Asianet Suvarna News Asianet Suvarna News

ಅಕ್ರಮವಾಗಿ ಚಿನ್ನ ಸಾಗಾಟ; 1ಕೋಟಿಗೂ ಅಧಿಕ ಮೌಲ್ಯದ ಚಿನ್ನ ಜಪ್ತಿ ಮಾಡಿದ ಕಸ್ಟಮ್ಸ್ ಅಧಿಕಾರಿಗಳು

ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಮೂವರು ಪ್ರಯಾಣಿಕರಿಂದ 1 ಕೋಟಿ ಮೌಲ್ಯದ ಸುಮಾರು 1.7 ಕೆಜಿ ಚಿನ್ನಾಭರಣಗಳು ಹಾಗೂ ನಾಲ್ಕು ಲ್ಯಾಪ್‌ಟಾಪ್‌ಗಳನ್ನು ಕೆಂಪೇಗೌಡ ಏರ್ಪೋರ್ಟ್ ನ ಏರ್ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 

Kempegowda airport Illegal Trafficking Customs officers who confiscated the gold bengaluru rav
Author
First Published Oct 15, 2023, 7:23 PM IST

ವರದಿ-  ರವಿಕುಮಾರ್ ವಿ, ಏಷ್ಯಾನೆಟ್  ಸುವರ್ಣ ನ್ಯೂಸ್ 

ಬೆಂಗಳೂರು (ಅ.15) ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಮೂವರು ಪ್ರಯಾಣಿಕರಿಂದ 1 ಕೋಟಿ ಮೌಲ್ಯದ ಸುಮಾರು 1.7 ಕೆಜಿ ಚಿನ್ನಾಭರಣಗಳು ಹಾಗೂ ನಾಲ್ಕು ಲ್ಯಾಪ್‌ಟಾಪ್‌ಗಳನ್ನು ಕೆಂಪೇಗೌಡ ಏರ್ಪೋರ್ಟ್ ನ ಏರ್ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 

ಮೂವರು ಪ್ರಯಾಣಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ್ದಿದ್ದು ಪತ್ತೆಯಾಗಿದೆ. ಮೂವರು ಬೇರೆ ಬೇರೆ ದೇಶಗಳಿಂದ ಬಂದಿದ್ದಾರೆ. ಸಿಂಗಾಪುರ, ಕುವೈತ್ ಹಾಗೂ ಕೊಲಂಬೋದಿಂದ ಬಂದಂತ ಪ್ರಯಾಣಿಕರು. ಅನುಮಾನಗೊಂಡಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ್ದು ಪತ್ತೆಯಾಗಿದೆ. 

ಕೆಂಪೇಗೌಡ ಏರ್‌ಪೋರ್ಟ್: ಸೊಂಟದಲ್ಲಿ ಮರೆಮಾಚಿ 2.8 ಕೆಜಿ ಚಿನ್ನ ಸಾಗಾಟ ಯತ್ನ, ಇಬ್ಬರು ವಶಕ್ಕೆ

ಸಿಂಗಾಪುರದಿಂದ ಬಂದಂತ ಪ್ರಯಾಣಿಕ ಶೂ ಹಾಗೂ ಲ್ಯಾಪ್ಟಾಪ್ ಗಳಲ್ಲಿ 945 ಗ್ರಾಂ ಚಿನ್ನವನ್ನು ಮರೆಮಾಚಿ ಸಾಗಾಟ ಮಾಡುತ್ತಿದ್ದಾಗ ಪತ್ತೆಯಾಗಿದೆ. ಕುವೈತ್ನಿಂದ ಆಗಮಿಸಿದ್ದ ಪ್ರಯಾಣಿಕ 689.65 ಗ್ರಾಂ ಚಿನ್ನವನ್ನು ಗುದದ್ವಾರದಲ್ಲಿ ಸಾಗಿಸುತ್ತಿದ್ದ. ಶ್ರೀಲಂಕಾದ ಕಲಂಬದಿಂದ ಬಂದ ಮತ್ತೊಬ್ಬ ಪ್ರಯಾಣಿಕ 13 ಪಾಯಿಂಟ್ ಮೂರು ಮೂರು ಗ್ರಾಂ ಚಿನ್ನವನ್ನು ಒಳಉಡುಪಿನಲ್ಲಿ ಇಟ್ಟುಕೊಂಡು ಬರುತ್ತಿದ್ದಾಗ ಪತ್ತೆಯಾಗಿದೆ. ಒಟ್ಟಾರೆ ಮೂವರಿಂದಲೂ ಕೂಡ 1.7 ಕೆಜಿ ಚಿನ್ನವನ್ನು ಕೆಂಪೇಗೌಡ ಏರ್ಪೋರ್ಟ್ ನ ಏರ್ ಕಸ್ಟಮ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ವಿದೇಶದಿಂದ ಅಕ್ರಮವಾಗಿ ಚಿನ್ನ, ಎಲೆಕ್ಟ್ರಾನಿಕ್‌ ಉಪಕರಣಗಳು: 8 ಆರೋಪಿಗಳ ಬಂಧನ

 ಪಾಸ್ತಾ  ಮೇಕರ್ ನಲ್ಲೂ ಚಿನ್ನ ಸಾಗಿಸುತ್ತಿದ್ದಾಗ ಬಲೆಗೆ

 ದುಬೈ ನಿಂದ ಬೆಂಗಳೂರಿಗೆ ಏರ್ಪೋರ್ಟ್‌ಗೆ ಇಂಡಿಗೋ ವಿಮಾನದಲ್ಲಿ ಆಗಮಿಸಿದ್ದ ಪ್ರಯಾಣಿಕ ಪಾಸ್ತಾ ಮೇಕರ್ ಮಷೀನ್ ನಲ್ಲಿ ಅಕ್ರಮವಾಗಿ 598 ಗ್ರಾಂ ಚಿನ್ನವನ್ನು ಸಾಗಟ ಮಾಡುತ್ತಿದ್ದಾಗ ಬಲೆಗೆ ಬಿದ್ದಿದ್ದಾನೆ. ಬ್ಯಾಗ್‌ನಲ್ಲಿ ಅಕ್ರಮವಾಗಿ ಚಿನ್ನವನ್ನು ಸಾಗಾಟ ಮಾಡುತ್ತಿದ್ದಾಗ ಪರಿಶೀಲನೆ ವೇಳೆ ಅಕ್ರಮವಾಗಿ ಚಿನ್ನ ಸಾಗಾಟ ಪತ್ತೆಯಾಗಿದೆ. 35 ಲಕ್ಷ ಮೌಲ್ಯದ 598 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Follow Us:
Download App:
  • android
  • ios