Asianet Suvarna News Asianet Suvarna News

Tumakuru: ಪತ್ರಕರ್ತ, ಲೇಖಕ ನಾಗೇಶ್ ಗುಬ್ಬಿ ರೈಲಿಗೆ ಸಿಲುಕಿ ಸಾವು

ಪತ್ರಕರ್ತ ಹಾಗೂ ಲೇಖಕ ನಾಗೇಶ್ ಗುಬ್ಬಿ ಅವರು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಗುರುವಾರ ಸಂಜೆ ಮನೆಗೆ ದಿನಸಿ ತರಲೆಂದು ಹೋದ ನಾಗೇಶ್ ಗುಬ್ಬಿ ಅವರು ಹಳಿ ದಾಟುವಾಗ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. 
 

Journalist and writer Nagesh Gubbi died after being hit by a train at tumakuru gvd
Author
First Published Sep 27, 2024, 8:26 PM IST | Last Updated Sep 27, 2024, 9:50 PM IST

ತುಮಕೂರು (ಸೆ.27): ಪತ್ರಕರ್ತ ಹಾಗೂ ಲೇಖಕ ನಾಗೇಶ್ ಗುಬ್ಬಿ ಅವರು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಗುರುವಾರ ಸಂಜೆ ಮನೆಗೆ ದಿನಸಿ ತರಲೆಂದು ಹೋದ ನಾಗೇಶ್ ಗುಬ್ಬಿ ಅವರು ಹಳಿ ದಾಟುವಾಗ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಅವರ ಪೋಷಕರು ತಮ್ಮ ಮಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಆಕೆ ಪೊಲೀಸರಿಗೆ ಮಾಹಿತಿ ತಿಳಿಸಿದಾಗ ರೈಲಿಗೆ ಸಿಲುಕಿದ ವಿಷಯ ಬಹಿರಂಗಗೊಂಡಿದೆ.

ಕೂಡಲೇ ರೈಲ್ವೆ ಪೊಲೀಸರು ಶವವನ್ನು ಶವಾಗಾರಕ್ಕೆ ರವಾನಿಸಿದ್ದಾರೆ. ಶುಕ್ರವಾರ ಸಂಜೆ ಗಾರ್ಡನ್ ರಸ್ತೆಯಲ್ಲಿರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು. ಆಕಸ್ಮಿಕ ಸಾವೋ ಅಥವಾ ಆತ್ಮಹತ್ಯೆಯೋ ಎಂಬುದು ಖಚಿತವಾಗಿಲ್ಲ. 44 ವರ್ಷ ವಯಸ್ಸಿನ ನಾಗೇಶ್ ಗುಬ್ಬಿ ಅವಿವಾಹಿತರಾಗಿದ್ದು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಸದ್ಯ  ಮಗ ನಾಗೇಶ್ ಗುಬ್ಬಿ ಸಾವಿನ ಆಘಾತದ ಹಿನ್ನೆಲೆ ಅವರ ತಂದೆಯೂ ಸಾವನಪ್ಪಿದ್ದಾರೆ. ಇನ್ನು ಸಖಿ ಮ್ಯಾಗಜಿನ್‌ನಲ್ಲಿ ಉಪಸಂಪಾದಕರಾಗಿ ನಾಗೇಶ್ ಕಾರ್ಯನಿರ್ವಹಿಸಿದ್ದರು.

