Asianet Suvarna News Asianet Suvarna News

ಫೋನ್‌ ಕಾಲ್‌ ವೇಳೆ ವಿಪರೀತ ಅಳುತ್ತಿದ್ದ 2 ವರ್ಷದ ಪುತ್ರನನ್ನು ಕತ್ತು ಹಿಸುಕಿ ಸಾಯಿಸಿದ ತಾಯಿ!

ಮಗುವನ್ನು ಕೊಂದಿದ್ದಾಳೆ ಎಂದು ಮಗುವಿನ ಅಜ್ಜ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ತಾಯಿಯನ್ನು ತಕ್ಷಣವೇ ಬಂಧಿಸಿದ್ದಾರೆ. 
 

Jharkhand woman strangles 2 year old son in Giridih after Annoyed by constant crying during phone call san
Author
First Published Dec 30, 2023, 5:23 PM IST

ರಾಂಚಿ (ಡಿ.30): ಅಳುವ ಮಕ್ಕಳನ್ನು ಸಂತೈಸಲು ತಾಯಿಯಾದವಳು ಏನೆನೆಲ್ಲಾ ಮಾಡುತ್ತಾಳೆ. ಲಾಲಿ ಹಾಡ್ತಾಳೆ, ಕಥೆ ಹೇಳ್ತಾಳೆ.. ಹೀಗೆಲ್ಲಾ ಇರುವಾಗ ಜಾರ್ಖಂಡ್‌ನಲ್ಲಿ ಅಮಾನುಷ ಎನ್ನುವಂಥ ಘಟನೆ ನಡೆದಿದೆ. ಜಾರ್ಖಂಡ್‌ನ ಗಿರಿಧ್‌ನಲ್ಲಿ ತಾಯಿಯೊಬ್ಬಳು 2 ವರ್ಷದ ಮಗುವಿನ ಅಳುವಿನಿಂದ ಆದ ಕಿರಿಕಿರಿಯಿಂದ ಸಿಟ್ಟಿಗೆದ್ದು ಮಗುವಿನ ಕತ್ತು ಹಿಸುಕಿ ಸಾಯಿಸಿದ ಭೀಕರ ಘಟನೆ ನಡೆದಿದೆ. ಗುರುವಾರ ರಾತ್ರಿ ಬೆಂಗಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿ ಮಹಿಳೆಯನ್ನು ಅಫ್ಸಾನಾ ಖಾತೂನ್ ಎಂದು ಗುರುತಿಸಲಾಗಿದ್ದು, ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ರಾತ್ರಿ ಅಫ್ಸಾನಾ ಖಾತೂನ್‌ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಆಕೆಯ 2 ವರ್ಷದ ಪುತ್ರ ನಿರಂತರವಾಗಿ ಅಳುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಮಹಿಳೆ ತನ್ನ 2 ವರ್ಷದ ಪುತ್ರ ಆಸಿಫ್‌ ಅನ್ಸಾರಿಯ ಪ್ರಾಣವನ್ನೇ ತೆಗೆದಿದ್ದಾಳೆ ಎಮದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸ್ ತಂಡವು ಮಹಿಳೆಯ ಮನೆಗೆ ತಲುಪಿ ಮಗುವಿನ ದೇಹವನ್ನು ಅದರ ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ. ಮಹಿಳೆಯನ್ನು ಶನಿವಾರ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

ಮಗುವಿನ ಅಜ್ಜ ರೋಜನ್‌ ಅನ್ಸಾರಿ, ಅಫ್ಸಾನಾ ಖಾತೂನ್‌ ತನ್ನ ಮೊಮ್ಮಗನನ್ನು ಕೊಂದಿದ್ದಾಳೆ ಎಂದು ಆರೋಪಿಸಿ ಪೊಲೀಸರಿಗೆ ದೂರು ದಾಖಲಿಸಿದ್ದಾಳೆ. ತನ್ನ ಪತಿಯೊಂದಿಗೆ ಜಗಳವಾಡಿದ ನಂತರ ಅಫ್ಸಾನಾ ತನ್ನ ಕಿರಿಯ ಮಗನೊಂದಿಗೆ ಕೋಣೆಗೆ ಹೋಗಿ ಬೀಗ ಹಾಕಿಕೊಂಡಿದ್ದಳು ಎಂದು ಅವರು ಆರೋಪಿಸಿದ್ದಾರೆ. ಮಗು ಅಳಲು ಆರಂಭಿಸಿದಾಗ ಆಕೆಯ ಕತ್ತು ಹಿಸುಕಿ ಅವಳು ಸಾಯಿಸಿದ್ದಾಳೆ ಎಂದು ದೂರಿದ್ದಾರೆ.

ಕೆಲ ಸಮಯದ ಬಳಿಕ ಆಕೆ ಕೋಣೆಯ ಬಾಗಿಲನ್ನು ತೆಗೆದಿದ್ದಾಳೆ. ಗಂಡ ಕೋಣೆಯ ಒಳಹೊಕ್ಕು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ 2 ವರ್ಷದ ಪುತ್ರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಈ ವೇಳೆಗಾಗಲೇ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.

ಅಮೆರಿಕದಲ್ಲಿ ಐಷಾರಾಮಿ ಬಂಗಲೆ ಅರ್ಧಬೆಲೆಗೆ ಮಾರಿ ಸಂಸಾರ ಸಮೇತ ಸಾವಿಗೆ ಶರಣಾದ ಭಾರತೀಯ ಕುಟುಂಬ!

ರೋಜನ್ ಅವರ ದೂರಿನ ಆಧಾರದ ಮೇಲೆ ಆರೋಪಿ ಅಫ್ಸಾನಾ ವಿರುದ್ಧ ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆ ವೇಳೆ ಮಹಿಳೆ ಪೊಲೀಸರಿಗೆ ತಿಳಿಸಿದ್ದು, ತನ್ನ ಮಗನನ್ನು ಕೊಲ್ಲುವ ಉದ್ದೇಶ ತನಗೆ ಇರಲಿಲ್ಲ ಮತ್ತು ಆತ ಅಳುತ್ತಿದ್ದಂತೆಯೇ ತಳ್ಳಿದ ಬಳಿಕ ಹಾಸಿಗೆಯಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ. ಅಫ್ಸಾನಾ ಆರು ವರ್ಷಗಳ ಹಿಂದೆ ನಿಜಾಮುದ್ದೀನ್ ಅವರನ್ನು ಮದುವೆಯಾಗಿದ್ದರು ಮತ್ತು ದಂಪತಿಗೆ ನಾಲ್ಕು ಮತ್ತು ಎರಡು ವರ್ಷದ ಇಬ್ಬರು ಗಂಡು ಮಕ್ಕಳಿದ್ದರು.

ತಂಗಿ ಪುಸಲಾಯಿಸಿ ಕಾಮಕ್ಕೆ ಬಳಸಿಗೊಂಡ ಗಂಡ, ಮರ್ಮಾಂಗ ಕತ್ತರಿಸಿ ಟಾಯ್ಲೆಟ್‌ಗೆ ಹಾಕಿದ ಪತ್ನಿ!

Follow Us:
Download App:
  • android
  • ios