ಮತ್ತೊಬ್ಬ ಜೆಇಇ ವಿದ್ಯಾರ್ಥಿ ನೇಣಿಗೆ ಶರಣು: ಈ ವರ್ಷದ 13ನೇ ಕೇಸ್
ನೀಟ್, ಜೆಇಇ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿದ್ದ ಮತ್ತೋರ್ವ ವಿದ್ಯಾರ್ಥಿ ಕೋಟಾದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. 16 ವರ್ಷದ ಸಂದೀಪ್ ಕುಮಾರ್ ಕುರ್ಮಿ, ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದು, ಇದು ವರ್ಷದ 13ನೇ ಆತ್ಮಹತ್ಯೆ ಪ್ರಕರಣವಾಗಿದೆ.
ಕೋಟಾ (ಜು.05): ನೀಟ್, ಜೆಇಇ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿದ್ದ ಮತ್ತೋರ್ವ ವಿದ್ಯಾರ್ಥಿ ಕೋಟಾದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. 16 ವರ್ಷದ ಸಂದೀಪ್ ಕುಮಾರ್ ಕುರ್ಮಿ, ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದು, ಇದು ವರ್ಷದ 13ನೇ ಆತ್ಮಹತ್ಯೆ ಪ್ರಕರಣವಾಗಿದೆ. ಬುಧವಾರ ರಾತ್ರಿ ಸಂದೀಪ್ ಪಿಜಿ ಕೋಣೆ ಬಾಗಿಲು ತೆರೆಯದನ್ನು ಕಂಡ ಸ್ನೇಹಿತರು ವಾರ್ಡನ್ ಗಮನಕ್ಕೆ ತಂದು ಪೊಲೀಸರಿಗೆ ತಿಳಿಸಿದ್ದಾರೆ.
ಬಳಿಕ ಪೊಲೀಸರು ಸಂದೀಪ್ ಶವವನ್ನು ಹೊರತೆಗೆದಿದ್ದಾರೆ. ಸಂದೀಪ್ ಹಾಗೂ ಆತನ ಸೋದರ ಇಬ್ಬರೂ ಕೋಟಾದಲ್ಲಿ ಪ್ರತ್ಯೇಕ ಪಿಜಿಯಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದರು. ಇವರಿಗೆ ಪೋಷಕರು ಇಲ್ಲದ ಕಾರಣ ಇವರ ಸಂಬಂಧಿ ಹಣಕಾಸಿನ ನೆರವು ನೀಡುತ್ತಿದ್ದರು. ಕಳೆದ ವರ್ಷ 26 ವಿದ್ಯಾರ್ಥಿಗಳು ಅಸುನೀಗಿದ್ದರು. ಸಂದೀಪ್ ವಾಸಿಸುತ್ತಿದ್ದ ಪಿಜಿಯಲ್ಲಿ ಆತ್ಮಹತ್ಯೆ ತಡೆಯುವ ಸ್ಪ್ರಿಂಗ್ ಫ್ಯಾನ್ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಡ್ರಗ್ಸ್ ಸೇವನೆ ಮಾಡುತ್ತಿದ್ದ ಮಗನನ್ನೇ ಪೊಲೀಸರಿಗೆ ಹಿಡಿದು ಕೊಟ್ಟ ತಾಯಿ: ಗಾಂಜಾ ಸೇವನೆ ಮಾಡುತ್ತಿದ್ದ ಮಗನನ್ನು ತಾಯಿಯೇ ಪೊಲೀಸರ ಕೈಗೆ ಒಪ್ಪಿಸಿದ ಅಚ್ಚರಿಯ ಘಟನೆ ಚೆನ್ನೈನಲ್ಲಿ ನಡೆದಿದೆ. ಸರಕು ವಾಹನದ ಚಾಲಕನಾದ ಶ್ರೀರಾಮ್ ಇತ್ತೀಚಿಗೆ ಗಾಂಜಾ ಸೇವನೆ ಅಭ್ಯಾಸ ಬೆಳೆಸಿಕೊಂಡಿದ್ದ. ಈ ವಿಚಾರ ಗಮನಿಸಿದ ತಾಯಿ ಭಾಗ್ಯಲಕ್ಷ್ಮೀ ತಾವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಲೈಂಗಿಕ ಕಿರುಕುಳ: ಪಶ್ಚಿಮ ಬಂಗಾಳ ರಾಜ್ಯಪಾಲರ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ
ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಶ್ರೀರಾಮ್ ಮನೆ ಮೇಲೆ ದಾಳಿ ಮಾಡಿದ್ದರು. ಈ ವೇಳೆಯಲ್ಲಿ ಪೊಲೀಸರು 2 ಲಕ್ಷ ರು ಮೌಲ್ಯದ 630 ಮಿಲೀ ಗಾಂಜಾ ಎಣ್ಣೆ ವಶ ಪಡಿಸಿಕೊಂಡಿದ್ದಾರೆ. ಬಳಿಕ ಆತನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಒಡಿಶಾ, ತಮಿಳುನಾಡು, ಕೇರಳದಲ್ಲಿ ನಡೆಯುತ್ತಿದ್ದ ಗಾಂಜಾ ಮಾರಾಟ ಜಾಲವನ್ನು ಬೇಧಿಸಿದ್ದಾರೆ.