Asianet Suvarna News Asianet Suvarna News

Bengaluru Crime: ಶಾಂತಿಭಂಗಕ್ಕೆ ಅವಕಾಶ ಕೊಡಬೇಡಿ: ಪ್ರವೀಣ್‌ ಸೂದ್‌

*  ಭದ್ರತೆ, ಕಾನೂನು ಸುವ್ಯವಸ್ಥೆ ಕುರಿತು ಸುದೀರ್ಘ ಪರಿಶೀಲನೆ
*  ಹಿಜಾಬ್‌, ಹಲಾಲ್‌ ಬಗ್ಗೆ ಚರ್ಚೆ
*  670 ಕೋಟಿ ವೆಚ್ಚದಲ್ಲಿ ಸಿಸಿಟಿವಿ ಅಳವಡಿಕೆ
 

Karnataka DGP Praveen Sood Talks Law and Order in Bengaluru grg
Author
Bengaluru, First Published Apr 7, 2022, 6:58 AM IST | Last Updated Apr 7, 2022, 6:58 AM IST

ಬೆಂಗಳೂರು(ಏ.07):  ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ಹಾಗೂ ಆಡಳಿತ ಸೇರಿದಂತೆ ಬೆಂಗಳೂರು ನಗರ ಪೊಲೀಸ್‌ ಇಲಾಖೆಯ ಕುರಿತು ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌(Praveen Sood) ಅವರು ಸುಮಾರು ಮೂರು ತಾಸಿಗೂ ಅಧಿಕ ಹೊತ್ತು ಪರಿಶೀಲನೆ ನಡೆಸಿದರು.

ಬುಧವಾರ ಸಂಜೆ ನಗರದ ಪೊಲೀಸ್‌ ಆಯುಕ್ತರ ಕಚೇರಿಗೆ ತೆರಳಿ ಪರಿಶೀಲನಾ ಸಭೆ ನಡೆಸಿದ ಅವರು, ಆಡಳಿತ ಸುಧಾರಣೆ ಕೈಗೊಳ್ಳಬೇಕಾದ ಕ್ರಮಗಳು, ಸಂಚಾರ ಸಮಸ್ಯೆಗಳಿಗೆ ಪರಿಹಾರ, ನಾಗರಿಕರ ಸುರಕ್ಷತೆ ಸಂಬಂಧ ರೂಪಿಸಿರುವ ಯೋಜನೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.

Transgenders: ತೃತೀಯ ಲಿಂಗಿಗಳಿಗೂ ಮೀಸಲಾತಿ, ಸರ್ಕಾರ ಮತ್ತು ಪೊಲೀಸ್ ಇಲಾಖೆಯಿಂದ ಮಹತ್ವದ ಹೆಜ್ಜೆ

ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ(Law and Order) ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸೂದ್‌, ಯಾವುದೇ ಕಾರಣಕ್ಕೂ ಶಾಂತಿ ಭಂಗಕ್ಕೆ ಅವಕಾಶ ಕೊಡಬಾರದು ಎಂದು ಸೂಚಿಸಿದರು. ಅಲ್ಲದೆ ಅಪರಾಧ(Crime) ಪ್ರಕರಣಗಳ ಪತ್ತೆದಾರಿಕೆಗೆ ಹೆಚ್ಚಿನ ಆದ್ಯತೆ ಕೊಡಬೇಕು. ಟೋಯಿಂಗ್‌, ಪಾರ್ಕಿಂಗ್‌ ಸೇರಿದಂತೆ ಸಂಚಾರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು. ಸಂಚಾರ ವಿಚಾರವಾಗಿ ಜನ ಮತ್ತು ಪೊಲೀಸರ ನಡುವೆ ಸಂಘರ್ಷಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

