟ್ಯೂಬರ್ ಮಗಳನ್ನು ಕೇರಳ ಪೊಲೀಸರು ಶನಿವಾರ ಬಂಧಿಸಿದ್ದಾರೆ. 

ಈ ಘಟನೆ ವ್ಯಾಪಕ ಗಮನ ಸೆಳೆದ ನಂತರ ಮಗುವನ್ನು ಕೊಲ್ಲಂನ ಸಾರ್ವಜನಿಕ ಮೈದಾನದಲ್ಲಿ ಬಿಟ್ಟು ಹೋಗಲಾಗಿತ್ತು. ಈ ಘಟನೆ ಬಗ್ಗೆ ಮಾತನಾಡಿದ ಕೇರಳ ಪೊಲೀಸರು, 
ವೈಜ್ಞಾನಿಕ, ಡಿಜಿಟಲ್ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಸಂಯೋಜನೆಯ ಆಧಾರದ ಮೇಲೆ ಎಂಜಿನಿಯರಿಂಗ್ ಪದವೀಧರ, ಆರೋಪಿ ಪದ್ಮಕುಮಾರ್, ಪತ್ನಿ ಅನಿತಾ ಕುಮಾರಿ ಮತ್ತು ಯೂಟ್ಯೂಬ್‌ನಲ್ಲಿ ಗಣನೀಯ ಫಾಲೋವರ್‌ಗಳನ್ನು ಹೊಂದಿರುವ ಪುತ್ರಿ ಅನುಪಮಾ ಪದ್ಮನ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: ಥೂ.. ಪಾಪಿ.. ಶವವನ್ನೂ ಬಿಡಲ್ವಾ? 79 ವರ್ಷದ ಮುದುಕಿ ಹೆಣದ ಜತೆ ಸೆಕ್ಯುರಿಟಿ ಗಾರ್ಡ್‌ ಲೈಂಗಿಕ ಕ್ರಿಯೆ

ಇನ್ನು, ಕಿಡ್ನ್ಯಾಪ್‌ಗೆ ಸುಲಿಗೆ ಸಂಧಾನದ ಸಂದರ್ಭದಲ್ಲಿ ಆರೋಪಿಗಳಲ್ಲಿ ಒಬ್ಬರ ಧ್ವನಿಯನ್ನು ಗುರುತಿಸಿದ ನಾಗರಿಕರು ನೀಡಿದ ಮಾಹಿತಿಯು ಈ ಪ್ರಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಎಡಿಜಿಪಿ ಎಂ ಆರ್ ಅಜಿತ್‌ಕುಮಾರ್ ಹೇಳಿದ್ದಾರೆ. ಈ ವಾರದ ಆರಂಭದಲ್ಲಿ ಅಪಹರಣವು ಸಾರ್ವಜನಿಕರ ಗಮನ ಸೆಳೆದಿತ್ತು.

ಅಪಹರಣಕ್ಕೊಳಗಾದ ಬಾಲಕಿಯ ಸಹಾಯದೊಂದಿಗೆ ಚಿತ್ರಿಸಿದ ಪದ್ಮಕುಮಾರ್ ಪೋರ್ಟ್ರೇಟ್‌ ಸಹಾಯದಿಂದ ಪೊಲೀಸರು ಆರೋಪಿಯನ್ನು ಯಶಸ್ವಿಯಾಗಿ ಪತ್ತೆಹಚ್ಚಿದರು. ಕುಟುಂಬದ ಆರ್ಥಿಕ ಸಮಸ್ಯೆಯೇ ಅಪಹರಣಕ್ಕೆ ಕಾರಣ ಎನ್ನಲಾಗಿದೆ. ಆರೋಪಿಗಳು ಕಳೆದ ಒಂದು ವರ್ಷದಿಂದ ಅಪರಾಧವನ್ನು ಯೋಜಿಸುತ್ತಿದ್ದರು ಮತ್ತು ಸೂಕ್ತವಾದ ಮಗುವನ್ನು ಹುಡುಕುತ್ತಿದ್ದರು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೂಯಪ್ಪಲ್ಲಿ ಪೊಲೀಸ್ ಠಾಣೆಯ ಹೊರಗೆ ಸುದ್ದಿಗಾರರಿಗೆ ಅಜಿತ್‌ಕುಮಾರ್ ತಿಳಿಸಿದರು.

