ನೀರಾವರಿ ಇಲಾಖೆ ಹುದ್ದೆ ಹಗರಣ: 3 ಸರ್ಕಾರಿ ನೌಕರರು ಸೇರಿ 48 ಜನರ ಬಂಧಿಸಿದ ಸಿಸಿಬಿ
ಜಲಸಂಪನ್ಮೂಲ ಇಲಾಖೆಯ 'ಸಿ' ವೃಂದದ ದ್ವಿತೀಯ ದರ್ಜೆ ಸಹಾಯಕ(ಎಸ್‌ಡಿಎ) ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿ ಸಂಬಂಧ ನಕಲಿ ದಾಖಲೆ ಸಲ್ಲಿಸಿ ಉದ್ಯೋಗ ಗಿಟ್ಟಿಸಲು ಅನರ್ಹ ಯತ್ನಿಸಿದ್ದ ಆರೋಪದಡಿ 37 ಅಭ್ಯರ್ಥಿಗಳು, ಮೂವರು ಸರ್ಕಾರಿ ನೌಕರರು, 11 ಮಂದಿ ಮಧ್ಯವರ್ತಿಗಳು ಸೇರಿ ಒಟ್ಟು 48 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು (ಆ.31): ಜಲಸಂಪನ್ಮೂಲ ಇಲಾಖೆಯ 'ಸಿ' ವೃಂದದ ದ್ವಿತೀಯ ದರ್ಜೆ ಸಹಾಯಕ(ಎಸ್‌ಡಿಎ) ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿ ಸಂಬಂಧ ನಕಲಿ ದಾಖಲೆ ಸಲ್ಲಿಸಿ ಉದ್ಯೋಗ ಗಿಟ್ಟಿಸಲು ಅನರ್ಹ ಯತ್ನಿಸಿದ್ದ ಆರೋಪದಡಿ 37 ಅಭ್ಯರ್ಥಿಗಳು, ಮೂವರು ಸರ್ಕಾರಿ ನೌಕರರು, 11 ಮಂದಿ ಮಧ್ಯವರ್ತಿಗಳು ಸೇರಿ ಒಟ್ಟು 48 ಮಂದಿ ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಕಲುಬುರಗಿ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜಿನ ಪ್ರಾಂಶುಪಾಲ ಆನಂದ್.
ಜೋಗ್ ಫಾಲ್ ಕೆಪಿಟಿಸಿಎಲ್ ಕಚೇರಿಯ ಎಫ್‌ಡಿಎ ಕೃಷ್ಣ ಗುರುನಾಥ್ ರಾಥೋಡ್, ಜಲಸಂಪನ್ಮೂಲ ಇಲಾಖೆ(ಹಾಸನ) ಎಸ್‌ಡಿಎ ಗಂಗೂರು ಪ್ರದೀಪ್ ಬಂಧಿತರು. ಜತೆಗೆ ಹಾಸನದ ಟಿ.ರವಿ, ಮಳವಳ್ಳಿಯ ಪ್ರದೀಪ್, ಜೇವರ್ಗಿಯ ಎನ್.ನಿಂಗಪ್ಪ, ನಿವಾಸಿ ವಿಜಯಪುರದ ಸಿಂದಗಿ ಮಲ್ಲಿಕಾರ್ಜುನ್ ಸಂಪೂರ್, ಕಲುಬುರಗಿಯ ಮುಸ್ತಫಾ ಮತ್ತು 37 ಅನರ್ಹ ಅಭ್ಯರ್ಥಿಗಳು ಸೇರಿ ಒಟ್ಟು 48 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಸುಮಾರು 40 ಲಕ್ಷರು. ಮೌಲ್ಯದ 2 ಕಾರು, 17 ಮೊಬೈಲ್ ಹಾಗೂ ಹಾರ್ಡ್ ಡಿಸ್ಕ್ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್ ಕಾಲಿಗೆ ತಲೆ ಇಟ್ಟು ಕ್ಷಮೆ ಕೋರುವೆ: ಪ್ರಧಾನಿ ಮೋದಿ
ಏನಿದು ಪ್ರಕರಣ?: ಜಲಸಂಪನ್ಮೂಲ ಇಲಾಖೆಯಿಂದ 2022ರ ಅಕ್ಟೋಬರ್‌ನಲ್ಲಿ 182 'ಸಿ' ವೃಂದದ ಎಸ್‌ಡಿಎ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಸಂಬಂಧ ನೇರ ನೇಮಕಾತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಇದಕ್ಕೆ ಯಾವುದೇ ಲಿಖಿತ ಪರೀಕ್ಷೆ ನಡೆಸದೆ ದ್ವಿತೀಯ ಪಿಯುಸಿಯಲ್ಲಿ ಪಡೆದ ಅತಿ ಹೆಚ್ಚು ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ನೇರ ಅವಕಾಶ ಕಲ್ಪಿಸಲಾಗಿತ್ತು. ನೇಮಕಾತಿಗೆ ಅದರಂತೆ ಆನ್‌ಲೈನ್‌ಲ್ಲಿ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿದ್ದವು.
