Asianet Suvarna News Asianet Suvarna News

ವಿಜಯಪುರ: ಮುದ್ದೇಬಿಹಾಳದ ಲವ್-ಬ್ರೇಕಪ್ ಕೇಸ್‌, ಬೆಂಕಿ‌ ಕದನದಲ್ಲಿ ನರಳಿ ನರಳಿ ಸತ್ತ ಪ್ರಿಯಕರ‌..!

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದ ರಾಹುಲ್ ರಾಮನಗೌಡ ಬಿರಾದಾರ  ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಕಳೆದ 12-13 ದಿನಗಳ‌ ನಂತರ ರವಿವಾರ ಸಂಜೆ 4 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ಖಾತ್ರಿ ಪಡೆಸಿವೆ.

Injured Person Death of Love Breakup Case at Muddebihal in Vijayapura grg
Author
First Published Jun 9, 2024, 6:30 PM IST

ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ(ಜೂ.09): ಲವ್, ಬ್ರೇಕಪ್.. ಬೆಂಕಿ ಪ್ರಕರಣಕ್ಕೆ ಮೊದಲ ಬಲಿ ಬಿದ್ದಿದೆ. ಮುದ್ದೇಬಿಹಾಳ ಇತ್ತೀಚೆಗೆ ಪಟ್ಟಣದಲ್ಲಿ ನಡೆದಿದ್ದ ಪ್ರಿಯಕನ ಮೇಲೆ ಪ್ರೆಟ್ರೋಲ್ ಸುರಿದು ಬೆಂಕಿ ಇಟ್ಟ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಹುಲ್ ಬಿರಾದಾರ್ ಸಾವನ್ನಪ್ಪಿದ್ದಾನೆ. ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ರಾಹುಲ್ ನರಳಿ ನರಳಿ ಪ್ರಾಣ ಬಿಟ್ಟಿದ್ದಾನೆ.

ಲವ್-ಬೆಂಕಿ ಪ್ರಕರಣದಲ್ಲಿ ಪ್ರಿಯಕರ ಸಾವು..!

ಪ್ರೇಮ ಪ್ರಕರಣ ಹಿನ್ನೆಲೆ ಇಲ್ಲಿನ ಪುರಸಭೆ ಮಾಜಿ ಸದಸ್ಯ ರಾವುಜಪ್ಪ ಮದರಿ ಅವರ ಮನೆಯಲ್ಲಿ ಮೇ 26 ರಂದು ಸಂಜೆ ಪೆಟ್ರೋಲ್ ಎರಚಿ ಕೊಲೆಗೆ ಯತ್ನಿಸಿದ ಘಟನೆಯಲ್ಲಿ ಶೇ 70 ರಷ್ಟು ಬೆಂದು ಹೋಗಿದ್ದ ಪ್ರಿಯಕರ ಢವಳಗಿ ಗ್ರಾಮದ ರಾಹುಲ್ ರಾಮನಗೌಡ ಬಿರಾದಾರ (25) ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಕಳೆದ 12-13 ದಿನಗಳ‌ ನಂತರ ರವಿವಾರ ಸಂಜೆ 4 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ಖಾತ್ರಿ ಪಡೆಸಿವೆ.

ಲೈಂಗಿಕ ಕಿರುಕುಳ ನೀಡಿದ ಆರೋಪ: ಪುರಸಭೆ ಅಧ್ಯಕ್ಷೆ‌ ಪತಿಗೆ ಮಹಿಳೆಯರಿಂದ ಥಳಿತ..!

ಲವ್-ಬ್ರೇಕಪ್- ಬೆಂಕಿ ಕದನ ಇದು..!

ರಾಹುಲ್, ಮದರಿ ಕುಟುಂಬದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಎರಡು ಮೂರು ವರ್ಷಗಳ ನಂತರ ಪ್ರೀತಿ ಮುರಿದುಬಿದ್ದು ಯುವತಿ ರಾಹುಲನಿಂದ ದೂರವಾಗಿದ್ದಳು. ಇದನ್ನು ಸಹಿಸದ ರಾಹುಲ್ ಮೇ 26 ರಂದು ಯುವತಿಯ ಮನೆಗೆ ಏಕಾಂಗಿಯಾಗಿ ಬಂದಿದ್ದಾಗ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ಘಟನೆಯಲ್ಲಿ ಯುವತಿಯ ಚಿಕ್ಕಪ್ಪ ಮುತ್ತು ಮದರಿ, ಕೆಲಸಗಾರ ವಾಲಿಕಾರ ಕೂಡ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವತಿಯ ಚಿಕ್ಕಮ್ಮ ಮುತ್ತು ಅವರ ಪತ್ನಿ ಸೀಮಾ ಸಕಾಲಿಕ ಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು..

ಮಹಿಳೆಯರ ಸ್ಯಾನಿಟರಿ ಪ್ಯಾಡ್ ವಿಚಾರಕ್ಕೆ ಗಲಾಟೆ, ಮೆಡಿಕಲ್ ಶಾಪ್ ಸಿಬ್ಬಂದಿ ಮೇಲೆ ಹಲ್ಲೆ!