ಸಲ್ಲೇಖನ ವೃತ ಕೈಗೊಂಡು ದೇಹತ್ಯಾಗ ಮಾಡಿದ ವೃದ್ಧೆ: ಭಕ್ತಿಪೂರ್ವಕವಾಗಿ ಅಂತ್ಯಕ್ರಿಯೆ ನೆರವೇರಿಸಿದ ಜೈನ ಸಮುದಾಯ

ಸರ್ಜರಿ ವೇಳೆ ಯುವಕ ಸಾವು: ಕಾಸ್ಮೆಟಿಕ್‌ ಸರ್ಜರಿ ವೇಳೆ ಯುವಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ನಗರದ ಕಂಕನಾಡಿ ಬೆಂದೂರ್‌ವೆಲ್‌ನ ಖಾಸಗಿ ಕಾಸ್ಮೆಟಿಕ್‌ ಕ್ಲಿನಿಕ್‌ನ್ನು ಆರೋಗ್ಯ ಇಲಾಖೆ ತಾತ್ಕಾಲಿಕವಾಗಿ ಮುಚ್ಚುಗಡೆ ಮಾಡಿದೆ. ಕಾಸ್ಮೆಟಿಕ್‌ ಸರ್ಜರಿಗಾಗಿ ತೆರಳಿದ್ದ ಉಳ್ಳಾಲದ ಅಕ್ಕರೆಕೆರೆ ನಿವಾಸಿ ಮುಹಮ್ಮದ್‌ ಮಾಝಿನ್‌ ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ನಿರ್ದೇಶನದಂತೆ ಜಿಲ್ಲಾ ಆರೋಗ್ಯಾಧಿಕಾರಿ ಈ ಕ್ಲಿನಿಕ್‌ನ್ನು ಮುಚ್ಚಿಸಿದ್ದಾರೆ.

ಕಾಸ್ಮೆಟಿಕ್‌ ಸರ್ಜರಿಗೆ ಮುನ್ನ ಅರಿವಳಿಕೆ ನೀಡುವಾಗ ಎಸಗಿರುವ ನಿರ್ಲಕ್ಷ್ಯವೇ ಮಾಝಿನ್‌ ಸಾವಿಗೆ ಕಾರಣ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದರು. ಅಲ್ಲದೆ ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದರು. ಆರೋಗ್ಯ ಇಲಾಖೆ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಮಾಝಿನ್‌ ತನ್ನ ಎದೆಯ ಎಡಭಾಗದಲ್ಲಿದ್ದ ಸಣ್ಣ ಗುಳ್ಳೆಯ ನಿವಾರಣೆಗೆ ಶನಿವಾರ ಫ್ಲೋಂಟ್‌ ಕ್ಲಿನಿಕ್‌ಗೆ ತೆರಳಿದ್ದರು. 

ಶ್ರೀದೇವಿಗೆ ಅಹಂಕಾರ ಜಾಸ್ತಿ: ಜಯಪ್ರದಾ ಅಂದ್ರೆ ಅತಿಲೋಕ ಸುಂದರಿಗೆ ಅಷ್ಟು ಕೋಪ ಯಾಕೆ?

ಅಲ್ಲಿ ಸರ್ಜರಿ ವೇಳೆ ಮೃತಪಟ್ಟಿದ್ದರು. ವೈದ್ಯರ ನಿರ್ಲಕ್ಷ್ಯದಿಂದ ಸಾವಿಗೀಡಾಗಿದ್ದಾಗಿ ಕುಟುಂಬಸ್ಥರು ಆರೋಪಿಸಿದ ಹಿನ್ನೆಲೆಯಲ್ಲಿ ಆರೋಗ್ಯಾಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. ಅಲ್ಲದೆ ಜಿಲ್ಲಾಡಳಿತ ಕೂಡ ತನಿಖೆ ನಡೆಸುವಂತೆ ಸೂಚಿಸಿದೆ. ಕ್ಲಿನಿಕ್‌ನಲ್ಲಿ ಸೂಕ್ತ ಮೂಲ ಸೌಕರ್ಯಗಳು ಇಲ್ಲದಿರುವುದು ಪ್ರಾಥಮಿಕ ತನಿಖೆ ವೇಳೆ ಗಮನಕ್ಕೆ ಬಂದಿದೆ. ಪ್ರಕರಣದ ತನಿಖೆಗೆ ತಜ್ಞರ ಸಮಿತಿ ರಚಿಸಲಾಗಿದೆ. ಸಮಿತಿ ತನಿಖೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios