Sharath Bachegowda  

(Search results - 36)
 • MTB
  Video Icon

  Politics3, Feb 2020, 9:36 PM IST

  31 ಪೈಕಿ 25 ಸೀಟು ಗೆಲ್ಲುತ್ತೇನೆ: ಬುಸುಗುಟ್ಟಿದ 'ನಾಗ'ರಾಜ್

  ಸಚಿವ ಸ್ಥಾನ ಕೈ ತಪ್ಪುವ ಹಿನ್ನೆಲೆ ಕಿಡಿಕಾರುತ್ತಿದ್ದ ಎಂಟಿಬಿ ನಾಗರಾಜ್​ ಮನವೊಲಿಸುವಲ್ಲಿ ಸಿಎಂ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಆದ್ರೆ, ಬಚ್ಚೇಗೌಡ ವಿರುದ್ಧ ಮತ್ತೆ ಬುಸುಗುಟ್ಟಿದ್ದಾರೆ.

 • MTB Nagraj
  Video Icon

  Politics26, Dec 2019, 6:45 PM IST

  MTB ತಂದ ಅನುದಾನಕ್ಕೆ ಅಪ್ಪ-ಮಕ್ಕಳ ಗುದ್ದಲಿ ಪೂಜೆ: BSY ಮನೆಗೆ ಓಡಿದ ನಾಗರಾಜ್

  ಉಪ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಎಂಟಿಬಿ ನಾಗರಾಜು ಮತ್ತೆ ಎದುರಾಳಿ ಶರತ್​ ಬಚ್ಚೇಗೌಡ ವಿರುದ್ಧ ಆರೋಪ ಮಾಡಿದ್ದಾರೆ. ಹೊಸಕೋಟೆ ವಿಧಾನಸಭಾ ಬೈ ಎಲೆಕ್ಷನ್ ವೇಳೆ ಪಕ್ಷದ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರ ಸಂಸದ ಬಿಎನ್ ಬಚ್ಚೇಗೌಡ ಅವರು ಪ್ರಚಾರ ಮಾಡುವುದು ಬಿಟ್ಟು ನಾಪತ್ತೆಯಾಗಿದ್ದರು. ಮಗ ನಿಂತಿರುವ ಕಾರಣದಿಂದ ಬಚ್ಚೇಗೌಡ್ರು ಕ್ಷೇತ್ರದಿಂದ ದೂರವಾಗಿದ್ದರು. ಈ ಹಿನ್ನೆಲೆಯಲ್ಲಿ ಎಂಟಿಬಿ ರಾಜ್ಯ ಬಿಜೆಪಿ ನಾಯಕರಿಗೆ ದೂರು ನೀಡಿದ್ದಾರೆ.

 • BSY

  Politics22, Dec 2019, 12:26 PM IST

  ಪ್ರಮಾಣವಚನ ಸ್ವೀಕರಿಸಿದ ನೂತನ ಶಾಸಕರು: ಸಚಿವರಾಗಿ ಪ್ರಮಾಣ ಯಾವಾಗ..?

  ಇತ್ತೀಚೆಗ ನಡೆದ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಯ್ಕೆಯಾಗಿರುವ ನೂತನ ವಿಧಾನಸಭಾ ಸದಸ್ಯರ ಪೈಕಿ 13 ಜನರು ಇಂದು (ಭಾನುವಾರ) ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.ವಿಧಾನಸೌಧದ ಬಾಂಕ್ವೇಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು.

  ಬಿಜೆಪಿಯ 12 ಹಾಗೂ ಓರ್ವ ಪಕ್ಷೇತರ ಶಾಸಕ ಪ್ರಮಾಣ ವಚನ ಸ್ವೀಕರಿಸಿದರು. ಆದ್ರೆ, ಇಬ್ಬರು ಕಾಂಗ್ರೆಸ್ ಶಾಸಕರು ಮಾತ್ರ ಪ್ರಮಾಣ ವಚನ ಸ್ವೀಕರಿಸಿಲ್ಲ. ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ. ಡಿಸೆಂಬರ್ 5 ರಂದು ನಡೆದಿದ್ದ ಚುನಾವಣೆಯಲ್ಲಿ 12 ಬಿಜೆಪಿ, 2 ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದರು. ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಆಯ್ಕೆಯಾಗಿದ್ದಾರೆ. ಜೆಡಿಎಸ್ ಯಾವುದೇ ಕ್ಷೇತ್ರದಲ್ಲೂ ಗೆಲುವು ಸಾಧಿಸಿಲ್ಲ. ಇನ್ನು ಸಚಿವರಾಗಿ ಜನವರಿಯಲ್ಲಿ ಪ್ರಮಾಣವಚನ ಸ್ವೀಕರಿಸುವ ಎಲ್ಲಾ ಸಾಧ್ಯತೆಗಳಿವೆ. 

