Asianet Suvarna News Asianet Suvarna News

ಕೂಲಿ ಕಾರ್ಮಿಕನ ಮೇಲೆ ಗುಂಡು ಹಾರಿಸಿದ ಕನ್ನಡಪರ ಸಂಘಟನೆಯ ಸದಸ್ಯ

ಬೈಕ್ ಶಬ್ದವೆಂದರೆ ನನಗೆ ಆಗುವುದಿಲ್ಲವೆಂದು ಏಕಾಏಕಿ ಕೂಲಿ ಕಾರ್ಮಿಕನ ಮೇಲೆ ಗುಂಡು ಹಾರಿಸಿರುವ ಆಘಾತಕಾರಿ ಘಟನೆ ನಡೆದಿದೆ,

Kannada activists open fire on migrant worker at Thirthahalli Taluk
Author
Bengaluru, First Published May 27, 2020, 9:49 PM IST

ಶಿವಮೊಗ್ಗ, (ಮೇ.27): ಕ್ಷುಲ್ಲಕ ಕಾರಣಕ್ಕೆ ಕೂಲಿ ಕಾರ್ಮಿಕನ ಮೇಲೆ ಕುಣಜೆ ಮಂಜುನಾಥ್ ಗೌಡ ಎಂಬುವವರು ನಾಡ ಬಂದೂಕಿನಿಂದ ಗುಂಡು ಹಾರಿಸಿರುವ ಘಟನೆ ಮಂಗಳವಾರ ರಾತ್ರಿ ತೀರ್ಥಹಳ್ಳಿ ತಾಲೂಕು ಹಣಗೆರೆ ಕಟ್ಟೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹಣಗೆರೆ ಕಟ್ಟೆ ನಿವಾಸಿ ಹಬೀಬ್ ಎಂಬುವವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ  ರಾಮಚಂದ್ರ ಎಂಬುವವರ ಮೇಲೆ ಕುಣಜೆ ಮಂಜುನಾಥ್ ಗೌಡ ಎಂಬುವವರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

ಮದುವೆಗೆ ನಿರಾಕರಣೆ: ಯುವತಿಯ ಮೇಲೆ ಪಾಗಲ್‌ ಪ್ರೇಮಿಯಿಂದ ಮಚ್ಚಿನಿಂದ ಹಲ್ಲೆ

ತೋಟದಿಂದ ತನ್ನ ಮನೆಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಕುಣಜೆ ಮಂಜುನಾಥ್ ಗೌಡ ಹತ್ತಿರದ ಕಟ್ಟೆಯಲ್ಲಿ ಬಂದೂಕು ಹಿಡಿದುಕೊಂಡು ಕುಳಿತಿದ್ದ ಎನ್ನಲಾಗಿದೆ. ಬೈಕ್ ಶಬ್ದವೆಂದರೆ ನನಗೆ ಆಗುವುದಿಲ್ಲವೆಂದು ಏಕಾಏಕಿ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.

ಕುಣಜೆ ಹಾರಿಸಿದ ಗುಂಡು ರಾಮಚಂದ್ರರವರ ತೊಡೆಗೆ ತಗುಲಿ ಕೆಳಗೆ ಬಿದ್ದಿದ್ದಾರೆ. ಈ ಸಂಬಂಧ ಪ್ರಕರಣ ಮಾಳೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಗಾಯಾಳು ರಾಮಚಂದ್ರರವನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಕುಣಜೆ ಮಂಜುನಾಥ್ ಗೌಡ  ಕನ್ನಡಪರ  ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದು 2013 ರಲ್ಲಿ 1062 ಮತಗಳನ್ನ ಪಡೆದು ತೀರ್ಥಹಳ್ಳಿ ವಿಧಾನ ಸಭಾ ಚುನಾವಣೆಯನ್ನ ಸ್ಪರ್ಧಿಸಿ ಸೋತಿದ್ದರು.  ಮತ್ತೆ 2014 ರಲ್ಲಿ ನಡೆದ ಸಂಸದರ ಚುನಾವಣೆಯಲ್ಲಿ ಸ್ಪರ್ಧಿಸಿ ಕೇವಲ 5053 ಮತಗಳನ್ನ ಪಡೆದು ಸೋಲುಕಂಡಿದ್ದರು. 

Follow Us:
Download App:
  • android
  • ios