ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ತೂಗುದೀಪಗೆ ಸದ್ಯಕ್ಕಿಲ್ಲ ಮನೆ ಊಟ; ಜು.25ಕ್ಕೆ ಆದೇಶ

ಕೊಲೆ ಕೇಸಿನಲ್ಲಿ ಜೈಲಿನಲ್ಲಿರುವ ವಿಚಾರಣಾಧೀನ ಕೈದಿ ನಟ ದರ್ಶನ್‌ಗೆ ಮನೆ ಊಟ ಕೊಡುವಂತೆ ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯದ ವಕೀಲರ ವಾದ ಪ್ರತಿವಾದ ಆಲಿಸಿ ಜು.25ಕ್ಕೆ ಆದೇಶವನ್ನು ಕಾಯ್ದಿರಿಸಿದ್ದಾರೆ.

Kannada Actor Darshan thoogudeepa home food application order postponed july 25 from court sat

ಬೆಂಗಳೂರು (ಜು.22): ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಕೊಲೆ ಕೇಸಿನಲ್ಲಿ ಜೈಲಿನಲ್ಲಿರುವ ವಿಚಾರಣಾಧೀನ ಕೈದಿ ನಟ ದರ್ಶನ್‌ಗೆ ಮನೆ ಊಟ ಕೊಡುವಂತೆ ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯದ ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಜು.25ಕ್ಕೆ ಆದೇಶವನ್ನು ಕಾಯ್ದಿರಿಸಿದ್ದಾರೆ.

ದರ್ಶನ್ ಗ್ಯಾಂಗ್ ನಿಂದ ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ಜೈಲು ಸೇರಿರು ನಟ ದರ್ಶನ್‌ಗೆ ಮನೆಯೂಟ, ಪುಸ್ತಕ ಹಾಸಿಗೆ ಕೋರಿ ನಟ ದರ್ಶನ್ ಪರ ೀಲ ರಾಘವೇದ್ರ ಅವರು 24ನೇ ಎಸಿಎಂಎಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ವಿಶ್ವನಾಥ್.ಸಿ. ಗೌಡರ್ ಅವರ ಮುಂದೆ ನಟ ದರ್ಶನ್ ಪರ ವಕೀಲ ರಾಘವೇಂದ್ರ ವಾದ ಮಂಡನೆ ಮಾಡಿದ್ದಾರೆ. ಈ ವೇಳೆ ಜೈಲಿನಲ್ಲಿರುವ ವಿಚಾರಾಣಾಧೀನ ಖೈದಿಗಳು ಮನೆಯಿಂದ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶ ಇದೆ. ಒಂದು ವೇಳೆ ತಮ್ಮ ವ್ಯವಸ್ಥೆ ಮಾಡಿಕೊಳ್ಳಲು ಆಗದಿದ್ದಾಗ ಜೈಲಿನಲ್ಲಿ ಪಡೆಯಲು ಅವಕಾಶ ಇದೆ. ಹೊರಗಿನಿಂದ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶ ನೀಡುವ ಅಧಿಕಾರ ಜೈಲು ಐಜಿಪಿಗೆ ನೀಡಲಾಗಿದೆ. ತಮ್ಮ ಸೌಲಭ್ಯಗಳನ್ನು ತಾವು ಪಡೆದುಕೊಳ್ಳಲು ಆಗದೇ ಇದ್ದಾಗ ಮಾತ್ರ ಜೈಲು ಅಥಾರಿಟಿ ನೀಡಬಹುದು ಎಂದು ಕಾನೂನು ಮಾಡಲಾಗಿದೆ ಎಂದು ವಾದ ಮಂಡನೆ ಮಾಡಿದ್ದಾರೆ. 