 • Sharath Bachegowda - NEWSABLE

  Karnataka Districts19, Dec 2019, 10:26 AM IST

  ಸೋತ ಎಂಟಿಬಿ ಆರೋಪಕ್ಕೆ ತಂದೆ ಬಚ್ಚೇಗೌಡರ ಪರ ನಿಂತ ಶರತ್

  ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ತಮ್ಮ ತಂದೆ ಪರ ಬ್ಯಾಟ್ ಬೀಸಿದ್ದಾರೆ. ಅಲ್ಲದೇ ಎಂಟಿಬಿ ನಾಗರಾಜ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. 

 • Bache Gowda

  Politics13, Dec 2019, 8:07 AM IST

  ಶರತ್‌ ಬಚ್ಚೇಗೌಡ, ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಭೇಟಿ: ರಾಜಕೀಯದಲ್ಲಿ ಸಂಚಲನ!

  ಶರತ್‌ ಬಚ್ಚೇಗೌಡ, ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಭೇಟಿ| ಕಾಂಗ್ರೆಸ್‌ ಕದ ತಟ್ಟುತ್ತಿದ್ದಾರೆಯೇ ಪಕ್ಷೇತರ ಶಾಸಕ?

 • Sharath Bachegowda

  Karnataka Districts10, Dec 2019, 10:18 AM IST

  ಹೊಸಕೋಟೆ ಯುವಕರಲ್ಲಿ ಸ್ವಾಭಿಮಾನದ ಅಲೆ ಎಬ್ಬಿಸಿದ ಶರತ್‌ ಬಚ್ಚೇಗೌಡ

  ಹೊಸ ಕೋಟೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಬಿಜೆಪಿ ಸಂಸದ ಶರತ್ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದು, ಸ್ವಾಭಿಮಾನಕ್ಕೆ ಗೆಲುವು ಸಿಕ್ಕಂತಾಗಿದೆ.

 • Sharath Bachegowda - NEWSABLE

  Karnataka Districts10, Dec 2019, 8:11 AM IST

  ಬಿಜೆಪಿಗರಿಂದ ಶರತ್ ಬಚ್ಚೇಗೌಡಗೆ ಬೆಂಬಲ

  ಹೊಸಕೋಟೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದ್ದು, ಇವರಿಗೆ ಬಿಜೆಪಿಗರ ಬೆಂಬಲ ದೊರಕಿತ್ತೆನ್ನಲಾಗಿದೆ.

 • Sharath Bachegowda - NEWSABLE

  Karnataka Districts9, Dec 2019, 4:01 PM IST

  ಗೆಲುವಿನ ಸಂಭ್ರಮದ ವೇಳೆ ಶರತ್ ಬಚ್ಚೇಗೌಡ ಬೆಂಬಲಿಗ ಸಾವು

  ಹೊಸಕೋಟೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಗೆಲುವಿನ ಸಂಭ್ರಮಾಚರಣೆ ವೇಳೆ ಅಭಿಮಾನಿಯೋರ್ವರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. 

 • hosakote
  Video Icon

  Politics5, Dec 2019, 3:15 PM IST

  ಹೊಸಕೋಟೆಯಲ್ಲಿ ಗಲಾಟೆ; ಕೈ ಕೈ ಮಿಲಾಯಿಸಿದ ಎಂಟಿಬಿ- ಶರತ್ ಬೆಂಬಲಿಗರು

  • ಹೈವೋಲ್ಟೇಜ್ ಕ್ಷೇತ್ರ  ಹೊಸಕೋಟೆಯಲ್ಲಿ ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿ ಬೆಂಬಲಿಗರ ಫೈಟ್
  • ಬಂಡಾಯ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ಶರತ್ ಬಚ್ಚೇಗೌಡ  
  • ಬಿಜೆಪಿಯಿಂದ ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್‌ ಕಣದಲ್ಲಿ
 • Sharath Bachegowda

  Karnataka Districts5, Dec 2019, 11:54 AM IST

  ಹೊಸಕೋಟೆ BJP, ಕಾಂಗ್ರೆಸ್ ಅಭ್ಯರ್ಥಿಗಳಿಲ್ಲ ತಮ್ಮ ಪರ ಮತ ಹಾಕೋ ಅವಕಾಶ

  ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಹೊಸಕೋಟೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ಮತ ಚಲಾಯಿಸುವಂತಿಲ್ಲ. ಯಾಕೆ ಅಂತೀರಾ..? ಈ ಇಬ್ಬರು ಅಭ್ಯರ್ಥಿಗಳ ಮತ ಬೇರೆ ಕ್ಷೇತ್ರದಲ್ಲಿದೆ.

