ಐಪಿಎಲ್ ಬೆಟ್ಟಿಂಗ್ ಲಂಚ ಸ್ವೀಕಾರ: ಲೋಕಾಯುಕ್ತರ ಬಲೆಗೆ ಬಿದ್ದ ಗಜೇಂದ್ರಗಡ ಪಿಎಸ್‌ಐ
ದಗ ಜಿಲ್ಲೆಯ ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆಕೋರರಿಂದಲೇ 1 ಲಕ್ಷ ರೂ. ಲಂಚವನ್ನು ಪಡೆಯುತ್ತಿದ್ದ ಗಜೇಂದ್ರಗಡ ಪಿಎಸ್‌ಐ ಹಾಗೂ ಇಬ್ಬರು ಕಾನ್ಸ್‌ಸ್ಟೇಬಲ್‌ಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಗದಗ (ಮೇ 1): ಗದಗ ಜಿಲ್ಲೆಯ ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆಕೋರರಿಂದಲೇ 1 ಲಕ್ಷ ರೂ. ಲಂಚವನ್ನು ಪಡೆಯುತ್ತಿದ್ದ ಗಜೇಂದ್ರಗಡ ಪಿಎಸ್‌ಐ ಹಾಗೂ ಇಬ್ಬರು ಕಾನ್ಸ್‌ಸ್ಟೇಬಲ್‌ಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಗಜೇಂದ್ರಗಡ ಪಟ್ಟಣದ ಡಾಭಾದಲ್ಲಿ ಬೆಟ್ಟಿಂಗ್ ದಂಧೆಕೋರರಿಂದ 1 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಈಗ ಬಂಧಿತರಾಗಿರುವ ಪೊಲೀಸ್ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಜೂಜು, ಬೆಟ್ಟಿಂಗ್ ದಂಧೆಗಳನ್ನು ಮಾಡಲು ರಾಜ್ಯ ಸರ್ಕಾರದಿಂದ ಯಾವುದೇ ಅಧಿಕೃತ ಪರವಾನಗಿ ಇಲ್ಲ. ಹೀಗಾಗಿ, ಬೆಟ್ಟಿಂಗ್ ದಂಧೆಕೋರರನ್ನು ಜೈಲಿಗಟ್ಟುವ ಕೆಲಸ ಪೊಲೀಸರು ಮಾಡಬೇಕಿದೆ. ಆದರೆ, ಪೊಲೀಸರೇ ಅಂತಹ ದಂಧೆ ಕೋರರಿಂದ ಲಂಚವನ್ನು ಪಡೆದು ಹೊರಗೆ ಕಳಿಸುತ್ತಿದ್ದಾರೆ. ಇದರಿಂದ ಬೆಟ್ಟಿಂಗ್ ದಂಧೆಗೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗಲಿದೆ. ಆದರೆ, ಇದರಿಂದ ಯುವಕರು ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಕೊಂಡು ಸಾಲ- ಸೋಲ ಮಾಡಿ ಅದನ್ನು ತೀರಿಸಲಾಗದೇ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಹಲವು ಕುಟುಂಬಗಳು ಸಂಕಷ್ಟಕ್ಕೆ ಒಳಗಾಗುತ್ತಿವೆ.
ಮಂಗ್ಳೂರ್ ಮುಸ್ಲಿಂ ಹುಡುಗಿ- ಬಳ್ಳಾರಿ ಹಿಂದೂ ಹುಡ್ಗ: ಬೆಂಗ್ಳೂರಲ್ಲಿ ಲವ್ ಮಾಡ್ತಾ ಸತ್ತೇ ಹೋದ ಯುವತಿ!
ವಿನಾಯಕ ಎನ್ನುವವರಿಂದ ದೂರು: ರಾಜ್ಯದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೊರಾಗಿದೆ. ಅದರಂತೆ ಗಜೇಂದ್ರಗಡದಲ್ಲಿಯೂ ಐಪಿಎಲ್ ಬೆಟ್ಟಿಂಗ್ ಆಡುತ್ತಿದ್ದ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ನೀಡಲು ಪಿಎಸ್ಐ ರಾಘವೇಂದ್ರ 2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಲೋಕಾಯುಕ್ತರಿಗೆ ವಿನಾಯಕ ಎಂಬುವವರಿಗೆ ದೂರು ನೀಡಿದ್ದರು. ಇನ್ನು ಪಿಎಸ್‌ಐ ರಾಘವೇಂದ್ರ ಅವರಿಗೆ ಈಗ 1 ಲಕ್ಷ ರೂ. ಕೊಡುವುದಾಗಿ ಹೇಳಿ ವಿನಾಯಕ ಪಟ್ಟಣದ ಹೊರಗಿನ ಡಾಭಾಕ್ಕೆ ಕರೆಸಿಕೊಂಡಿದ್ದಾನೆ. ಈ ವೇಳೆ ಲೋಕಾಯುಕ್ತ ಡಿವೈಎಸ್ಪಿ ಶಂಕರ ರಾಗಿ, ಸಿಪಿಐ ಪುರುಷೋತ್ತಮ, ಅಜೀಜ್ ಕಲಾದಾಗಿ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿದಿದ್ದರು. ಇನ್ನು ಪಿಎಸ್‌ಐ ರಾಘವೇಂದ್ರ ಮತ್ತು ಇಬ್ಬರು ಪೊಲೀಸ್ ಪೇದೆಗಳು ವಿನಾಯಕ ಅವರಿಂದ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
ಆ್ಯಪ್ ಹಾಗೂ ಪೇಪರ್‌ನಲ್ಲಿ ಬರೆದು ಬೆಟ್ಟಿಂಗ್: ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಏ.23ರಂದು ನಡೆದ ಐಪಿಎಲ್ ಪಂದ್ಯದಲ್ಲಿ 1 ಸಾವಿರಕ್ಕೆ 2 ಸಾವಿರ ಹಣ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಚೀಟಿಯಲ್ಲಿ ಬರೆದುಕೊಟ್ಟು ದಂಧೆ ಮಾಡುತ್ತಿದ್ದರು. ತಮ್ಮ ಮೊಬೈಲ್ನಲ್ಲಿ ಆನ್ ಲೈನ್ ಆ್ಯಪ್ನಲ್ಲಿ ಬೆಟ್ಟಿಂಗ್ ಆಡುತ್ತಿದ್ದಾಗ ಹರೀಶ್ ಪರಶುರಾಮ ದಲಬಂಜನ್ ಹಾಗೂ ಸಂತೋಷ ತಂದೆ ವಿರುಪಾಕ್ಷಸಾ ಜರತಾರಿ ಎಂಬ ಇಬ್ಬರನ್ನು ಗಜೇಂದ್ರಗಡ ಪೊಲೀಸರು, ಆರೋಪಿಗಳಿಂದ 2, 500ರೂ. ನಗದು ಹಾಗೂ ಮೊಬೈಲ್ ಜಪ್ತಿ ಮಾಡಿದ್ದರು.
ಎಣ್ಣೆ ಕಿಕ್‌ನಲ್ಲಿ ಯುವಕನ ಎದೆಗೆ ಚೂರಿ ಚುಚ್ಚಿದ ಆಂಟಿ: ಮೊಬೈಲ್‌ಗಾಗಿ ಭೀಕರ ಕೊಲೆ!
ಲಂಚ ಕೊಡುವಾತನಿಂದಲೇ ದೂರು: ಐಪಿಎಲ್ ಬೆಟ್ಟಿಂಗ್ ಆಡುವಾಗ ಸಿಕ್ಕಿಬಿದ್ದ ಆರೋಪಿಗಳ ವಿರುದ್ಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸ್ಟೇಷನ್ ಬೇಲ್ ಮೇಲೆ ಆರೋಪಿಗಳನ್ನು ಬಿಡುಗಡೆ ಮಾಡುವಾಗ ಪಿಎಸ್ಐ ರಾಘವೇಂದ್ರ ಅವರು ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿನಾಯಕ ದೂರು ನೀಡಿದ್ದು, ಲಂಚ ಪಡೆಯುತ್ತಿದ್ದ ಮೂವರು ಪೊಲೀಸರು ಲೋಕಾಯುಕ್ತ ಬಲೆಯಲ್ಲಿ ಸಿಕ್ಕಿಬಿದ್ದಿದ್ದಾರೆ.