ಇದನ್ನೂ ಓದಿ: ಕೋಟಾದಲ್ಲಿ ಮತ್ತೊಬ್ಬಳು ನೀಟ್‌ ಆಕಾಂಕ್ಷಿ ಆತ್ಮಹತ್ಯೆ: ವರ್ಷದಲ್ಲೇ 26 ವಿದ್ಯಾರ್ಥಿಗಳು ಬಲಿ

ಪದ್ಮಕುಮಾರ್ ಸ್ಥಳೀಯ ಕೇಬಲ್ ಟಿವಿ ನೆಟ್‌ವರ್ಕ್‌ನ ಕಾರ್ಯಾಚರಣೆ ಸೇರಿದಂತೆ ಹಲವಾರು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಕೋವಿಡ್ ನಂತರ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ.ಅವರ ಹೇಳಿಕೆಯಂತೆ, ಅವರು  5 ಕೋಟಿಗೂ ಹೆಚ್ಚು ಸಾಲವನ್ನು ಹೊಂದಿದ್ದರು. ಅವರಿಗೆ ತಕ್ಷಣವೇ  10 ಲಕ್ಷ ರೂ. ಅಗತ್ಯವಿತ್ತು, ಇದು ಅಪರಾಧವನ್ನು ನಡೆಸಲು ಕುಟುಂಬವನ್ನು ಪ್ರೇರೇಪಿಸಿತು ಎಂದು ಅಧಿಕಾರಿ ಹೇಳಿದ್ದಾರೆ.

ಅಪಹರಣದ ಹಿಂದೆ ಅನಿತಾ ಕುಮಾರಿ ಅವರದ್ದೇ ಮಾಸ್ಟರ್‌ಮೈಂಡ್‌ ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳು ಈ ಹಿಂದೆ ಎರಡು ಬಾರಿ ಮಗುವನ್ನು ಅಪಹರಿಸಲು ಯತ್ನಿಸಿದ್ದರು. ಆದರೆ ಈ ಸಂದರ್ಭದಲ್ಲಿ ಆಕೆಯ ತಾಯಿ ಮತ್ತು ಅಜ್ಜಿ ಜೊತೆಗಿದ್ದ ಕಾರಣ ಯಶಸ್ವಿಯಾಗಲಿಲ್ಲ ಎಂದು ಎಡಿಜಿಪಿ ಹೇಳಿದ್ದಾರೆ.

ಪೊಲೀಸ್ ಮಾಹಿತಿದಾರನ ಕೊಲೆ ಮಾಡಿ 16 ತುಂಡುಗಳಾಗಿ ಕತ್ತರಿಸಿದ ತಂದೆ, ಮಗ: 2 ತಿಂಗಳ ಹಳೆಯ ಕೇಸ್‌ಗೆ ಟ್ವಿಸ್ಟ್‌!

20 ವರ್ಷದ ಅನುಪಮಾ ಸಾಮಾಜಿಕ ಮಾಧ್ಯಮ ಯೂಟ್ಯೂಬ್‌ ಮೂಲಕ ಉತ್ತಮ ಗಳಿಕೆ ಹೊಂದಿದ್ದರೂ, ಕೆಲವು ಸಮಯದ ಹಿಂದೆ ತಾಂತ್ರಿಕ ಕಾರಣಗಳಿಂದ ಅದು ಇದ್ದಕ್ಕಿದ್ದಂತೆ ನಿಂತುಹೋಯಿತು. ಇದು ಹಣವನ್ನು ಗಳಿಸುವ ಇತರ ಸುಲಭ ಮಾರ್ಗಗಳ ಬಗ್ಗೆ ಯೋಚಿಸಲು ಕುಟುಂಬವನ್ನು ಪ್ರೇರೇಪಿಸಿತು ಎಂದೂ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. ಡಿಐಜಿ ನಿಶಾಂತಿನಿ ನೇತೃತ್ವದ ವಿಶೇಷ ಪೊಲೀಸ್ ತಂಡವು ಪ್ರಕರಣದ ತನಿಖೆ ನಡೆಸಿ ಕಡಿಮೆ ಅವಧಿಯಲ್ಲಿ ಆರೋಪಿಗಳನ್ನು ಬಂಧಿಸಿದೆ ಎಂದೂ ಅವರು ಶ್ಲಾಘಿಸಿದರು.

ತನ್ನ ಅಣ್ಣನೊಂದಿಗೆ ಟ್ಯೂಷನ್ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಅಪಹರಣಕ್ಕೊಳಗಾಗಿದ್ದ ಆರು ವರ್ಷದ ಬಾಲಕಿ ಮರುದಿನ ಇಲ್ಲಿನ ಸಾರ್ವಜನಿಕ ಮೈದಾನದಲ್ಲಿ ಪತ್ತೆಯಾಗಿದ್ದಳು. ಪ್ರಮುಖ ಆರೋಪಿಗಳು ಪೊಲೀಸ್ ವಶದಲ್ಲಿದ್ದಾರೆ. ಪೊಲೀಸರು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಿದ್ದಾರೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದು, ಆರೋಪಿಗಳನ್ನು ಬಂಧಿಸಿದ ಪೊಲೀಸರನ್ನು ಶ್ಲಾಘಿಸಿದರು.

Latest Videos
Follow Us:
Download App:
  • android
  • ios