 • sharath bachegowda mtb nagaraj

  Karnataka Districts4, Dec 2019, 12:44 PM IST

  ಹೊಸ ಕೋಟೆ : ‘ಯಾರ ಅಕ್ರಮ ಆಸ್ತಿ ಎಷ್ಟು ಹೆಚ್ಚಾಗಿದೆ ಗೊತ್ತಾಗಿದೆ’

  ಹೊಸಕೋಟೆ ಕ್ಷೇತ್ರದಲ್ಲಿ ಯಾರ ಆಸ್ತೊ ಹೆಚ್ಚಾಗಿದೆ. ಇಷ್ಟೋಂದು ಹಣ ಕೆಲ ದಿನದಲ್ಲಿ ಹೇಗೆ ಬಂತು ಎನ್ನುವುದು ಜನರಿಗೆ ಗೊತ್ತಾಗಿದೆ ಎಂದು ಶರತ್ ಬಚ್ಚೇಗೌಡ ಎಂಟಿಬಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

 • Sharath Bachegowda

  Karnataka Districts2, Dec 2019, 9:15 AM IST

  ಶರತ್‌ ಬಚ್ಚೇಗೌಡಗೆ ಹಾರ ಹಾಕುವಾಗ ಜೆಡಿಎಸ್‌ ಮುಖಂಡ ಹಠಾತ್‌ ಸಾವು

  ಶರತ್ ಬಚ್ಚೇಗೌಡ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ವೇಳೆ ಅವರಿಗೆ ಹಾರ ಹಾಕುತ್ತಿರುವ ವೇಳೆಯೇ ಜೆಡಿಎಸ್ ಮುಖಂಡರೋರ್ವರು ಹಠಾತ್ ಸಾವಿಗೀಡಾದ ಘಟನೆ ನಡೆದಿದೆ. 

 • Sharath Bachegowda
  Video Icon

  Politics28, Nov 2019, 7:38 PM IST

  ಪ್ರಾದೇಶಿಕ ಪಕ್ಷದ ಬೆಂಬಲವೂ ನಮಗಿಲ್ಲ! ಶರತ್ ಹೀಗಂದಿದ್ಯಾಕೆ?

  ಹೊಸಕೋಟೆ(ನ. 28) ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಬಿಸಿ ರಂಗೇರಿದೆ. ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರಿಗೆ ಠಕ್ಕರ್ ಕೊಡಲು ಸಿದ್ಧರಾಗಿರುವ ಶರತ್ ಬಚ್ಚೇಗೌಡ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ್ದಾರೆ.

  ನಾನು ಗುಂಡಾ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಮೊದಲು ಏನೇನೋ ಹೇಳಿದರು.. ಈಗ ಏನೇನೋ ಹೇಳ್ತಿದ್ದಾರೆ. ಜನ ಯಾವುದನ್ನು ನಂಬಲ್ಲ ಗೆಲ್ಲುವ ವಿಶ್ವಾಸ ನನಗಿದೆ ಎಂದು ಶರತ್ ಬಚ್ಚೇಗೌಡ ತಿಳಿಸಿದರು.

 • MTB

  Karnataka Districts28, Nov 2019, 11:50 AM IST

  ‘ಸಮೀಕ್ಷೆಗಳ ಪ್ರಕಾರ ಎಂ.ಟಿ.ಬಿಗೆ ಸೋಲು ಖಚಿತ’

  ರಾಜ್ಯದ 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ರಂಗೇರಿದೆ. ಇತ್ತ ಹೊಸ ಕೋಟೆಯಲ್ಲಿ ಸ್ಪರ್ಧೆ ಮಾಡಿರುವ ಎಂಟಿಬಿ ನಾಗರಾಜ್ ಸೋಲಿನ ಬಗ್ಗೆ ಭವಿಷ್ಯ ನುಡಿಯಲಾಗಿದೆ. 

 • sharath bachegowda mtb nagaraj
  Video Icon

  Politics27, Nov 2019, 2:02 PM IST

  ಹೊಸಕೋಟೆಯಲ್ಲಿ ರಕ್ತ ರಾಜಕೀಯ! MTB ಬೆಂಬಲಿಗನ ಮೇಲೆ ಹಲ್ಲೆ

  ಮತದಾನ ದಿನಾಂಕ ಸಮೀಪಿಸುತ್ತಿದ್ದಂತೆ ಹೊಸಕೋಟೆ ಚುನವಣಾ ಕಣ ಹೊಡೆದಾಟ ಬಡಿದಾಟಗಳು ಶುರುವಾಗಿದೆ.  ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ. ನಾಗರಾಜ್ ಬೆಂಬಲಿಗನ ಮೇಲೆ ರಾಡ್‌ನಿಂದ ಹಲ್ಲೆ ನಡೆದಿದೆ.  ಶರತ್ ಬಚ್ಚೇಗೌಡ ಬೆಂಬಲಿಗರಿಂದ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.