ಎರಡು ಕುಟುಂಬಗಳಿಂದ ದೂರು ಪ್ರತಿದೂರು..!

ಪ್ರೀತಿ, ಬ್ರೇಕಪ್, ಬೆಂಕಿ ಪ್ರಕರಣ ಹಿನ್ನೆಲೆ ಹುಡುಗಿ ಹಾಗೂ ಹುಡುಗನ ಕುಟುಂಬಗಳಿಂದ ಪ್ರಕರಣ ದಾಖಲಾಗಿದೆ. ಹುಡುಗನ ಕುಟುಂಬದವರು ರಾಹುಲ್‌ನನ್ನ ಮನೆಗೆ ಕರೆಯಿಸಿಕೊಂಡು ಬೆಂಕಿ ಹಚ್ಚಿದ್ದಾರೆ ಎಂದು ದೂರು ದಾಖಲು ಮಾಡಿದ್ದರೆ, ಇತ್ತ ಹುಡುಗಿ ಕುಟುಂಬಸ್ಥರು ಹುಡುಗನ ನಮ್ಮ ಮನೆಗೆ  ಹುಡುಗಿಯನ್ನ ಜೀವಂತ ಸುಡಲು ಬಂದಿದ್ದ, ತಡೆಯಲು ಬಂದವರ ಮೇಲೆ ಪೆಟ್ರೋಲ್ ಸುರಿದಿದ್ದಾನೆ. ಈ ವೇಳೆ ಆತನಿಗು ಬೆಂಕಿ ತಗುಲಿ ಗಾಯವಾಗಿದೆ ಎಂದು ದೂರು ದಾಖಲಿಸಿದ್ದಾರೆ‌. ಇನ್ನೂ ಪ್ರಕರಣ ಹಿನ್ನೆಲೆ ಯುವತಿಯ ತಂದೆಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

ವೈರಲ್ ಆಗಿದ್ದ ಹುಡುಗನ ಆಡಿಯೋಗಳು..!

ಪ್ರಕರಣದ ಆರಂಭದಲ್ಲಿ ಹುಡುಗನನ್ನ ಮನೆಗೆ ಕರೆಯಿಸಿ ಬೇಕಂತಲೇ ಬೆಂಕಿ ಇಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದ್ರೆ ಬಳಿಕ ವೈರಲ್ ಆಗಿದ್ದ ಕೆಲ ಆಡಿಯೋಗಳು ಹುಡುಗ ಪ್ರೀತಿಯ ಹೆಸ್ರಲ್ಲಿ ಮಾಡಿದ್ದ ಅತಿರೇಕತನ, ಹುಂಬತನಗಳು ಬಯಲಾಗಿದ್ದವು. ಲವ್ ಬ್ರೇಕಪ್ ಬಳಿಕ ಹುಡುಗ ಮತ್ತೆ ಹುಡುಗಿ ಬೆನ್ನು ಬಿದ್ದಿದ್ದ‌. ಅಲ್ಲದೆ ಮನೆಯವರಿಗೆ ಕರೆ ಮಾಡಿ ಕಾಟ ಕೊಡ್ತಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ ಹುಡುಗಿ ಹೆಸ್ರಲ್ಲಿ ಫೇಕ್ ಇನ್ಸಸ್ಟಾ ಅಕೌಂಟ್ ಕ್ರಿಯೆಟ್ ಮಾಡಿ ಇಬ್ಬರ ಪೋಟೊ ಅಪ್ಲೋಡ್ ಮಾಡಿ ಹಿಂಸೆ ಕೊಡ್ತಿದ್ದ ಎನ್ನಲಾಗಿದೆ‌. ಇದಕ್ಕೆ ಪ್ರತಿಯಾಗಿ ಮದರಿ ಕುಟುಂಬಸ್ಥರು ರಾಹುಲ್ ತಂದೆ-ತಾಯಿಗೆ ಕರೆ ಮಾಡಿ ಹುಡುಗ ನೀಡ್ತಿರೋ ಮಾನಸಿಕ ಹಿಂಸೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಆಗ ಸ್ವತಃ ರಾಹುಲ್ ತಂದೆ ತಾಯಿ ನೀವೆ ಏನಾದ್ರು ಮಾಡಿ, ನಮಗು ಅವನಿಗು ಸಂಬಂಧ ಇಲ್ಲ, ಅವನಿಗೆ ಹೇಳಿ ಹೇಳಿ ಸಾಕಾಗಿದೆ ಎಂದಿದ್ದರು‌. ಹೀಗೆ ಪ್ರತಿಷ್ಟಿತ ಕುಟುಂಬಗಳ ನಡುವಿನ ಲವ್ ಬೆಂಕಿ ಕದನಕ್ಕೆ ಈಗ ಪ್ರಿಯಕರ  ಬಲಿಯಾಗಿದ್ದಾನೆ. 

Latest Videos
Follow Us:
Download App:
  • android
  • ios