Asianet Suvarna News Asianet Suvarna News

ವಿಧಾನಸಭಾ ಚುನಾವಣೆ ಹಿನ್ನೆಲೆ: 40 ರೌಡಿಗಳ ಮನೆಗಳ ಮೇಲೆ ಪೊಲೀಸರ ದಾಳಿ

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ವಿಭಾಗದ ಹಲಸೂರು ಗೇಟ್‌ ಉಪವಿಭಾಗದ ಪೊಲೀಸರು 40ಕ್ಕೂ ಅಧಿಕ ರೌಡಿ ಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿ ಎಚ್ಚರಿಕೆ ನೀಡಿದ್ದಾರೆ.

karnataka election 2023 bengaluru police raids on more than 40 rowdies homes gvd
Author
First Published Apr 24, 2023, 7:22 AM IST

ಬೆಂಗಳೂರು (ಏ.24): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ವಿಭಾಗದ ಹಲಸೂರು ಗೇಟ್‌ ಉಪವಿಭಾಗದ ಪೊಲೀಸರು 40ಕ್ಕೂ ಅಧಿಕ ರೌಡಿ ಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಶನಿವಾರ ತಡರಾತ್ರಿಯಿಂದ ಭಾನುವಾರ ಮುಂಜಾನೆವರೆಗೂ ಕೇಂದ್ರ ವಿಭಾಗದ ಹಲಸೂರು ಗೇಟ್‌ ಉಪವಿಭಾಗದ ಪೊಲೀಸರು, ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ರೌಡಿಗಳನ್ನು ಠಾಣೆಗೆ ಕರೆದೊಯ್ದು ಪ್ರಸ್ತುತ ಮಾಡುತ್ತಿರುವ ಕೆಲಸ, ವಾಸ ಸ್ಥಳದ ವಿಳಾಸ ಸೇರಿದಂತೆ ಮಾಹಿತಿ ಪಡೆದಿದ್ದಾರೆ. 

ರೌಡಿಗಳ ಮೊಬೈಲ್‌ ನಂಬರ್‌ಗಳನ್ನು ಸಂಗ್ರಹಿಸಿ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರದಂತೆ ಹಾಗೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿದ್ದಾರೆ. ಕಳೆದೊಂದು ವಾರದಿಂದ ನಗರದಲ್ಲಿ ರೌಡಿ ಶೀಟರ್‌ಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ವಾರೆಂಟ್‌ ಜಾರಿಯಾದರೂ ಕೋರ್ಚ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿ ಶೀಟರ್‌ಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದಾರೆ. ಕೆಲವು ರೌಡಿಗಳ ಮನೆಯಲ್ಲಿ ಮಾರಕಾಸ್ತ್ರ ಪತ್ತೆಯಾಗಿದ್ದು, ಜಪ್ತಿ ಮಾಡಲಾಗಿದೆ. ಪೊಲೀಸರ ದಾಳಿ ಹಿನ್ನೆಲೆಯಲ್ಲಿ ಕೆಲವು ರೌಡಿಗಳು ನಗರ ತೊರೆದಿದ್ದಾರೆ.

230 ರೌಡಿಶೀಟರ್​ಗಳ ಮನೆ ಮೇಲೆ ಪೊಲೀಸರ ದಾಳಿ: 67 ಮಂದಿಯ ಬಂಧನ

ಸಂದೀಪ್ ಪಾಟೀಲ್  ಸೂಚನೆ ಮೇರೆಗೆ ದಾಳಿ: ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್  ಸೂಚನೆ ಮೇರೆಗೆ ಬೆಂಗಳೂರು ಪಶ್ಚಿಮ ವಲಯದದಲ್ಲಿ ಡಿಸಿಪಿಗಳ ನೇತೃತ್ವದಲ್ಲಿ ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ. ಕೇಂದ್ರ ವಿಭಾಗ, ದಕ್ಷಿಣ ವಿಭಾಗ  , ಪಶ್ಚಿಮ ವಿಭಾಗ ಮತ್ತು ಉತ್ತರ ವಿಭಾಗದಲ್ಲಿ ರೌಡಿ ಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ಸುಮಾರು ಐದು ನೂರಕ್ಕೂ ಹೆಚ್ಚು ರೌಡಿಗಳ ನಿವಾಸದ ಮೇಲೆ ದಾಳಿ ಮಾಡಲಾಗಿದ್ದು, ಮಾರಕಾಸ್ತ್ರಗಳು ಲಭ್ಯವಾಗದ ರೌಡಿಗಳಿಗೆ ಚುನಾವಣಾ ಸಮಯದಲ್ಲಿ ಯಾವ ಪಕ್ಷದ ಪರ ಹೋಗಿ ಗಲಾಟೆ ಮಾಡಬಾರದು. ಜೊತೆಗೆ, ರೌಡಿಸಂ ಮಾಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. 

