Asianet Suvarna News Asianet Suvarna News

ಸ್ನೇಹಿತನ ಮಾತು ಕೇಳಿ ಹುಡುಗಿಯ ಮೈಮುಟ್ಟಿ ಅಸಭ್ಯ ವರ್ತನೆ; ಪರಪ್ಪನ ಅಗ್ರಹಾರ ಸೇರಿದ ಕಾಮುಕ

ಕೆಲ ದಿನಗಳ ಹಿಂದೆ ಆರ್‌ಪಿಸಿ ಲೇಔಟ್‌ನ ಹೋಟೆಲ್‌ನಲ್ಲಿ ಯುವತಿ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ ಕಿಡಿಗೇಡಿ ಕೊನೆಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.

Misbehavior with young lady accused Chandan arrested at bengaluru rav
Author
First Published Feb 1, 2024, 7:00 AM IST

ಬೆಂಗಳೂರು (ಫೆ.1): ಕೆಲ ದಿನಗಳ ಹಿಂದೆ ಆರ್‌ಪಿಸಿ ಲೇಔಟ್‌ನ ಹೋಟೆಲ್‌ನಲ್ಲಿ ಯುವತಿ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ ಕಿಡಿಗೇಡಿ ಕೊನೆಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.

ಸುಂಕದಕಟ್ಟೆಯ ವಿಘ್ನೇಶ್ವರನಗರದ ನಿವಾಸಿ ಚಂದನ್ ಬಂಧಿತನಾಗಿದ್ದು, ಆರ್‌ಪಿಸಿ ಲೇಔಟ್‌ ಹೋಟೆಲ್‌ಗೆ ತನ್ನ ಸ್ನೇಹಿತರ ಜತೆ ಬಂದಾಗ ಆತ ಈ ಕೃತ್ಯ ಎಸಗಿದ್ದ. ಈ ಬಗ್ಗೆ ಹೋಟೆಲ್ ವ್ಯವಸ್ಥಾಪಕಿ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ವಿಜಯನಗರ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.

ಬೆಂಗಳೂರು: 6ನೇ ಮಹಡಿಯಿಂದ ಜಿಗಿದು ಬಿಬಿಎ ವಿದ್ಯಾರ್ಥಿ ಆತ್ಮಹತ್ಯೆ!

ಸ್ನೇಹಿತನ ಮಾತು ಕೇಳಿ ಕೆಟ್ಟ:

ಗ್ಯಾಸ್ ಡೆಲಿವರಿ ಬಾಯ್ ಆಗಿದ್ದ ಚಂದನ್, ಡಿ.30 ರಂದು ರಾತ್ರಿ 7.30ರಲ್ಲಿ ತನ್ನ ಸ್ನೇಹಿತರ ಜತೆಗೆ ಆರ್‌ಪಿಸಿ ಲೇಔಟ್‌ನಲ್ಲಿರುವ ಹೋಟೆಲ್‌ಗೆ ತಿಂಡಿ ತಿನ್ನಲು ಬಂದಿದ್ದ. ಆ ವೇಳೆ ಹೋಟೆಲ್ ಕ್ಯಾಶ್ ಕೌಂಟರ್‌ನಲ್ಲಿ ನಿಂತಿದ್ದ ಯುವತಿಗೆ ಈ ಸ್ನೇಹಿತರ ಕಣ್ಣಿಗೆ ಬಿದ್ದಿದ್ದಳು. ಆ ಯುವತಿ ಮೈ ಮುಟ್ಟು ನೋಡೋಣ ಎಂದು ಚಂದನ್‌ಗೆ ಆತನ ಸ್ನೇಹಿತರು ಸವಾಲು ಹಾಕಿದ್ದರು. 

ಈ ಸವಾಲು ಸ್ವೀಕರಿಸಿದ ಚಂದನ್‌, ಕ್ಯಾಶ್ ಕೌಂಟರ್‌ನಲ್ಲಿ ನಿಂತಿದ್ದ ಯುವತಿಯನ್ನು ಹಿಂದಿನಿಂದ ಹೋಗಿ ಮುಟ್ಟಿದ್ದ. ಈ ಅಸಭ್ಯ ವರ್ತನೆಗೆ ಸಂತ್ರಸ್ತೆ ಕಿಡಿಕಾರಿದ್ದಳು. ತಕ್ಷಣವೇ ಹೋಟೆಲ್‌ನಿಂದ ಸ್ನೇಹಿತರ ಜತೆ ಆರೋಪಿ ಪರಾರಿಯಾಗಿದ್ದ ಎಂದು ಪೊಲೀಸರು ವಿವರಿಸಿದ್ದಾರೆ. 

ಮಹಿಳೆಗೆ ಆಶ್ಲೀಲ ಕೈ ಸನ್ನೆ ಮಾಡಿ ಪರಾರಿಯಾಗಿದ್ದ ಕಿಡಿಗೇಡಿ ಸೆರೆ!

ಬೆಂಗಳೂರು: ಇತ್ತೀಚಿಗೆ ಕಾರಿನಲ್ಲಿ ಕುಳಿತಿದ್ದ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ ಕಿಡಿಗೇಡಿಯನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೆ.ಬಿ. ನಗರದ ಸುನೀಲ್‌ ಕುಮಾರ್ ಶರ್ಮಾ ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ಮಹದೇವಪುರದ ರಿಂಗ್ ರೋಡ್‌ನಲ್ಲಿ ಮಹಿಳೆಗೆ ಆಶ್ಲೀಲವಾಗಿ ಕೈ ಸನ್ನೆ ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಬ್ಬಬ್ಬಾ ಮನೆಗಳ್ಳತನ ಮಾಡಲು ಹೈದರಾಬಾದ್‌ನಿಂದ ಬೆಂಗಳೂರಿಗೆ ಕಾರಿನಲ್ಲಿ ಬರುತ್ತಿದ್ದ ಖದೀಮರು!

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಶರ್ಮಾ, ಗೆಳೆಯರ ಜತೆ ರಿಂಗ್ ರೋಡ್‌ಗೆ ಬಂದಿದ್ದ. ಅದೇ ವೇಳೆ ಸ್ನೇಹಿತರ ಜತೆ ರಿಂಗ್ ರೋಡ್ ಸಮೀಪ ಹೋಟೆಲ್‌ಗೆ ಬಂದಿದ್ದ ಸಂತ್ರಸ್ತೆ, ರಸ್ತೆ ಬದಿ ಕಾರು ನಿಲ್ಲಿಸಿಕೊಂಡು ಕುಳಿತಿದ್ದರು. ಆಗ ಆಕೆಗೆ ಕಾರಿನಿಂದ ಹೊರ ಬರುವಂತೆ ಕೈ ಸನ್ನೆ ಮಾಡಿ ಆರೋಪಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ. ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿ ಬಂಧನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios