ದಾವಣಗೆರೆ: ಟ್ರಾನ್ಸಫಾರ್ಮರ್ ರಿಪೇರಿ ಮಾಡುವಾಗ ವಿದ್ಯುತ್ ತಗುಲಿ ಲೈನ್‌ಮ್ಯಾನ್ ದುರಂತ ಸಾವು!
ಟ್ರಾನ್ಸಫಾರ್ಮರ್ ರಿಪೇರಿ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಕ್ಕೆ ಲೈನ್‌ಮ್ಯಾನ್ ದಾರುಣವಾಗಿ ಮೃತಪಟ್ಟ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ಮಳಲಕೆರೆ ಗ್‌ರಾಮದಲ್ಲಿ ನಡೆದಿದೆ.
ದಾವಣಗೆರೆ (ಅ.3): ಟ್ರಾನ್ಸಫಾರ್ಮರ್ ರಿಪೇರಿ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಕ್ಕೆ ಲೈನ್‌ಮ್ಯಾನ್ ದಾರುಣವಾಗಿ ಮೃತಪಟ್ಟ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ಮಳಲಕೆರೆ ಗ್‌ರಾಮದಲ್ಲಿ ನಡೆದಿದೆ.
ಲೈನ್ ಮ್ಯಾನ್ ಮುತ್ತು(32) ಮೃತ ದುರ್ದೈವಿ. ಕೆಲ ದಿನಗಳಿಂದ ಗ್ರಾಪಂ ಮುಂಭಾಗದ ಟಿಸಿ ರಿಪೇರಿಯಾಗಿತ್ತು. ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಇಲ್ಲದೆ ತೊಂದರೆ ಅನುಭವಿಸಿದ್ದರು. ಈ ಹಿನ್ನೆಲೆ ಕೆಇಬಿಗಳಿಗೆ ತಿಳಿಸಿದ್ದ ಗ್ರಾಮಸ್ಥರು. ಕೆಇಬಿಯಿಂದ ಟಿಸಿ ದುರಸ್ತಿಗೆ ಬಂದಿದ್ದ ಲೈನ್‌ಮ್ಯಾನ್ ಮುತ್ತು. ಟ್ರಾನ್ಸ್‌ಫಾರಂ ಮೇಲೆ ಏರಿ ರಿಪೇರಿ ಮಾಡುವ ವೇಳೆ ಹೈವೋಲ್ಟೇಜ್ ವಿದ್ಯುತ್ ಹರಿದು ಕ್ಷಣದಲ್ಲೇ ಮೃತಪಟ್ಟಿರುವ ಲೈನ್‌ಮ್ಯಾನ್.
ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್‌ನಿಂದ ಬಿದ್ದು 6 ವರ್ಷದ ಮಗು ಸಾವು
ಟ್ರಾನ್ಸ್‌ಪಾರಂ ರಿಪೇರಿ ಮಾಡುವಾಗ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು. ಅದರ ಬಗ್ಗೆ ಮೊದಲೇ ಮುಂಜಾಗ್ರತಾ ಕ್ರಮ ವಹಿಸಬೇಕಿತ್ತು. ಲೈನ್‌ಮ್ಯಾನ್‌ಗೆ ಕೈಗವಸು, ಶೂ, ಇತರೆ ಜೀವ ರಕ್ಷಕ ಅಗತ್ಯ ಸಲಕರಣೆಗಳಿರಬೇಕು ಆದರೆ ಕೆಇಬಿ ಸಿಬ್ಬಂದಿ ಯಾವುದೇ ಕೈಗವಸು ಶೂ ಇಲ್ಲ. ಲೈನ್ ಮ್ಯಾನ್ ಸಾವಿಗೆ ಕೆಇಬಿ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.