ಚಿನ್ನಾಭರಣಗಳು ಕೊಚ್ಚಿಯ ನಜಾರಕ್ಕಲ್ ನಿವಾಸಿ ನಟೇಶನ್ ಅವರ ಪತ್ನಿಗೆ ಸೇರಿದ್ದು, ಅವರು ತಮ್ಮ ಮಲಗುವ ಕೋಣೆಯಲ್ಲಿ ಬೀರು ಒಳಗೆ ಇರಿಸಿದ್ದರು. ಅಕ್ಟೋಬರ್ 13 ರಂದು ಕಳ್ಳತನ ನಡೆದಿತ್ತು.
ಕೊಚ್ಚಿ (ಅ.22): ಕೇರಳ ಪೊಲೀಸ್ ಇಲಾಖೆಗೆ ಮುಜುಗರ ತರುವ ಇನ್ನೊಂದು ಘಟನೆ ನಡೆದಿದೆ. ಕೆಲ ದಿನಗಳ ಹಿಂದೆ10 ಕೆಜಿ ಮಾವಿನ ಹಣ್ಣನ್ನು ಕೇರಳ ಪೊಲೀಸ್‌ವೊಬ್ಬರು ಕದ್ದಿದ್ದರು. ಆ ಬಳಿಕ ಸೈನಿಕನ ಮೇಲೆ ಹಲ್ಲೆ ಮಾಡಿದ ಪ್ರಕರಣ ದೇಶಾದ್ಯತ ಸುದ್ದಿಯಾಗಿತ್ತು. ಶುಕ್ರವಾರ ತನ್ನ ಸ್ನೇಹಿತನ ಮನೆಯಲ್ಲಿಯೇ ಚಿನ್ನಾಭರಣ ಕಳ್ಳತನ ಮಾಡಿದ ಕಾನ್ಸ್‌ಟೇಬಲ್‌ನನ್ನು ಬಂಧನ ಮಾಡಲಾಗಿದೆ. ತನ್ನ ಬಾಲ್ಯದ ಸ್ನೇಹಿತನ ಮನೆಯಲ್ಲಿ ಕಾನ್ಸ್‌ಟೇಬಲ್ ಈ ಕಳ್ಳತನ ಮಾಡಿದ್ದ. ಕೊಚ್ಚಿಯ ನಜಾರಕ್ಕಲ್ ನಿವಾಸಿ ನಟೇಶನ್ ಎಂಬುವವರ ಮನೆಯಿಂದ 10 ಪವನ್ ಚಿನ್ನಾಭರಣಗಳನ್ನು ಕಳವು ಮಾಡಿದ್ದಕ್ಕಾಗಿ ಕೊಚ್ಚಿ ನಗರ ಪೊಲೀಸ್‌ನ ಎಆರ್ ಕ್ಯಾಂಪ್‌ಗೆ ಸಂಬಂಧಪಟ್ಟ ಸಿಬ್ಬಂದಿ ಅಮಲ್ ದೇವ್ ಎಂಬಾತನನ್ನು ಬಂಧಿಸಲಾಗಿದೆ. ಚಿನ್ನಾಭರಣ ನಟೇಶನ ಪತ್ನಿಗೆ ಸೇರಿದ್ದು, ಅವರ ಬೆಡ್‌ರೂಮ್‌ನಲ್ಲಿರುವ ಕಬೋರ್ಡ್‌ನಲ್ಲಿ ಇದನ್ನು ಇಡಲಾಗತ್ತು. ಅಕ್ಟೋಬ್ 13 ರಂದು ಈ ದರೋಡೆ ಪ್ರಕರಣ ನಡೆದಿತ್ತು.