670 ಕೋಟಿ ವೆಚ್ಚದಲ್ಲಿ ಸಿಸಿಟಿವಿ ಅಳವಡಿಕೆ

ನಿರ್ಭಯ ನಿಧಿಯ ಸುರಕ್ಷತಾ ನಗರ ಯೋಜನೆಯಡಿ ಬೆಂಗಳೂರು ನಗರದಲ್ಲಿ 670 ವೆಚ್ಚದಲ್ಲಿ ಸಿಸಿಟಿವಿ(CCTV) ಅಳವಡಿಸುವ ಯೋಜನೆಯ ಗುತ್ತಿಗೆ ಪ್ರಕ್ರಿಯೆ ಮುಗಿದಿದೆ. ಈಗಾಗಲೇ ನಗರ ವ್ಯಾಪ್ತಿಯಲ್ಲಿ ಸಿಸಿಟಿವಿ ಅಳವಡಿಸುವ ಸಲುವಾಗಿ ಕಂಬಗಳನ್ನು ನೆಡುವ ಕಾಮಗಾರಿ ಆರಂಭವಾಗಿದೆ ಎಂದು ಡಿಜಿಪಿ ಅವರಿಗೆ ಆಡಳಿತ ವಿಭಾಗದ (ಪ್ರಭಾರಿ) ಹೆಚ್ಚುವರಿ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್‌ ತಿಳಿಸಿದರು. ಈ ಕಾಮಗಾರಿ ಪಾರದರ್ಶಕವಾಗಿರಬೇಕು. ಆದಷ್ಟುಶೀಘ್ರ ಕಾಮಗಾರಿ ಮುಗಿಸುವಂತೆ ಡಿಜಿಪಿ ಹೇಳಿದರು ಎನ್ನಲಾಗಿದೆ.

ಈ ಸಭೆಯಲ್ಲಿ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ಹೆಚ್ಚುವರಿ ಆಯುಕ್ತ (ಪಶ್ಚಿಮ) ಸಂದೀಪ್‌ ಪಾಟೀಲ್‌, ಜಂಟಿ ಆಯುಕ್ತರಾದ ರಮಣ ಗುಪ್ತ ಹಾಗೂ ಡಾ.ಬಿ.ಆರ್‌.ರವಿಕಾಂತೇಗೌಡ ಸೇರಿದಂತೆ ಎಲ್ಲಾ ಡಿಸಿಪಿಗಳು ಹಾಜರಾಗಿದ್ದರು.

ಹಿಜಾಬ್‌, ಹಲಾಲ್‌ ಬಗ್ಗೆ ಚರ್ಚೆ

ಈ ಪರಿಶೀಲನಾ ಸಭೆಯಲ್ಲಿ ಹಿಜಾಬ್‌(Halal), ಆಜಾನ್‌(Aajan) ಹಾಗೂ ಹಲಾಲ್‌ ವಿವಾದದ ಸಹ ಡಿಜಿಪಿ ಮಾಹಿತಿ ಪಡೆದರು. ಅಲ್ಲದೆ ಜೆ.ಜೆ.ನಗರದ ಚಂದ್ರು ಕೊಲೆ(Chandru Murder) ಪ್ರಕರಣ ಕೂಡಾ ಡಿಜಿಪಿ ಚರ್ಚಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೈಸೂರು ಗ್ಯಾಂಗ್‌ರೇಪ್: ಬಾಲಾಪರಾಧಿ ಸೇರಿ 5 ಮಂದಿ ಅರೆಸ್ಟ್, ಹಣ ಸಿಗದಾಗ ಅತ್ಯಾಚಾರ!

ಪೊಲೀಸರ ಅಹವಾಲು, ಕುಂದುಕೊರತೆ ಹಾಗೂ ಅಗತ್ಯತೆಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದ್ದು, ಶಾಂತಿ ಭಂಗಕ್ಕೆ ಅವಕಾಶ ಕೊಡುವುದಿಲ್ಲ ಅಂತ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ತಿಳಿಸಿದ್ದಾರೆ. 

ಶಾಂತಿ ಕದಡಲು ಯತ್ನ: ಡಿಕೆಶಿ ವಿರುದ್ಧ ಬಿಜೆಪಿ ದೂರು

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ(Social Media) ಜನರ ನಡುವೆ ದ್ವೇಷ ಉಂಟು ಮಾಡುವ ಹಾಗೂ ಸಮಾಜದಲ್ಲಿ ಶಾಂತಿ ಕದಡುವ ಸುಳ್ಳು ಸುದ್ದಿಗಳನ್ನು ಪೋಸ್ಟ್‌ ಮಾಡುತ್ತಿರುವ ಆರೋಪದಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಬಿಜೆಪಿ(BJP) ಕಾನೂನು ಪ್ರಕೋಷ್ಠದಿಂದ ಬುಧವಾರ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಅವರಿಗೆ ದೂರು ನೀಡಲಾಗಿತ್ತು. 
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಹಿಂಸೆ, ದ್ವೇಷ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವ ಮಾದರಿಯ ವಿಷಯಗಳನ್ನು ಪೋಸ್ಟ್‌ ಮಾಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿತ್ತು. 
 

Latest Videos
Follow Us:
Download App:
  • android
  • ios