Hassan: ಅಂತರ್‌ಜಿಲ್ಲಾ ಕಳ್ಳರ ಬಂಧನ: ಲಕ್ಷಾಂತರ ರೂ. ಮೌಲ್ಯದ ಮೊಬೈಲ್ ವಶ
* 18 ಲಕ್ಷ ಮೌಲ್ಯದ ಮೊಬೈಲ್, ಚಿನ್ನಾಭರಣ ವಶಕ್ಕೆ
* ರೈಲು ನಿಲ್ದಾಣ, ಸಂತೆಗಳೇ ಈ ಕಳ್ಳರ ಟಾರ್ಗೆಟ್
* ಲೈವ್ ಸ್ಕ್ಯಾನ್ ಉಪಕರಣ ಸಹಕಾರಿ
ಹಾಸನ(ಮಾ.11): ದೇವಸ್ಥಾನದ (Temple) ಹುಂಡಿ, ಮನೆ , ಮೊಬೈಲ್ ಕಳ್ಳತನ(Theft), ಪ್ರಕರಣಗಳಲ್ಲಿ ಇಬ್ಬರು ಅಂತರ ಜಿಲ್ಲಾ ಆರೋಪಿಗಳನ್ನು(Accused) ಬಂಧಿಸಿದ್ದು(Arrest) ಸುಮಾರು 18 ಲಕ್ಷ ಮೌಲ್ಯದ ಮೊಬೈಲ್ ಫೋನ್‌ಗಳು, ಚಿನ್ನಾಭರಣ ಮತ್ತು 30 ಸಾವಿರ ರು. ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸಗೌಡ ತಿಳಿಸಿದರು.
ನಗರದ(Hassan) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಸೀಕೆರೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣ ಸಂಬಂಧ ಬೆಂಗಳೂರು(Bengaluru) ನಗರದ ಹೊಸಕೋಟೆ ನಿವಾಸಿಗಳಾದ ಆನಂದ್ (35 )ಬಿಡದಿ ರೈಲ್ವೆ ಸ್ಟೇಷನ್ ಸಮೀಪದ ನಿವಾಸಿ ಚಂದ್ರು(35) ಎಂಬುವರನ್ನು ಬಂಧಿಸಿ ಆರೋಪಿಗಳಿಂದ 18 ಲಕ್ಷ ಮೌಲ್ಯ90 ಮೊಬೈಲ್‌ಗಳು, ಚಿನ್ನಾಭರಣ ಹಾಗೂ 30 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
Bengaluru Crime: ಅಪ್ರಾಪ್ತೆಯ ಪ್ರಜ್ಞೆ ತಪ್ಪಿಸಿ ವೇಶ್ಯಾವಾಟಿಕೆ ದಂಧೆ: ಮಹಿಳೆಯರಿಂದಲೇ ಹೇಯ ಕೃತ್ಯ..!
ಸದ್ಯ 90 ಮೊಬೈಲ್‌ಗಳನ್ನು(Mobile) ವಶಕ್ಕೆ ಪಡೆಯಲಾಗಿದ್ದು, ಅರಸೀಕೆರೆ ಹಾಗೂ ಜಿಲ್ಲೆಯ ಇತರೆ ತಾಲೂಕಿನಲ್ಲಿ ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಗತ್ಯ ಮಾಹಿತಿ ಲಭ್ಯವಾದ ಬಳಿಕ ಮೊಬೈಲ್‌ಗಳನ್ನು ವಾರಸುದಾರರಿಗೆ ವಿತರಿಸಲಾಗುವುದು ಎಂದು ತಿಳಿಸಿದರು.
