Asianet Suvarna News Asianet Suvarna News

ಕುಲ್ಹಡ್ ಪಿಝಾ ಜೋಡಿಯ ಖಾಸಗಿ ವಿಡಿಯೋ ಲೀಕ್, ಸೇಡು ತೀರಿಸಲು ಮಹಿಳಾ ಉದ್ಯೋಗಿಯ ಅವಾಂತರ!

ಸೋಶಿಯಲ್ ಮಿಡಿಯಾ ಇನ್‌ಫ್ಲುಯೆನ್ಸರ್ ಜೋಡಿಯ ಖಾಸಗಿ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಕುಲ್ಹಡ್ ಪಿಝಾ ಎಂಬ ಶಾಪ್ ನಡೆಸುತ್ತಿದ್ದ ಈ ಜೋಡಿ ಇತ್ತೀಚೆಗಷ್ಟೇ ಮಹಿಳಾ ಉದ್ಯೋಗಿಯನ್ನು ಕೆಲಸದಿಂದ ಕಿತ್ತು ಹಾಕಿದ್ದರು. ಈ ಸೇಡು ತೀರಿಸಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಖಾಸಗಿ ವಿಡಿಯೋವನ್ನು ಲೀಕ್ ಮಾಡಿದ್ದಾರೆ.

Jalandhar Kulhad pizza couple private fake video leak case ex employee arrested for blackmail ckm
Author
First Published Sep 23, 2023, 8:50 PM IST

ಜಲಂಧರ್(ಸೆ.23) ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಜಲಂಧರ್‌ನ ಜನಪ್ರಿಯ ಕುಲ್ಹಡ್ ಪಿಝಾ ಜೋಡಿಯ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಮಾಡಲಾಗಿದೆ. ಕೆಲಸದಿಂದ ತೆಗೆದುಹಾಕಿದ್ದಾರೆ ಅನ್ನೋ ಕಾರಣಕ್ಕೆ ಮಹಿಳಾ ಉದ್ಯೋಗಿ ಮಾಡಿದ ಅವಾಂತರಕ್ಕೆ ಇದೀಗ ನ್ಯಾಯಯುತವಾಗಿ ತಮ್ಮ ಉದ್ಯಮದಲ್ಲಿ ಮಗ್ನರಾಗಿದ್ದ ಜೋಡಿಯ ಮಾನ ಹರಾಜು ಹಾಕುವ ಕೆಲಸ ನಡೆದಿದೆ. ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಬಳಸಿ ಕುಲ್ಹಡ್ ಜೋಡಿಯ ನಕಲಿ ಖಾಸಗಿ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ಕುರಿತು ಸ್ಪಷ್ಟನೆ ನೀಡಿದ್ದ ಕುಲ್ಹಡ್ ಜೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಇದೀಗ ಪೊಲೀಸರು ಮಾಜಿ ಮಹಿಳಾ ಉದ್ಯೋಗಿಯನ್ನು ಬಂಧಿಸಿದ್ದಾರೆ.

ಜಲಂಧರ್‌ನಲ್ಲಿ ಕುಲ್ಹಡ್ ಪಿಝಾ ಅನ್ನೋ ಫುಡ್ ಶಾಪ್ ನಡೆಸುತ್ತಿರುವ ಈ ಜೋಡಿ, ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ವಿವಿಧ ಬಗೆಯ ತಿನಿಸುಗಳ ಕುರಿತು ಬೆಳಕು ಚೆಲ್ಲುವ ಈ ಜೋಡಿ ಸಾಮಾಜಿಕ ಜಾಲಾತಣದಲ್ಲಿ ಅತೀ ಹೆಚ್ಚಿನ ಫಾಲೋವರ್ಸ್ ಪಡೆದಿದ್ದಾರೆ. ಈ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯನ್ನು ಸರಿಯಾಗಿ ಕೆಲಸ ಮಾಡುತ್ತಿಲ್ಲ ಹಾಗೂ ಗ್ರಾಹಕರಿಂದ ಬಂದಿರುವ ಹಲವು ದೂರುಗಳ ಆಧರಿಸಿ ಕೆಲಸದಿಂದ ವಜಾ ಮಾಡಲಾಗಿತ್ತು.

ಬಟ್ಟೆ ಬದಲಾಯಿಸಿದ ವಿಡಿಯೋ ಲೀಕ್; ಪೊಲೀಸ್ ಸ್ಟೇಷನ್‌ ಮೆಟ್ಟಿಲೇರಿದ ಡಾನ್ಸರ್

ಕೆಲಸ ಕಳೆದುಕೊಂಡು ಮಹಿಳಾ ಉದ್ಯೋಗಿ, ಇತರ ಕೆಲ ಗೆಳೆಯರ ಸಹಾಯ ಪಡೆದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಕೆ ಮಾಡಿ ಕುಲ್ಹಡ್ ಜೋಡಿಯ ನಕಲಿ ಖಾಸಗಿ ವಿಡಿಯೋ ಸೃಷ್ಟಿಸಿದ್ದಾರೆ. ಬಳಿಕ ಇನ್‌ಸ್ಟಾಗ್ರಾಂ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ. ಇತ್ತ ಮಹಿಳಾ ಉದ್ಯೋಗಿ, ನೇರವಾಗಿ ಕುಲ್ಹಡ್ ಜೋಡಿಗೆ ಕರೆ ಮಾಡಿ 20,000 ರೂಪಾಯಿ ನೀಡಿದರೆ ವಿಡಿಯೋ ಡಿಲೀಟ್ ಮಾಡುವುದಾಗಿ ಹೇಳಿದ್ದಾರೆ. ಇಲ್ಲದಿದ್ದರೆ ಇತರ ಕೆಲ ಖಾಸಗಿ ವಿಡಿಯೋವನ್ನು ಸಾಮಜಿಕ ಮಾಧ್ಯಮದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾಳೆ.

ಈ ಬೆದರಿಕೆ ಕರೆ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಖಾಸಗಿ ವಿಡಿಯೋ ಹರಿದಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಇನ್‌ಸ್ಟಾಗ್ರಾಂ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮದಲ್ಲಿ ಈ ಜೋಡಿ ಸ್ಪಷ್ಟನೆ ನೀಡಿತು. ಇದು ಎಐ ಬಳಸಿ ನಕಲಿ ವಿಡಿಯೋ ಸೃಷ್ಟಿಸಲಾಗಿದೆ.ಈ ವಿಡಿಯೋಗಳನ್ನು ಪಸರಿಸುವ ಪ್ರಯತ್ನ ಮಾಡಬೇಡಿ. ಇದು ಸಂಪೂರ್ಣ ನಕಲಿ ಎಂದು ಸ್ಪಷ್ಟನೆ ನೀಡಿತ್ತು. ಇದೇ ವೇಳೆ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು. 

ಪಾಕ್ ನಾಯಕ ಬಾಬರ್ ಅಜಂ ಖಾಸಗಿ ವಿಡಿಯೋ, ಚಾಟ್ ಲೀಕ್‌..! ಸಹ ಆಟಗಾರನ ಗೆಳತಿಯ ಜತೆ ಲವ್ವಿಡವ್ವಿ..?

ಗರ್ಭಿಣಿಯಾಗಿರುವ ಪತ್ನಿ ಆಸ್ಪತ್ರೆಯಲ್ಲಿದ್ದಾಳೆ. ಹೀಗಾಗಿ ಕಳೆದ ಕೆಲ ದಿನಗಳಿಂದ ಆಸ್ಪತ್ರೆ ಓಡಾಟ, ಉದ್ಯಮಗಳಲ್ಲಿ ಬ್ಯೂಸಿಯಾಗಿದ್ದೆ. ಹೀಗಾಗಿ ಈ ಕುರಿತು ಗಮನ ನೀಡಲು ಸಾಧ್ಯವಾಗಿಲ್ಲ. ಇದರ ನಡುವೆ ಕೆಲ ಕಿಡಿಗೇಡಿಗಳು ಈ ರೀತಿ ನಕಲಿ ವಿಡಿಯೋವನ್ನು ಹರಿಬಿಟ್ಟಿದ್ದಾರೆ ಎಂದು ಕುಲ್ಹಡ್ ಪಿಝಾ ಜೋಡಿ ಸ್ಪಷ್ಟನೆ ನೀಡಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಕುರಿತು ತನಿಖೆ ನಡೆಸಿದ್ದಾರೆ. ಈ ವೇಳೆ ಪಿಝಾ ಶಾಪ್‌ನಿಂದ ವಜಾಗೊಂಡಿದ್ದ ಮಹಿಳಾ ಉದ್ಯೋಗಿಯನ್ನು ಪೊಲೀಸರು ಬಂಧಿಸಿದ್ದಾರೆ. 
 

Follow Us:
Download App:
  • android
  • ios