ಬೆಂಗಳೂರು(ಜು.04): ಲಿವಿಂಗ್‌ ಟುಗೆದರ್‌ನಲ್ಲಿದ್ದ ಪ್ರೇಯಸಿ ಮತ್ತೊಬ್ಬನೊಂದಿಗೆ ವಿವಾಹವಾಗಿದ್ದಕ್ಕೆ ಆಕ್ರೋಶಗೊಂಡ ಆರೋಪಿ ಆಕೆಯ ಖಾಸಗಿ ವಿಡಿಯೋಗಳನ್ನು ಪತಿಗೆ ಕಳುಹಿಸಿ ಕಿರುಕುಳ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ 26 ವರ್ಷದ ಸಂತ್ರಸ್ತೆ ಕೊಟ್ಟದೂರಿನ ಮೇರೆಗೆ ಪೃಥ್ವಿ ಎಂಬಾತನ ವಿರುದ್ಧ ವೈಟ್‌ಫೀಲ್ಡ್‌ ಸೈಬರ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ತನ್ನದೇ ಸೆಕ್ಸ್​ ವಿಡಿಯೋವನ್ನು ವೆಬ್​​ಸೈಟ್​ಗೆ ಅಪ್ಲೋಡ್​ ಮಾಡಿ ಸಿಕ್ಕಿಬಿದ್ದ ಪ್ರೊಫೆಸರ್

ಆರೋಪಿ ಪೃಥ್ವಿ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಚಿಕ್ಕಮಗಳೂರಿನಲ್ಲಿ ನೆಲೆಸಿದ್ದಾನೆ. ಆರೋಪಿ ಹಾಗೂ ಸಂತ್ರಸ್ತೆ ಕೆಲ ವರ್ಷ ಲಿವಿಂಗ್‌ ಟುಗೆದರ್‌ನಲ್ಲಿದ್ದು, 2018ರಲ್ಲಿ ಜಗಳವಾಡಿಕೊಂಡು ಪ್ರತ್ಯೇಕವಾಗಿದ್ದರು. ಬಳಿಕ ಆರೋಪಿ ಮಾಜಿ ಪ್ರೇಯಸಿಯ ಕೆಲ ನಗ್ನ ವಿಡಿಯೋ ಹಾಗೂ ಫೋಟೋಗಳನ್ನು ಬಳಸಿಕೊಂಡು ಮದುವೆ ನಿಲ್ಲಿಸಲು ಯತ್ನಿಸುತ್ತಿದ್ದ. ಈ ಸಂಬಂಧ ಸಂತ್ರಸ್ತೆ ಚಿಕ್ಕಮಗಳೂರು ಮಹಿಳಾ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಆರೋಪಿಯ ಮೊಬೈಲ್‌ನಲ್ಲಿದ್ದ ವಿಡಿಯೋ ಮತ್ತು ಫೋಟೋ ಡಿಲಿಟ್‌ ಮಾಡಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದರು.

'ಕೊಲೆ ನಡೆದ ಕೇವಲ 48 ಗಂಟೆಯಲ್ಲಿ ಆರೋಪಿ ಬಂಧನ

ಸಂತ್ರಸ್ತೆ ವಿವಾಹವಾಗಿ ಎರಡು ವರ್ಷವಾದ ಬಳಿಕ ಆರೋಪಿ ಆಕೆಯ ಪತಿ ಹಾಗೂ ಮಾವನ ಮೊಬೈಲ್‌ಗೆ ಪುನಃ ಅದೇ ನಗ್ನ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸಿಕೊಟ್ಟಿದ್ದಾನೆ. ಈ ಮೂಲಕ ನನ್ನ ವೈವಾಹಿಕ ಜೀವನ ಹಾಳು ಮಾಡಲು ಯತ್ನಿಸುತ್ತಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.