ನಟ ದರ್ಶನ್ ಜೈಲಲ್ಲಿ ಪ್ರತಿದಿನ ಬಿರಿಯಾನಿ ತಿನ್ನೋಕಾಗಲ್ಲ, ಬೇಧಿ ಆಗಿದ್ರೆ ಸಪ್ಪೆ ಊಟ ಕೊಡಿ; ಎಸ್‌ಪಿಪಿ ಪ್ರಸನ್ನಕುಮಾರ

ವಿಚಾರಾಣಾಧೀನ ಖೈದಿ ಅಥವಾ ಸಿವಿಲ್ ಕೇಸ್ ಆರೋಪಿ ಅಥವಾ ಸತ್ಯಾಗ್ರಹಿ ಆರೋಪಿ ಆಗಿದ್ದರೆ ಮಾತ್ರ ಮನೆಯಿಂದ ಊಟ ಪಡೆಯಲು ಅವಕಾಶ ಇದೆ. ಆದರೆ, ಶಿಕ್ಚೆಗೆ ಗುರಿಯಾಗಿದ್ದರೆ ಮಾತ್ರ ಮೆನಯ ಊಟ ಕಳಲು ಬರುವುದಿಲ್ಲ. ಇನ್ನು ಆರೋಪಿ ಫಿಲ್ಮ್‌ ಸ್ಟಾರ್, ಫಿಲ್ಮ್‌ ಹಿರೋ ಆಗಿದ್ದಾರೆ. ಈ ಪ್ರಕರಣವನ್ನ ಮಿಡಿಯಾ ಫಾಲೋ ಮಾಡ್ತಾ ಇದ್ದಾರೆ. ಹೀಗಾಗಿ, ಜೈಲು ಅಧಿಕಾರಿಗಳು ಮನೆಯಿಂದ ತರಿಸಿದ ಅಥವಾ ಹೊರಗಡೆಯಿಂದ ತರಿಸಿದ ಆಹಾರ, ಇತರೆ ವಸ್ತುಗಳನ್ನ ನೀಡಲು ಅವಕಾಶ ನೀಡಿಲ್ಲ. ಇನ್ನು ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಮನೆ ಊಟ ಕೊಡಲು ಅವಕಾಶ ನೀಡುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ. ಆದರೆ, ದರ್ಶನ್ ಪತ್ನಿ ನೀಡಿದ್ದ ಪತ್ರಕ್ಕೆ ಎಂಡಾರ್ಸ್ಮೆಂಟ್ ಕೂಡ ಅಧಿಕಾರಿಗಳು ಕೊಟ್ಟಿಲ್ಲ ಎಂದು ವಕೀಲರು ಕೋರ್ಟ್‌ಮುಂದೆ ಮಾಹಿತಿ ನೀಡಿದ್ದಾರೆ.

ಜೀವನದ ಹೀರೋಯಿನ್ ಪರಿಚಯಿಸಿದ ತರುಣ್ ಸುಧೀರ್, ಮದುವೆ ದಿನಾಂಕವೂ ಅನೌನ್ಸ್; ಇವರಿಬ್ಬರ ಏಜ್ ಗ್ಯಾಪ್ ಎಷ್ಟಿದೆ ಗೊತ್ತಾ?

ಜೈಲಿನಲ್ಲಿರುವ ಆರೋಪಿಗೆ ಮನೆಯ ಊಟಕ್ಕೆ ಅವಕಾಶ ನೀಡದೇ ಇರೋದು ಆರ್ಟಿಕಲ್ 21 ಅಡಿ ವೈಯಕ್ತಿಕ ಸ್ವಾತಂತ್ರ್ಯ ಕಿತ್ತುಕೊಂಡಂತೆ ಆಗತ್ತದೆ. ಎಲ್ಲರಿಗೂ ಜೀವಿಸುವ ಹಕ್ಕನ್ನ ಸಂವಿಧಾನ ನೀಡಿದೆ. ದರ್ಶನ್ ಕೇವಲ ಫಿಲ್ಮ್ ಸ್ಟಾರ್ ಅನ್ನೋ ಕಾರಣಕ್ಕೆ ಪ್ರತಿಕೂಲ ಪ್ರಚಾರ (Adverse publicity) ಸಿಗುತ್ತಿದೆ. ಹೀಗಾಗಿ, ಆರೋಪಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ ಎಂದು ವಕೀಲ ರಾಘವೇಂದ್ರ ಅವರು ವಾದ ಮಂಡಿಸಿದ್ದಾರೆ.

Latest Videos
Follow Us:
Download App:
  • android
  • ios