20ಕ್ಕೂ ಅಧಿಕ ರೌಡಿಗಳ ಬಂಧನ: ಇನ್ನು ರಾಜ್ಯ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ರೌಡಿಗಳ ಮನೆಗಳ ದಾಳಿ ವೇಳೆ, ಕೆಲವರು ವಾರೆಂಟ್‌ ನೀಡಿದ್ದರೂ ಪೊಲೀಸ್‌ ಠಾಣೆಗೆ ಹಾಜರಾಗಿರಲಿಲ್ಲ. ಆದ್ದರಿಂದ, ವಾರೆಂಟ್‌ ಜಾರಿಯಲ್ಲಿದ್ದ 20ಕ್ಕೂ ಅಧಿಕ ರೌಡಿಶೀಟರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ. ಹಲವು ದಿನಗಳಿಂದ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡು ತಿರುಗಾಡುತ್ತಿದ್ದ ಕೆಲವು ಸರಗಳ್ಳರನ್ನು ಕೂಡ ಪೊಲೀಸರು ಹೆಡೆಮುರಿಕಟ್ಟಿ ಜೈಲಿಗಟ್ಟಿದ್ದಾರೆ. ಈಗಾಗಲೇ ಕೆಲವು ರೌಡಿಶೀಟರ್‌ಗಳಿಗೆ ಗಡಿಪಾರು ಮಾಡಲಾಗಿದ್ದು, ಈಗ ಬಾಕಿ ಇರುವ ವಾರ್ನಿಂಗ್‌ ನೀಡಲಾಗಿದೆ ಎಂದು ಸೂಚಿಸಿದರು.

ಬಿಎಸ್‌ವೈಯನ್ನು ಜೈಲಿಗೆ ಕಳಿಸಿದ್ದು ಆರೆಸ್ಸೆಸ್‌: ಸಿದ್ದರಾಮಯ್ಯ

ಗಡಿಪಾರು ಮಾಡಿದ್ದ ರೌಡಿಶೀಟರ್‌ ಮಂಜ ಅಲಿಯಾಸ್‌ ಮೊಲ ಪ್ರತ್ಯಕ್ಷ: ಚುನಾವಣೆ ಹಿನ್ನಲೆ ನಗರದ ಎಲ್ಲಾ ರೌಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿರೋ ಪೊಲೀಸರು ಗಡಿಪಾರು ಮಾಡಿರೋ ರೌಡಿಗಳ ಮೇಲೆಯೇ ತೀವ್ರ ನಿಗಾವಹಿಸಿದ್ದಾರೆ. ಆದರೆ ಗಡಿಪಾರಾಗಿ ಆಗಿರೋ ರೌಡಿಶೀಟರ್ ಮಂಜ ಅಲಿಯಾಸ್ ಮೊಲಾ ನಗರದಲ್ಲಿ ಪ್ರತ್ಯಕ್ಷವಾಗಿದ್ದಾನೆ. ಗಡಿಪಾರು ಆದ ರೌಡಿ ನಗರದಲ್ಲೇ ರಾಜಾರೋಷವಾಗಿ ರೌಡಿಸಂ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 2022 ರಲ್ಲಿ ಈಶಾನ್ಯ ವಿಭಾಗದ ಪೊಲೀಸರು ರೌಡಿ ಮಂಜನನ್ನು ಗಡಿಪಾರು ಮಾಡಿದ್ದರು. ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗ್ತಿದ್ದ ಹಿನ್ನಲೆ ಮೋಲಾನನ್ನ ಗಡಿಪಾರು ಮಾಡಲಾಗಿತ್ತು. ಪೊಲೀಸರ ಗಡಿಪಾರಿಗೆ ಡೋಂಟ್ ಕೇರ್ ಎಂಬಂತೆ ಮತ್ತೆ ನಗರಕ್ಕೆ ಬಂದು ಕೊಲೆಯತ್ನ ನಡೆಸಿದ್ದಾನೆ.

Follow Us:
Download App:
  • android
  • ios