ಮಂಗಳೂರು: ಕದ್ರಿ ದೇವಸ್ಥಾನ ಉಗ್ರರ ಟಾರ್ಗೆಟ್, ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಪೊಲೀಸ್ ಠಾಣೆಗೆ ದೂರು ನೀಡಿದ ಕದ್ರಿ ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿ ಜಯಮ್ಮ
ಮಂಗಳೂರು(ನ.25): ಮಂಗಳೂರು ಆಟೋ ರಿಕ್ಷಾ ಬಾಂಬ್ ಸ್ಫೋಟದಲ್ಲಿ ಕದ್ರಿ ದೇವಸ್ಥಾನ ಟಾರ್ಗೆಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕದ್ರಿ ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿ ಜಯಮ್ಮ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿರುವುದು ಕಂಡುಬಂದಿದೆ. ಕದ್ರಿ ಮಂಜುನಾಥೇಶ್ವರ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬರುತ್ತಾರೆ. ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಕದ್ರಿ ದೇವಸ್ಥಾನದ ಮೇಲೆ ಬಾಂಬ್ ಬೆದರಿಕೆ ಹಾಕಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಳಬಕು. ಅಲ್ಲದೇ ದೇವಸ್ಥಾನಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
MANGALURU BLAST CASE: ಐಆರ್‌ಸಿ ಉಗ್ರ ಸಂಘಟನೆ ಹೊಣೆ, ಕದ್ರಿ ದೇಗುಲ ಗುರಿ?
ದೂರು ಸ್ವೀಕರಿಸಿದ ಕದ್ರಿ ಠಾಣೆ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ. ಮಂಗಳೂರು ಬಾಂಬ್ ಸ್ಫೋಟದ ಹೊಣೆ ಹೊತ್ತುಕೊಂಡಿರುವ ಇಸ್ಲಾಮಿಕ್ ರೆಸಿಸ್ಟನ್ಸ್ ಕೌನ್ಸಿಲ್ ಕದ್ರಿ ದೇವಸ್ಥಾನ ಟಾರ್ಗೆಟ್ ಬಗ್ಗೆ ಪೋಸ್ಟ್ ಮಾಡಿದೆ. ಅರೇಬಿಕ್ ಭಾಷೆಯಲ್ಲಿ ಬರೆದುಕೊಂಡು ತಮ್ಮ ಟಾರ್ಗೆಟ್ ಕದ್ರಿ ಆಗಿತ್ತು ಅಂತ ಹೇಳಿದ್ದಾರೆ ಉಗ್ರರು.