ಏರ್‌ಪೋರ್ಟ್‌ನಲ್ಲಿ ಚೆಕ್ಕಿಂಗ್ ವೇಳೆ  ಬ್ಯಾಗ್‌ನಲ್ಲಿ ಬಾಂಬ್‌ ಇದೆ ಎಂದು ಜೋಕ್ ಮಾಡಿದ ಯುವಕನನ್ನು ಬಂಧಿಸಿದ ಪೊಲೀಸರು. ಸಜ್ಜು ಕುಮಾರ್, ಬಂಧಿತ ಆರೋಪಿ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ ಸಜ್ಜು ಕುಮಾರ.

ಬೆಂಗಳೂರು (ಜ.30): ಏರ್‌ಪೋರ್ಟ್‌ನಲ್ಲಿ ಚೆಕ್ಕಿಂಗ್ ವೇಳೆ ಬ್ಯಾಗ್‌ನಲ್ಲಿ ಬಾಂಬ್‌ ಇದೆ ಎಂದು ಜೋಕ್ ಮಾಡಿದ ಯುವಕನನ್ನು ಬಂಧಿಸಿದ ಪೊಲೀಸರು.

ಸಜ್ಜು ಕುಮಾರ್, ಬಂಧಿತ ಆರೋಪಿ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ ಸಜ್ಜು ಕುಮಾರ. ಕೆಲಸದ ನಿಮಿತ್ತ ಬೆಂಗಳೂರು ಏರ್ಪೋರ್ಟ್ ನಿಂದ ಕೊಚ್ಚಿನ್ ಗೆ ತೆರಳುತ್ತಿದ್ದ ಸಜ್ಜು ಕುಮಾರ್. ಈ ವೇಳೆ ಏರ್‌ಪೋರ್ಟ್ ಭದ್ರತಾ ಸಿಬ್ಬಂದಿ ಬ್ಯಾಗ್ ಪರಿಶೀಲನೆ ನಡೆಸಿದ್ದರು. ಅಧಿಕಾರಿಗಳು ಬ್ಯಾಗ್ ಪರಿಶೀಲನೆ ವೇಳೆ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದಿದ್ದ ಆರೋಪಿ. ಬಾಂಬ್ ಇದೆ ಎಂದಾಕ್ಷಣೆ ಒಂದು ಕ್ಷಣ ಬೆಚ್ಚಿಬಿದ್ದ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದ್ದ ಅಧಿಕಾರಿಗಳು. ಆದರೆ ಬ್ಯಾಗ್‌ನಲ್ಲಿ ಯಾವುದೇ ಸ್ಫೋಟಕ ಪತ್ತೆಯಾಗಿರಲಿಲ್ಲ. ಏರ್‌ಪೋರ್ಟ್‌ನಲ್ಲಿ ಉದ್ಧಟತನ ತೋರಿದ ಆರೋಪಿ ಸಜ್ಜು ಕುಮಾರ್ ಬಂಧಿಸಿದ ಪಡೆದ ಪೊಲೀಸರು. ಪೊಲೀಸರಿಂದ ಮುಂದುವರಿದ ವಿಚಾರಣೆ.

ಸಮಯ ಕ್ಷಮತೆಯಲ್ಲಿ ಬೆಂಗ್ಳೂರು ಏರ್‌ಪೋರ್ಟ್ ಜಗತ್ತಿನಲ್ಲೇ ನಂಬರ್‌ 3..!