ಕೆ.ಕಲ್ಯಾಣ್‌ ಪತ್ನಿ ಕುಟುಂಬದ ಆಪ್ತನ ಬಂಧನ: ಮಾಟ, ಮಂತ್ರದ ವಸ್ತುಗಳು ಪತ್ತೆ..!

ಕೆ.ಕಲ್ಯಾಣ್‌ ದಾಂಪತ್ಯದಲ್ಲಿ ಬಿರುಕು ಪ್ರಕರಣಕ್ಕೆ ಟ್ವಿಸ್ಟ್| ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಕುಟುಂಬಕ್ಕೆ ಆಪ್ತನಾಗಿದ್ದ ಶಿವಾನಂದ ವಾಲಿ ವಶಕ್ಕೆ ಪಡೆದ ಪೊಲೀಸರು| ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಡಗಿ ಗ್ರಾಮದವರಾದ ಶಿವಾನಂದ ವಾಲಿ| 

K Kalyan Wifes Family Friend Arrested in Bagalkotgrg

ಬೆಳಗಾವಿ(ಅ.04): ಪ್ರೇಮಕವಿ ಕೆ.ಕಲ್ಯಾಣ್‌ ದಾಂಪತ್ಯದಲ್ಲಿ ಬಿರುಕು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೌದು, ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಕುಟುಂಬಕ್ಕೆ ಆಪ್ತನಾಗಿದ್ದ ಶಿವಾನಂದ ವಾಲಿ ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿವಾನಂದ ವಾಲಿ ಬಳಿ ಮಾಟ ಮಂತ್ರದ ವಸ್ತುಗಳು ಪತ್ತೆಯಾಗಿದ್ದು, ಅವುಗಳನ್ನ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

"

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಡಗಿ ಗ್ರಾಮದವರಾದ ಶಿವಾನಂದ ವಾಲಿ ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಕುಟುಂಬಕ್ಕೆ ಆಪ್ತನಾಗಿದ್ದ ಎಂದು ತಿಳಿದು ಬಂದಿದೆ. ಶಿವಾನಂದ ವಾಲಿ ವಿರುದ್ಧ ಮಾಟ ಮಂತ್ರದ ಆರೋಪ ಕೇಳಿ ಬಂದಿದೆ. 
ಶಿವಾನಂದ ವಾಲಿ ವಿರುದ್ಧ ಕೆ‌.ಕಲ್ಯಾಣ್ ಅವರು ಬೆಳಗಾವಿಯ ಮಾಳಮಾರುತಿ ಪೊಲೀಸ್‌ ಠಾಣೆಯಲ್ಲಿ ಅಪಹರಣ ದೂರು ನೀಡಿದ್ದರು. ನನ್ನ ಪತ್ನಿ, ಅತ್ತೆ, ಮಾವರನ್ನು ಶಿವಾನಂದ ವಾಲಿ ಅಪಹರಣ ಮಾಡಿದ್ದಾರೆಂದು ಕೆ.ಕಲ್ಯಾಣ್ ಆರೋಪಿಸಿದ್ದರು. 

ಪ್ರೇಮಕವಿ ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು, 10.30ಕ್ಕೆ ಸುದ್ದಿಗೋಷ್ಠಿ!

ನನ್ನ ಪತ್ನಿ ಗೀತಾ, ಅತ್ತೆ, ಮಾವ ಅವರನನ್ನ ಪುಸಲಾಯಿಸಿ ಅವರ ಅಕೌಂಟ್‌ನಿಂದ 19 ಲಕ್ಷದ 80 ಸಾವಿರ ರೂ. ಹಣ ತನ್ನ ಅಕೌಂಟ್‌ಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ ಎಂದು ಕೆ.ಕಲ್ಯಾಣ್ ಅವರು ದೂರಿನಲ್ಲಿ ನಮೂದಿಸಿದ್ದಾರೆ. ಅಷ್ಟೇ ಅಲ್ಲದೇ ಜಾಯಿಂಟ್ ಪ್ರಾಪರ್ಟಿ ಆಸ್ತಿ ತನ್ನ ಹೆಸರಿಗೆ ಮಾಡಿಸಿಕೊಂಡ ಆರೋಪ ಶಿವಾನಂದ ವಾಲಿ ವಿರುದ್ಧ ಕೇಳಿ ಬಂದಿದೆ. 

ಕೆ.ಕಲ್ಯಾಣ್ ದೂರಿನ ಮೇರೆಗೆ ಬಾಗಲಕೋಟೆ ಜಿಲ್ಲೆ ಬೀಳಗಿ ಪೊಲೀಸರು ಶಿವಾನಂದ ವಾಲಿ ವಶಕ್ಕೆ ಪಡೆದಿದ್ದರು. ನಿನ್ನೆ ಮಾಳಮಾರುತಿ ಠಾಣೆಗೆ ಬೀಳಗಿ ಪೊಲೀಸರು ಶಿವಾನಂದನನ್ನು ಹಸ್ತಾಂತರಿಸಿದ್ದರು. ಶಿವಾನಂದ ವಾಲಿ ಸದ್ಯ ಮಾಳಮಾರುತಿ ಠಾಣೆ ಪೊಲೀಸರ ವಶದಲ್ಲಿದ್ದಾನೆ. ಶಿವಾನಂದ ವಾಲಿ ಬಳಿ ಮಾಟ, ಮಂತ್ರ ವಸ್ತುಗಳು ಪತ್ತೆಯಾದ ಹಿನ್ನೆಲೆ ಪ್ರಕರಣ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ.
 

Latest Videos
Follow Us:
Download App:
  • android
  • ios