* ಗರ್ಭಗುಡಿ ಮುಂದೆ ಯುವಕ ಬೆತ್ತಲೆ!* ಮೇಲುಕೋಟೆ ದೇಗುಲ ಗರ್ಭಗುಡಿ ಬಾಗಿಲ ಮುಂದೆ ಯುವಕನ ಹುಚ್ಚಾಟ* ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು* AAP ಪಕ್ಷದ ಮುಖಂಡ ರಾಮ್ ಕುಮಾರ್‌.ನಿಂದ ಹುಚ್ಚಾಟ

ಮೇಲುಕೋಟೆ(ಡಿ. 18) ಧಾರ್ಮಿಕ ಕ್ಷೇತ್ರ ಮೇಲುಕೋಟೆ (Melukote) ಶ್ರೀಚೆಲುವನಾರಾಯಣಸ್ವಾಮಿ ( Cheluvanarayana Swamy Temple)ದೇಗುಲದ ಗರ್ಭಗುಡಿ ಬಾಗಿಲು ಮುಂದೆ ಯುವಕ ಬೆತ್ತಲಾಗಿ (Naked) ನಿಂತು ಹುಚ್ಚಾಟ ಮಾಡಿದ್ದಾನೆ.

ದೇವಾಲಯದ ಮುಂದೆ ಚುರುಮುರಿ ಮಾರಿ ಜೀವನ ನಿರ್ವಹಿಸುತ್ತಿದ್ದ ರಾಮ್‌ಕುಮಾರ್‌ ಹುಚ್ಚಾಟ ನಡೆಸಿದ್ದು ಗಾಂಜಾ (Ganja) ಸೇವೆನೆಯೇ ಈತನ ಹುಚ್ಚಾಟಕ್ಕೆ ಕಾರಣ ಎಂದು ನಾಗರಿಕರು ಹಾಗೂ ದೇವಾಲಯದ ಸಿಬ್ಬಂದಿ ಆರೋಪಿಸಿದ್ದಾರೆ.

ರಾಮ್‌ಕುಮಾರ್‌ ಈಚೆಗೆ ಅಮ್‌ಆದ್ಮಿ(AAP) ಪಾರ್ಟಿಗೆ ಸೇರ್ಪಡೆಯಾಗಿದ್ದು, ಜಿಲ್ಲಾಧ್ಯಕ್ಷನಾಗಿ ಪದಗ್ರಹಣ ಮಾಡಿರುವುದಾಗಿ, ಮಂಡ್ಯ(Mandya) ಜಿಲ್ಲಾ ಕಚೇರಿ ತೆರೆದಿರುವುದಾಗಿ ಹೇಳಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.

"

ಈತ ಈಚೆಗೆ ಗಾಂಜಾ ದಾಸನಾಗಿ ಕಳೆದ ಒಂದು ವಾರದಿಂದ ರಾತ್ರಿ ವೇಳೆ ಹುಚ್ಚಾಟ ನಡೆಸುತ್ತಿದ್ದನು. ಆಗಾಗ್ಗೆ ಸಾರ್ವಜನಿಕರೂ ಸಹ ಈತನಿಗೆ ಬುದ್ದಿವಾದ ಹೇಳಿ ಮನೆಗೆ ಕಳುಹಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇವನ ಹುಚ್ಚಾಟ ವಿಪರೀತವಾಗಿ ಗುರುವಾರ ರಾತ್ರಿ ದೇವಾಲಯ ಮುಕ್ತಾಯವಾಗುತ್ತಿದ್ದ ರಾತ್ರಿ 9ರ ಸುಮಾರಿನಲ್ಲಿ ಏಕಾಏಕಿ ದೇಗುಲದ ಶುಕನಾಸಿಗೆ ಪ್ರವೇಶಮಾಡಿ ನಾನು ಚೆಲುವನಾರಾಯಣಸ್ವಾಮಿಯ ತಮ್ಮ ಅವನ ಪಕ್ಕದಲ್ಲೇ ನಿಲ್ಲುತ್ತೇನೆ ಎಂದು ಹುಚ್ಚಾಟ ಮಾಡಿದ್ದಾನೆ.

ಪೋನ್ ಮುಂದೆ ಬಚ್ಚೆ ಬಿಚ್ಚಿ ಬೆತ್ತಲೆ ಲೈವ್ ಬಾ, ವಿದೇಶಿ ಗಂಡನ ಹುಚ್ಚಾಟ!

ನಾನೇ ರಾಮ, ನಾನೇ ಅಲ್ಲ ಎಂದು ಆಕ್ರೋಶದಿಂದ ಕಿರಚಾಡಿ ಸಿಬ್ಬಂದಿಯನ್ನು ಬೆದರಿಸಿದ್ದಾನೆ. ದೇವಾಲಯದ ಸಿಬ್ಬಂದಿ ಆತನನ್ನು ಬಲವಂತವಾಗಿ ಹೊರ ಹಾಕಲು ಪ್ರಯತ್ನಿಸಿದಾಗ ಬಟ್ಟೆಬಿಚ್ಚಿ ಬೆತ್ತಲಾಗಿ ಹುಚ್ಚಾಟ ಹೆಚ್ಚು ಮಾಡಿದ್ದಾನೆ. ಈ ವೇಳೆ ಸಿಬ್ಬಂದಿ ದೇವಾಲಯದಿಂದ ರಾಮ್‌ ಕುಮಾರ್‌ರನ್ನು ಹೊರಹಾಕಿದ್ದಾರೆ.

