ಶಿಮ್ಲಾ: ಮನಸ್ಸು ಹುಚ್ಚುಕೋಡಿ. ಕೆಟ್ಟದ್ದಕ್ಕೆ ಬಹು ಬೇಗ ಅಟ್ರ್ಯಾಕ್ಟ್ ಆಗುತ್ತೆ. ಅಂಥದ್ದೇ ಮನಸ್ಸುಳ್ಳ ಹೆಣ್ಣಿವಳು. ಜತೆಯಾಗಿ ಸಪ್ತಪದಿ ತುಳಿದ ಪತಿಯಿದ್ದಾನೆ. ಆದರೂ, ನಿಲ್ಲದ ಲೈಂಗಿಕ ತೃಷೆ. ಸಿಕ್ಕಿದ್ದು ಮೈದುನ. ಸರಿ, ಅವನೊಟ್ಟಿಗೇ ಆಗಾಗ ಪಲ್ಲಂಗ ಏರುತ್ತಿದ್ದಳು. ಅಮ್ಮ ಕದ್ದುಮುಚ್ಚಿ ನಡೆಸುವ ಆ ಆಟವನ್ನು ಪ್ರಪಂಚವೇ ಅರಿಯದ ಏಳು ವರ್ಷದ ಮಗ ನೋಡಿದ್ದಾನೆ. ಆದರೆ...ಮತ್ತೆ ಮುಂದೆ ಆಗಿದ್ದಿದು...

ಪಲ್ಲಂಗದಾಟಕ್ಕೆ ನೋಡಿದ ತನ್ನ ಕಂದನನ್ನೇ ಅಮ್ಮ ಕೊಂದಿದ್ದಾಳೆ! ಗಂಡನ ತಮ್ಮನೊಂದಿಗೆ ನೋಡಬಾರದ ಸ್ಥಿತಿಯಲ್ಲಿದ್ದ ಈ ಅಮ್ಮನನ್ನು ಮಗ ನೋಡಿದ್ದೇ ತಪ್ಪಾಯಿತು. ನೋಡಿದ್ದನ್ನು ಎಲ್ಲಿ ಬಹಿರಂಗ ಮಾಡಿಬಿಡುತ್ತಾನೆಂದು ಭಯಭೀತಳಾದ ತಾಯಿ, ಮೈದುನನ ಜತೆ ಸೇರಿಕೊಂಡು ಹೆತ್ತ ಮಗನನ್ನೇ ಅಮಾನವೀಯವಾಗಿ ಕೊಂದಿದ್ದಾಳೆ. ಈ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು: ಕಂಡಕ್ಟರ್ ಮೇಲಿನ ಆ್ಯಸಿಡ್ ದಾಳಿ‌ ಹಿಂದೆ ಮೈದುನ -ಅತ್ತಿಗೆಯ ಪ್ರೇಮ್ ಕಹಾನಿ

ಕಾಂಗ್ರಾ ಜಿಲ್ಲೆಯ ಇಂದೋರಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇದೀಗ ಆರೋಪಿ ಪೂನಾ ದೇವಿ ಮತ್ತು ಆಕೆಯ ಮೈದುನ ಸೇವಾ ಕುಮಾರ್ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಪೂನಾ ದೇವಿಗೆ ಬಲ್ವಂತ್ ಸಿಂಗ್ ಜತೆ ಮದುವೆಯಾಗಿದ್ದು,  3 ಮಕ್ಕಳಿದ್ದಾರೆ. ಆದರೂ ಪೂನಾ ದೇವಿ ತನ್ನ ಪತಿಗೆ ಗೊತ್ತಿಲ್ಲದಂತೆ ಮೈದುನ ಸೇವಾ ಕುಮಾರ್ ಜತೆ ಅಕ್ರಮ ಸಂಬಂಧ ಹೊಂದಿದ್ದು, ಪತಿ ಇಲ್ಲದಿದ್ದಾಗ ಸೇವಾ ಕುಮಾರ್ ನನ್ನು ಮನೆಗೆ ಕರೆಯಿಸಿಕೊಂಡು ಚಕ್ಕಂದವಾಡುತ್ತಿದ್ದಳು.

ಎಂದಿನಂತೆ ಶುಕ್ರವಾರ ಬಲ್ವಂತ್ ಸಿಂಗ್ ಕೆಲಸಕ್ಕೆಂದು ಮನೆಯಿಂದ ಹೊರ ಹೋಗಿದ್ದಾನೆ. ಆಗ ಪೂನಾ ದೇವಿ,  ಸೇವಾ ಕುಮಾರನಿಗೆ ಕರೆ ಮಾಡಿ ಮನೆಗೆ ಕರೆಯಿಸಿಕೊಂಡಿದ್ದಾಳೆ. ಬಳಿಕ ಇಬ್ಬರೂ ಬೆಡ್‍ರೂಮಿನಲ್ಲಿ ಬೆತ್ತಲಾಗಿ ತಮ್ಮ ಆಟದಲ್ಲಿ ತಲ್ಲೀನರಾಗಿದ್ದಾರೆ. ಅಚಾನಕ್ ಆಗಿ ಇದನ್ನು 7 ವರ್ಷದ ಮಗ ಯುಧ್ವೀರ್ ನೋಡಿದ್ದಾನೆ. ಆತನನ್ನು ಕೊಂದು, ಬಳಿಕ ಮೃತದೇಹವನ್ನು ಸಮೀಪದ ಕಾಡಿನಲ್ಲಿ ಬಿಸಾಡಿ ಏನೂ ಆಗಿಯೇ ಇಲ್ಲವೆಂಬಂತೆ ಸುಮ್ಮನಿದ್ದರು.

ಸಂಜೆ ಮನೆಗೆ ಬಂದ ಪೂನಾ ದೇವಿ ಪತಿ ಬಲ್ವಂತ್ ಸಿಂಗ್, ಯುಧ್ವೀರ್ ಎಲ್ಲಿ ಕಾಣಿಸುತ್ತಿಲ್ವಲ್ಲಾ ಎಂದು ವಿಚಾರಿಸಿದ್ದಾನೆ. ಆಗ ಪತ್ನಿ, ಹೊರಗಡೆ ಆಟವಾಡಲು ಹೋದವನು ಇನ್ನೂ ಮನೆಗೆ ಬಂದಿಲ್ಲ ಎಂದು ಸಬೂಬು ಹೇಳಿದ್ದಾಳೆ. ಇದರಿಂದ ಗಾಬರಿಗೊಂಡ ಬಲ್ವಂತ್ ಸಿಂಗ್ ಎಲ್ಲಾ ಕಡೆ ಹುಡುಕಾಡಿದ್ದಾನೆ. ಆದರೂ ಮಗ ಪತ್ತೆಯಾಗಿಲ್ಲ. ಕೊನೆಗೆ ಬಲ್ವಂತ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ದಾನೆ. 

ಈ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಪೂನಾ ದೇವಿಯ ನಡವಳಿಕೆ ಮೇಲೆ ಅನುಮಾನ ಬಂದಿದೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಪೂನಾ ದೇವಿ ತನ್ನ ಅಸಲಿ ಆಟವನ್ನೆಲ್ಲ ಪೊಲೀಸರ ಮುಂದೆ ಕಕ್ಕಿದ್ದಾಳೆ.  

ಇಂಥ ತಾಯಿಗೆ ಎಂಥ ಶಿಕ್ಷೆ ನೀಡಬೇಕು, ನೀವೇ ಹೇಳಿ...