Asianet Suvarna News Asianet Suvarna News

ಡ್ರೀಮ್ 11 ಸ್ಥಾಪಕರಿಗೆ ಬಿಗ್ ರಿಲೀಫ್ ಕೊಟ್ಟ ಹೈಕೋರ್ಟ್!

* ಡ್ರೀಮ್ 11 ಸಂಸ್ಥಾಪಕನಿಗೆ ಬಿಗ್ ರಿಲೀಫ್
*ತಕ್ಷಣಕ್ಕೆ ಯಾವುದೇ ಕ್ರಮ ತೆಗೆದುಕೊಳಳಬೇಡಿ ಎಂದ ಹೈಕೋರ್ಟ್
* ಕರ್ನಾಟಕದಲ್ಲಿ ಆನ್ ಲೈನ್ ಗೇಮಿಂಗ್ ಗೆ ನಿಷೇಧ 

Karnataka High Court Relief for Dream 11 Founders mah
Author
Bengaluru, First Published Oct 28, 2021, 8:36 PM IST

ಬೆಂಗಳೂರು(ಅ. 28)  ಡ್ರೀಮ್ 11 ಕಂಪನಿ ಸಂಸ್ಥಾಪಕನಿಗೆ ಬಿಗ್ ರಿಲೀಫ್ ಸಿಕ್ಕಿದೆ. ನವೆಂಬರ್ 9 ರವರೆಗೂ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ  ಹೈಕೋರ್ಟ್ (Karnataka High Court) ಆದೇಶ ನೀಡಿದೆ.

ಹೈಕೋರ್ಟ್ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಗೆ ಸೂಚನೆ ನೀಡಿದೆ. ಭವಿತ್ ಸೇತ್ ಹಾಗೂ ಹರ್ಷ ಜೈನ್ ವಿರುದ್ದ ದೂರು ದಾಖಲಾಗಿತ್ತು. ಮಂಜುನಾಥ್ ಎಂಬುವವರು ದೂರು ನೀಡಿದ್ದರು. ಎಫ್ಐಆರ್ ರದ್ದು ಕೋರಿ ಅರ್ಜಿ  ಡ್ರೀಮ್ 11 ಸಂಸ್ಥಾಪಕರಾಗಿದ್ದ ಭವಿತ್ ಸೇತ್ ಹಾಗೂ ಹರ್ಷ ಜೈನ್  ಅರ್ಜಿ ಸಲ್ಲಿಸಿದ್ದರು.

ಐಪಿಎಲ್ ಹರಾಜು.. ಹೊಸ ನಿಯಮಗಳು ಏನು?

ದೇಶದ ಅತ್ಯಂತ ಜನಪ್ರಿಯ ಆನ್‌ಲೈನ್‌ ಗೇಮಿಂಗ್‌ ಆ್ಯಪ್‌(Online Gaming) ‘ಡ್ರೀಮ್‌ 11’(Dream 11)ಗೆ ಕರ್ನಾಟಕದಲ್ಲಿ ಸಂಪೂರ್ಣ ನಿಷೇಧ ಹೇರಲಾಗಿದೆ.

ಸೇವೆ ಸ್ಥಗಿತವಾಗಿದ್ದರ ಬಗ್ಗೆ ಕಂಪನಿ ಹೇಳಿಕೆ ನೀಡಿತ್ತು ಈ ಕುರಿತು ಭಾನುವಾರ ಹೇಳಿಕೆ ನೀಡಿರುವ ಕಂಪನಿ ‘ನಮ್ಮ ಬಳಕೆದಾರರ ಕಳವಳವನ್ನು ದೂರ ಮಾಡುವ ನಿಟ್ಟಿನಲ್ಲಿ ನಾವು ಕರ್ನಾಟಕದಲ್ಲಿ ನಮ್ಮ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ. ಇದು, ನಮ್ಮ ಹಕ್ಕುಗಳ ಕುರಿತು ಯಾವುದೇ ಪೂರ್ವಾಗ್ರಹ ಮತ್ತು ಕಾನೂನಿನ ಬಗ್ಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲದೇ ಕೈಗೊಂಡ ನಿಲುವು. ಈ ವಿಷಯದಲ್ಲಿ ನಾವು ನಮ್ಮ ಮುಂದಿರುವ ಎಲ್ಲಾ ಕಾನೂನು ಅವಕಾಶಗಳನ್ನು ಪರಿಶೀಲಿಸುತ್ತಿದ್ದೇವೆ. ನಮ್ಮದು ಜವಾಬ್ದಾರಿಯುತ, ಕಾನೂನು ಪಾಲಿಸುವ ಸಂಸ್ಥೆಯಾಗಿದ್ದು, ಯಾವುದೇ ಅಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇವೆ ಎಂದು ತಿಳಿಸಿತ್ತು.

 

Follow Us:
Download App:
  • android
  • ios