ವಿಚಾರ ತಿಳಿಯುತ್ತಿದ್ದಂತೆ ಮೇಲುಕೋಟೆ ಇನ್ಸ್‌ ಪೆಕ್ಟರ್‌ ಸುಮಾರಾಣಿ ಪೊಲೀಸರನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಪೊಲೀಸರ ಮುಂದೆ ಸಹ ಬಟ್ಟೆಹಾಕಿಕೊಳ್ಳದೆ ಮತ್ತೆ ದೇವಾಲಯಕ್ಕೆ ನುಗ್ಗಲು ಪ್ರಯತ್ನ ಮಾಡಿದ್ದು, ಆತನನ್ನು ಬಲವಂತದಿಂದ ಮನೆಗೆ ಕಳುಹಿಸಲಾಗಿದೆ. ಇಡೀ ಘಟನಾವಳಿ ಚಿತ್ರಣಗಳು ಸಿಸಿ ಟಿವಿಯಲ್ಲಿ ದಾಖಲಾಗಿದೆ.

ದೇವಾಲಯದ ಇಒ ಮಂಗಳಮ್ಮ ಮೇಲುಕೋಟೆ ಪೊಲೀಸ್‌ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ. ಘಟನೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.

ಪವಿತ್ರ ಕ್ಷೇತ್ರ ಮೇಲುಕೋಟೆಯಲ್ಲಿ ಗಾಂಜಾ ವಾಸನೆ ವಿಚಾರಕೇಳಿ ಬರುತ್ತಿರುವುದು ಆತಂಕಕಾರಿ ಬೆಳವಣಿಗೆ. ರಾಮ… ಕುಮಾರ್‌ ಗಾಂಜಾ ಸೇವಿಸಿದ್ದಾನೆ ಎಂಬ ಆರೋಪವಿದೆ. ಪೊಲೀಸರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿ ಕ್ಷೇತ್ರ ಹಾಗೂ ದೇವಾಲಯದ ಪಾವಿತ್ರ್ಯತೆ ಕಾಪಾಡಬೇಕು ಎಂದು ದೇವಾಲಯ ಪರಿಚಾರಕ ಎಂ.ಎನ್‌.ಪಾರ್ಥಸಾರಥಿ ಒತ್ತಾಯಿಸಿದ್ದಾರೆ.

ಯುವಕನ ಹುಚ್ಚಾಟ ಕುರಿತಂತೆ ದೇವಾಲಯದ ಇಒ ಮಂಗಳಮ್ಮ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಬಗ್ಗೆ ಸಮಗ್ರವಾಗಿ ತನಿಖೆ ಮಾಡಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಮೇಲುಕೋಟೆ ಇನ್ಸ್‌ಪೆಕ್ಟರ್‌ ಸುಮರಾಣಿ ತಿಳಿಸಿದ್ದಾರೆ.

ಮಧ್ಯಪ್ರದೇಶ ಪ್ರಕರಣ: ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಬರಗಾಲವನ್ನು ದೂರ ಮಾಡಿ, ಮಳೆ ಬರುವಂತೆ ದೇವತೆಗಳನ್ನು ಸಂತೃಪ್ತಿಗೊಳಿಸಲು ಆರು ಹೆಣ್ಮಕ್ಕಳನ್ನು ಬೆತ್ತಲೆಯಾಗಿ ಊರಿಡೀ ಮರವಣಿಗೆ ಮಾಡಿಸಿದ ಪ್ರಕರಣ ಬೆಳಕಿಗೆ ಬಂದಿತ್ತು. ಮೂಢನಂಬಿಕೆಗೆ ಬಲಿಯಾಗಿ, ಇಂತಹದ್ದೊಂದು ಆಚರಣೆ ನಡೆದಿದೆ ಎಂಬ ಮಾಹಿತಿ ಪಡೆದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಈ ಬಗ್ಗೆ ಕ್ರಮ ವಹಿಸಲು ದಾಮೋಹ್ ಜಿಲ್ಲಾಡಳಿತಕ್ಕೆ ಕರೆ ನೀಡಿದೆ. ಬುಂಡೇಲ್‌ಖಂಡ್ ಪ್ರದೇಶದ ದಮೋಹ್ ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಮೀ ದೂರದಲ್ಲಿರುವ ಜಬೇರಾ ಪೊಲೀಸ್ ಠಾಣೆ ಪ್ರದೇಶದ ಬನಿಯಾ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಈ ಪ್ರದೇಶದ ಜನರು ಮಳೆಯ ಕೊರತೆ ಎದುರಾದಾಗ ದೇವರನ್ನು ಮೆಚ್ಚಿಸಲು ಕೆಲವು ಅಪ್ರಾಪ್ತ ಬಾಲಕಿಯರನ್ನು ಬೆತ್ತಲೆಯನ್ನಾಗಿ ಮಾಡುವ ಸಂಪ್ರದಾಯ ಈ ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದ್ದಾರೆಂಬ ಎಂಬ ಮಾಹಿತಿ ಪೊಲೀಸರಿಗೆ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಡಿಆರ್ ಟೆನಿವಾರ್ ಹೇಳಿದ್ದರು.