ಅರಸೀಕೆರೆ ನಗರದಲ್ಲಿ ಇತ್ತೀಚೆಗೆ ಸಾರ್ವಜನಿಕರ ಜನಸಂದಣಿ ಪ್ರದೇಶಗಳಾದ ಬಸ್ ನಿಲ್ದಾಣ, ಸಂತೆ ನಡೆಯುವ ಸ್ಥಳ, ರಾಜಕೀಯ(Politics) ರ್ಯಾಲಿ, ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ನೂಕುನುಗ್ಗಲು ವೇಳೆ ಮೊಬೈಲ್ ಫೋನುಗಳು ಕಳ್ಳತನವಾಗಿರುವ ಬಗ್ಗೆ ಠಾಣೆಗಳಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಅಪರ ಪೊಲೀಸ್ ಅಧೀಕ್ಷಕಿ ಬಿ ಎಂ ನಂದಿನಿ ಮಾರ್ಗದರ್ಶನದಲ್ಲಿ ಅರಸೀಕೆರೆ ನಗರದಲ್ಲಿ ಕಟ್ಟುನಿಟ್ಟಿನ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸಲು ಪ್ರಕರಣ ಭೇದಿಸಲು ಕ್ರಮಕೈಗೊಂಡು, ಡಿವೈಎಸ್ಪಿ ಅಶೋಕ್, ಅರಸೀಕೆರೆ ಉಪವಿಭಾಗದ ಸೋಮೇಗೌಡ, ನಗರ ಠಾಣೆಯ ಭಾರತಿ ರಾಯನಗೌಡ, ಅರಸೀಕೆರೆ ನಗರ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿಯನ್ನೊಳಗೊಂಡ ಕಾರ್ಯಪಡೆಯು ಮಾ. 6ರಂದು ಅರಸೀಕೆರೆ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಗಸ್ತಿನಲ್ಲಿದ್ದ ವೇಳೆ ಆರೋಪಿಗಳಾದ ಆನಂದ ಹಾಗೂ ಚಂದ್ರು ಎಂಬವರನ್ನು ವಶಕ್ಕೆ ಪಡೆದು ತನಿಖೆ(Investigation) ಕೈಗೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.
Student Suicide:ಧಾರವಾಡ ಪಿಜಿಯಲ್ಲಿ ನೇಣಿಗೆ ಶರಣಾದ ಬಾಗಲಕೋಟೆ ಸ್ಟೂಡೆಂಟ್, ಕಾರಣ ನಿಗೂಢ
ಬಸ್ ಸ್ಟ್ಯಾಂಡ್, ಸಂತೆಗಳೇ ಟಾರ್ಗೆಟ್:
ಈ ಇಬ್ಬರು ಚಾಲಾಕಿ ಕಳ್ಳರು ರಾತ್ರಿ ಮತ್ತು ಬೆಳಗಿನ ಜಾವದಲ್ಲಿ ಬಸ್ ನಿಲ್ದಾಣ ಮತ್ತು ಜನನಿಬಿಡ ರಾಜಕೀಯ ರ್ಯಾಲಿಯಲ್ಲಿ ಜನರ ನೂಕು ನುಗ್ಗಲು ವೇಳೆ ಮೊಬೈಲ್ ಕಳ್ಳತನ ಮಾಡುತ್ತಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ ಎಂದು ಎಸ್‌ಪಿ ಶ್ರೀನಿವಾಸಗೌಡ ತಿಳಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ನಂದಿನಿ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.
ಲೈವ್ ಸ್ಕ್ಯಾನ್ ಉಪಕರಣ ಸಹಕಾರಿ:
ರಾಜ್ಯ ಪೊಲೀಸ್ ಇಲಾಖೆಯಿಂದ(Police Department) ಲೈವ್ ಸ್ಕ್ಯಾನರ್(Live Scanner) ನೀಡಲಾಗಿದೆ. ಸ್ಕ್ಯಾನರ್ ಮೂಲಕ ಯಾವುದೇ ಅನುಮಾನಾಸ್ಪದ ವ್ಯಕ್ತಿಯ ಫಿಂಗರ್‌ಪ್ರಿಂಟ್(Fingerprint) ಅನ್ನು ಸ್ಕ್ಯಾನ್ ಮಾಡಿದ ಬಳಿಕ ಅವರು ಈ ಹಿಂದೆ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿದ್ದರೂ ಮಾಹಿತಿ ಲಭ್ಯವಾಗಲಿದೆ. ಇದರಿಂದ ಹೆಚ್ಚು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಸಹಕಾರಿಯಾಗಿದೆ. ಇದೇ ಉಪಕರಣ ಸಹಾಯದಿಂದ ಈ ಇಬ್ಬರು ಆರೋಪಿಗಳನ್ನು ಪತ್ತೆ ಮಾಡಲಾಗಿದೆ ಅಂತ ಹಾಸನ ಎಸ್‌ಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.