ಪಾಕ್ ನಾಯಕ ಬಾಬರ್ ಅಜಂ ಖಾಸಗಿ ವಿಡಿಯೋ, ಚಾಟ್ ಲೀಕ್..! ಸಹ ಆಟಗಾರನ ಗೆಳತಿಯ ಜತೆ ಲವ್ವಿಡವ್ವಿ..?
ಪಾಕ್ ನಾಯಕ ಬಾಬರ್ ಅಜಂ ಖಾಸಗಿ ವಿಡಿಯೋ ಲೀಕ್?
ಸಹ ಆಟಗಾರನ ಗೆಳತಿಯ ಜತೆ ಬಾಬರ್ ಅಜಂ ಲವ್ವಿಡವ್ವಿ?
ಮೌನಕ್ಕೆ ಶರಣಾದ ಪಾಕ್ ನಾಯಕ ಬಾಬರ್ ಅಜಂ

ಇಸ್ಲಾಮಾಬಾದ್(ಜ.17): ತವರಿನಲ್ಲಿ ನ್ಯೂಜಿಲೆಂಡ್ ಎದುರು ಆಘಾತಕಾರಿಯಾಗಿ ಏಕದಿನ ಸರಣಿ ಸೋತು ಮುಖಭಂಗ ಅನುಭವಿಸಿರುವ ಪಾಕಿಸ್ತಾನ ತಂಡಕ್ಕೆ ಇದೀಗ ಮತ್ತೊಂದು ಮುಜುಗರ ಎದುರಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಪಾಕಿಸ್ತಾನ ಬಾಬರ್ ಅಜಂ ಅವರು ನಡೆಸಿದ್ದಾರೆ ಎನ್ನಲಾದ ಖಾಸಗಿ ಚಾಟ್, ಖಾಸಗಿ ವಿಡಿಯೋ ಕಾಲ್, ಹಾಗೂ ಆಡಿಯೋ ಫೈಲ್‌ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಬಾಬರ್ ಅಜಂ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಪ್ರತಿಯೊಬ್ಬ ಕ್ರೀಡಾಪಟುವಿನ ಜೀವನದಲ್ಲಿ ಏರಿಳಿತಗಳು ಇದ್ದೇ ಇರುವುದು ಸಾಮಾನ್ಯ. ಆದರೆ ಪಾಕಿಸ್ತಾನದ ಅತ್ಯಂತ ತಾರಾ ಬ್ಯಾಟರ್ ಬಾಬರ್ ಅಜಂ, ಇದೀಗ ಕೆಟ್ಟ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಪಾಕ್ ನಾಯಕ ನಡೆಸಿದ್ದಾರೆ ಎನ್ನಲಾದ ವಾಟ್ಸ್‌ಅಪ್ ವಿಡಿಯೋ ಕಾಲ್, ಚಾಟ್ ಹಾಗೂ ವಾಯ್ಸ್ ಮೆಸೇಜ್‌ಗಳು ಇದೀಗ ಪಾಕಿಸ್ತಾನ ಕ್ರಿಕೆಟ್ ವಲಯದಲ್ಲಿ ಹೊಸ ಸಂಚಲವನ್ನೇ ಸೃಷ್ಟಿಸಿದೆ. ಹಲವು ಅಭಿಮಾನಿಗಳು, ಬಾಬರ್ ಅಜಂ ಈ ಎಲ್ಲಾ ಸೆಕ್ಸ್‌ಟಿಂಗ್(ಸೆಕ್ಸ್ ಸಂಬಂದಿತ ಚಾಟಿಂಗ್) ಪಾಕಿಸ್ತಾನದ ಸಹ ಕ್ರಿಕೆಟಿಗನ ಗೆಳತಿಯ ಜತೆ ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ವಿಡಿಯೋಗಳು, ಚಾಟ್‌ಗಳು, ಆಡಿಯೋ ಫೈಲ್‌ಗಳು ನಿರಂತರವಾಗಿ ಬಾಬರ್ ಅಜಂ ಜತೆ ಥಳುಕು ಹಾಕಿಕೊಳ್ಳುತ್ತಿದ್ದು, ಹಲವು ಮಂದಿ, ಬಾಬರ್ ಅಜಂ ಅವರ ನಡೆಯನ್ನು ಕಟುವಾಗಿ ಟೀಕಿಸಿದ್ದರೇ, ಮತ್ತೆ ಕೆಲವರು ಬಾಬರ್ ಅಜಂ ಅವರನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವನ್ನೂ ನಡೆಸಿದ್ದಾರೆ.
SA20 League: ಡೆಲ್ಲಿ ಪರ ವಿಲ್ ಜೇಕ್ಸ್ ಗುಡುಗು, ಆರ್‌ಸಿಬಿ ಅಭಿಮಾನಿಗಳಲ್ಲಿ ಪುಳಕ..!
ನಿಮೋ ಯಾದವ್ ಎನ್ನುವ ನೆಟ್ಟಿಗರೊಬ್ಬರು, ಬಾಬರ್ ಅಜಂ, ಪಾಕಿಸ್ತಾನದ ಮತ್ತೋರ್ವ ಕ್ರಿಕೆಟಿಗ ಗರ್ಲ್ ಫ್ರೆಂಡ್ ಜತೆ ಸೆಕ್ಸ್‌ಟಿಂಗ್ ನಡೆಸಿದ್ದು, ಈ ಚಾಟಿಂಗ್‌ನಲ್ಲಿ, ಇದೇ ರೀತಿ ಸೆಕ್ಸ್‌ಟಿಂಗ್ ನಡೆಸಿದರೇ ನಿನ್ನ ಗೆಳೆಯನನ್ನು ತಂಡದಿಂದ ಕೈಬಿಡುವುದಿಲ್ಲ ಎಂದು ಪ್ರಾಮೀಸ್ ಮಾಡಿದ್ದಾನೆ. ಅಲ್ಲಾ ಇದನ್ನೆಲ್ಲಾ ನೋಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಟ್ವೀಟ್ ಮಾಡಿ ಬಾಬರ್ ಅಜಂ ಅವರನ್ನು ಕುಟುಕಿದ್ದಾರೆ.
ಯಾರೋ ಒಬ್ಬರು ಪಾಕಿಸ್ತಾನ ನಾಯಕ ಬಾಬರ್ ಅಜಂ ಅವರ ಖಾಸಗಿ ವಿಡಿಯೋ, ಫೋಟೋಗಳನ್ನು ಲೀಕ್ ಮಾಡಿದ್ದಾರೆ. ಹೀಗಾಗಿ ಬಾಬರ್ ಅಜಂ ಕಾಮೆಂಟ್ ಆಯ್ಕೆಯನ್ನು ಆಫ್ ಮಾಡಿದ್ದಾರೆ. ದೈರ್ಯವಾಗಿರಿ ಬಾಬರ್ ಅಜಂ ಎಂದು ನೂರ್ ಎನ್ನುವವರು ಟ್ವೀಟ್ ಮಾಡಿ ಬಾಬರ್ ಅಜಂ ಪರ ಬ್ಯಾಟ್ ಬೀಸಿದ್ದಾರೆ.
ಇನ್ನು ಫರೀದ್ ಖಾನ್ ಎನ್ನುವವರು, ಬಾಬರ್ ಅಜಂ ಅವರೇ ಈ ಚಿತ್ರದ ಬಗ್ಗೆ ಗಲಿಬಿಲಿಯಾಗಬೇಡಿ. ದಯವಿಟ್ಟು ಖಾಸಗಿ ಫೋಟೋಗಳನ್ನು ಹಂಚುವುದನ್ನು ಮೊದಲು ನಿಲ್ಲಿಸಿ ಎಂದು ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.