62 ಅಭ್ಯರ್ಥಿಗಳ ಅಂಕಪಟ್ಟಿ ನಕಲಿ: ನೇಮಕಾತಿ ವಿಭಾಗದ ಅಧಿಕಾರಿಗಳು ಅರ್ಜಿ ಹಾಗೂ ಅಂಕಪಟ್ಟಿಗಳ ಪರಿಶೀಲನೆ ವೇಳೆ ರಾಜ್ಯದ 12 ಜಿಲ್ಲೆಗಳ 62 ಅಭ್ಯರ್ಥಿಗಳ ಅಂಕಪಟ್ಟಿಗಳು ನಕಲಿಯಾಗಿರುವುದು ಕಂಡು ಬಂದಿತ್ತು. ಈ ಸಂಬಂಧ ಅಧಿಕಾರಿಗಳು 2023ರ ಜುಲೈನಲ್ಲಿ ಶೇಷಾದ್ರಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಈ ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಲಾಗಿತ್ತು. ಇದೀಗ ತನಿಖೆ ನಡೆಸಿ ಅನರ್ಹ ಅಭ್ಯರ್ಥಿಗಳು, ಮಧ್ಯವರ್ತಿಗಳುಸೇರಿದಂತೆ48 ಮಂದಿಯನ್ನು ಬಂಧಿಸಲಾಗಿದೆ. ಈ ವಂಚನೆ ಜಾಲದಲ್ಲಿ ಇನ್ನೂ 25 ಮಂದಿ ಅನರ್ಹ ಅಭ್ಯರ್ಥಿಗಳು ಹಾಗೂ 6 ಮಂದಿ ಮಧ್ಯವರ್ತಿಗಳು ತಲೆಮರೆಸಿ ಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ಸಿ-ಎಸ್ಟಿ ಉದ್ಯೋಗಾಕಾಂಕ್ಷಿಗಳಿಗೆ ಬಲೆ: ಎಸ್‌ಡಿಎ ನೇರನೇಮಕಾತಿ ವಿಚಾರ ತಿಳಿದ ಆರೋಪಿಗಳು, ಎಸ್ಸಿ-ಎಸ್ಟಿ ಉದ್ಯೋಗಾಂಕ್ಷಿಗಳಿಗೆ ಬಲೆ ಬೀಸಿ ವಂಚಿಸಲು ನಿರ್ಧರಿಸಿದರು. ಅದರಂತೆ ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಪಡೆದದ್ದ ಕೆಲ ಉದ್ಯೋಗಾಕಾಂಕ್ಷಿಗಳನ್ನು ಹುಡುಕಿ ಆಮಿಷವೊಡ್ಡಿ ಲಕ್ಷಾಂತರ ರು. ಹಣ ಪಡೆದು ನಕಲಿ ಅಂಕಪಟ್ಟಿ ಸೃಷ್ಟಿಸಿ ಆನ್‌ಲೈನ್ ನಲ್ಲಿ ಅರ್ಜಿ ಹಾಕಿಸಿ ವಂಚಿಸಿದ್ದರು.
ಬ್ಯಾಕ್‌ಲಾಗ್ ಹುದ್ದೆಗಳಿಗೆ ವ್ಯವಸ್ಥಿತ ವಂಚಕರ ಜಾಲ: ನಕಲಿ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ ಸೃಷ್ಟಿಸುವಲ್ಲಿ ಮೂರು ಗ್ಯಾಂಗ್‌ಗಳು ವ್ಯವಸ್ಥಿತವಾಗಿ ಕೆಲಸ ಮಾಡಿವೆ. ಓರ್ವ ತಾನೇ ಕಂಪ್ಯೂಟರ್‌ನಲ್ಲಿ ಅಂಕಪಟ್ಟಿಗಳ ಫಾರ್ಮಯಾಟ್ ಇಟ್ಟುಕೊಂಡು ಕೇವಲ ಹೆಸರು, ವಿಳಾಸ, ಹುಟ್ಟಿದ ದಿನಾಂಕ ಬದಲಾಯಿಸಿ ಕೊಡುತ್ತಿದ್ದ. ಮತ್ತೊಬ್ಬ ಪಶ್ಚಿಮ ಬಂಗಾಳದಿಂದ, ಮಗದೊಬ್ಬ ಹರಿಯಾಣದಿಂದ ದ್ವಿತೀಯ ಪಿಯುಸಿ, 12ನೇ ತರಗತಿ ಸಿಬಿ ಎಸ್‌ಇ, ದ್ವಿತೀಯ ಪಿಯುಸಿಯ ತತಮಾನ ವಾದ ಎನ್‌ಐಓಎಸ್ ಅಂಕಪಟ್ಟಿತ ಟಿ ತರಿಸಿಕೊಂಡು ತಿದ್ದುಪಡಿ ಮಾಡಿ ವಂಚಿಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿಗಳು ದ್ವಿತೀಯ ಪಿಯುಸಿ ಪಾಸ್ ಆಗಿ ಕಡಿಮೆ ಅಂಕ ಪಡೆದವರಿಂದ 1 ಲಕ್ಷ ರು.ನಿಂದ 1.50 ಲಕ್ಷ ರು. ವರೆಗೂ ಪಡೆದು ನಕಲಿ ಅಂಕಪಟ್ಟಿ ನೀಡಿದ್ದಾರೆ. ದ್ವಿತೀಯ ಪಿಯುಸಿ ಅನುತ್ತೀರ್ಣರಾದವರ ಬಳಿ 2 ಲಕ್ಷ ರು. ಪಡೆದು ಉತ್ತೀರ್ಣದ ನಕಲಿ ಅಂಕಪಟ್ಟಿ ನೀಡಿರುವುದು ಬೆಳಕಿಗೆ ತನಿಖೆಯಲ್ಲಿ ಬಂದಿದೆ.
ಸರ್ಕಾರಿ ನೌಕರರ ತೋರಿಸಿ ವಂಚನೆ: ಮಧ್ಯವರ್ತಿಗಳು ಅಮಾಯಕರನ್ನೇ ಹುಡುಕಿ ತಮ್ಮ ಬಲೆಗೆ ಬೀಳಿಸಿಕೊಂಡಿದ್ದಾರೆ. ಈ ಮೂವರು ಸರ್ಕಾರಿ ನೌಕರರನ್ನು ತೋರಿಸಿ ಉದ್ಯೋಗದ ಭರವಸೆ ಕೊಡಿಸಿ, ಹಣ ಪಡೆದು ನಕಲಿ ಅಂಕಪಟ್ಟಿ ನೀಡಿ ಅರ್ಜಿ ಸಲ್ಲಿಸಿದ್ದಾರೆ. ಸಿಸಿಬಿ ಪೊಲೀಸರು ಪ್ರಕರಣದ ತನಿಖೆಗೆ ಇಳಿದು ಬಂಧಿಸುವವರೆಗೂ ತಾವೂ ವಂಚನೆಗೆ ಒಳಗಾಗಿರುವುದು ಗೊತ್ತೇ ಇರಲಿಲ್ಲ. ಮಧ್ಯವರ್ತಿಗಳು ಹಾಗೂ ಸರ್ಕಾರಿನೌಕರರು ವಂಚಿಸುವ ಉದ್ದೇಶದಿಂದಲೇ ಅಮಾಯಕರಿಗೆ ಸರ್ಕಾರಿ ಉದ್ಯೋಗದ ಆಸೆ ತೋರಿಸಿ ಪಡೆದುಕೊಂಡಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ದರ್ಶನ್‌ಗೆ ತಲುಪದ ಪ್ರಸಾದ: ಶಾಸ್ತ್ರಿ ಸಿನಿಮಾ ನೋಡಿದ್ದು ಬರೀ 13 ಅಭಿಮಾನಿಗಳು!
12 ಜಿಲ್ಲೆಗಳ 62 ಅಭ್ಯರ್ಥಿಗಳು: ಸಿಸಿಬಿ ತನಿಖೆ ವೇಳೆ ಹಾಸನ ಜಿಲ್ಲೆಯ 12 ಅಭ್ಯರ್ಥಿಗಳನ್ನು ಮೊದಲಿಗೆ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಈ ನಕಲಿ ಅಂಕಪಟ್ಟಿ ಜಾಲ ಬೆಳಕಿಗೆ ಬಂದಿದೆ. ಅಂತೆಯೆ ಕಲುಬುರಗಿ 25, ವಿಜಯಪುರ 8 ಬೀದರ್, ಬೆಳಗಾವಿ 3 ಯಾದಗಿರಿ 2 ಮತ್ತು ಚಿತ್ರದುರ್ಗ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ವಿಜಯನಗರದಲ್ಲಿ ತಲಾ ಓರ್ವ ಸೇರಿ ಒಟ್ಟು 62 ಅಭ್ಯರ್ಥಿಗಳು ಎಸ್‌ಡಿಎ ಉದ್ಯೋಗಕ್ಕಾಗಿ ನಕಲಿ ಅಂಕಪಟ್ಟಿ ಸಲ್ಲಿಸಿದ್ದಾರೆ. ಈ ಪೈಕಿ 37 ಮಂದಿ ಬಂಧಿತರಾಗಿದ್ದಾರೆ.