"ಇಬ್ಬರೂ ಬಾಲ್ಯದ ಗೆಳೆಯರು. ಹೀಗಾಗಿ ಆರೋಪಿಯು, ನಟೇಶನ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ. ಆಭರಣ (Gold ornaments) ನಾಪತ್ತೆಯಾದ ಬಗ್ಗೆ ಕುಟುಂಬದ ಸದಸ್ಯರಿಗೆ ತಿಳಿದಾಗಿನಿಂದ ಅಧಿಕಾರಿಯ ಮೇಲೆಯೇ ಅನುಮಾನ ಮೂಡಿತ್ತು. ಘಟನೆ ನಡೆಯುವ ಗಂಟೆಗಳ ಮೊದಲು ನಟೇಶನ್ ಮನೆಯ ಮಲಗುವ ಕೋಣೆಗೂ ಆರೋಪಿ ಭೇಟಿ ನೀಡಿದ್ದ. ಇದು ಅನುಮಾನ ಹೆಚ್ಚಿಸಿದ ಕಾರಣ, ನಟೇಶನ್ ಹಾಗೂ ಆತನ ಪತ್ನಿ ಪೊಲೀಸರಿಗೆ ದೂರಿ ನೀಡಿದ್ದರು' ಎಂದು ಪ್ರಕರಣ ದಾಖಲಿಸಿಕೊಂಡಿರುವ ನಜಾರಕಲ್ ಪೊಲೀಸ್ ಠಾಣೆಯ (Njarakkal police station) ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬೆಂಗಳೂರು: ಮರ್ಮಾಂಗ ಕತ್ತರಿಸಿ ವ್ಯಕ್ತಿಯ ಬರ್ಬರ ಹತ್ಯೆ
ಆರೋಪಿಯು ಆನ್‌ಲೈನ್ ರಮ್ಮಿ (Online Rummy) ಆಟಗಳಲ್ಲಿ ತೊಡಗಿಸಿಕೊಂಡಿದ್ದ ಹಾಗೂ ಇದರಿಂದ ಆತ ಭಾರಿ ನಷ್ಟವನ್ನು ಅನುಭವಿಸಿದ್ದ (Theft) ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ. ನಮಗೆ ಅದರ ಬಗ್ಗೆ ಕೆಲವು ಮಾಹಿತಿ ಸಿಕ್ಕಿದೆ. ಅವನು ಬೇರೆ ಯಾವುದೇ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆಯೇ ಎಂದು ನಾವು ತನಿಖೆ ಮಾಡಬೇಕಾಗಿದೆ" ಎಂದು ಪೊಲೀಸರು ಹೇಳಿದ್ದಾರೆ. ಏತನ್ಮಧ್ಯೆ, ಅಧಿಕಾರಿಯ ಕೃತ್ಯವು ಇತ್ತೀಚೆಗೆ ನರಬಲಿ ಪ್ರಕರಣವನ್ನು ಭೇದಿಸಿದ ಕೊಚ್ಚಿ ಸಿಟಿ (Kochi City Police) ಪೊಲೀಸರ ಗೌರವಕ್ಕೆ ಮಸಿ ಬಳಿದಿದೆ.
Mangaluru Crime: ಜೈಲಿನ ಮಹಾದ್ವಾರದ ಬಳಿಯೇ ತಪ್ಪಿಸಿಕೊಂಡ ಕಳ್ಳತನ ಆರೋಪಿ
"ನಿಜವಾಗಿಯೂ ಇದು ಪೊಲೀಸರಿಗೆ ಕೆಟ್ಟ ಸಮಯ, ಮತ್ತೊಂದೆಡೆ, ಕೆಲವು ಅಧಿಕಾರಿಗಳು ಇಲಾಖೆಗೆ ಎಲ್ಲಾ ಪ್ರಶಂಸೆಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ, ಇನ್ನೂ ಕೆಲವರು ಹೆಸರು ಕೆಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ನರಬಲಿ ಪ್ರಕರಣ ಭೇದಿಸಿದ ಮೂಲಕ ಗಮನಸೆಳೆದ ಕೊಚ್ಚಿ ಪೊಲೀಸ್ ಇಂಥ ಘಟನೆಗಳಿಂದ ತಲೆತಗ್ಗಿಸಿದೆ”ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.ಪೊಲೀಸರು ಐಪಿಸಿ ಸೆಕ್ಷನ್ 179 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆತನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದೇವೆ ಎಂದು ನಜಾರಕಲ್ ಪೊಲೀಸರು ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ, ಕೊಟ್ಟಾಯಂನ ಕಂಜಿರಪಲ್ಲಿಯಲ್ಲಿ ಮಧ್ಯರಾತ್ರಿಯಲ್ಲಿ ತಳ್ಳುಗಾಡಿಯಿಂದ 10 ಕೆಜಿ ಮಾವಿನಹಣ್ಣುಗಳನ್ನು ಪೊಲೀಸ್ ಅಧಿಕಾರಿಯೊಬ್ಬರು ಕದಿಯುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
