Asianet Suvarna News Asianet Suvarna News

ವಿಜಯಪುರ: ಸೂಪರ್‌ ಮಾರ್ಕೆಟ್‌ನಲ್ಲಿ ಕ್ರಿಕೆಟ್‌ ಆಟಗಾರ್ತಿ ರಾಜೇಶ್ವರಿ ಕಿರಿಕ್‌

ಅಲಂಕಾರಿಕ ವಸ್ತುಗಳ ಖರೀದಿ ವೇಳೆ ಗಲಾಟೆ, ಸಿಬ್ಬಂದಿ ಮೇಲೆ ಹಲ್ಲೆ ಆರೋಪ, ವಿಜಯಪುರದ ಸೂಪರ್‌ ಮಾರುಕಟ್ಟೆಯಲ್ಲಿ ನಡೆದ ಘಟನೆ, ಹಲ್ಲೆ ಆರೋಪ ನಿರಾಕರಿಸಿದ ಆಟಗಾರ್ತಿ

Indian Cricketer Rajeshwari Gayakwad Assault on Super Market Staff in Vijayapura grg
Author
First Published Dec 2, 2022, 2:00 PM IST

ವಿಜಯಪುರ(ಡಿ.02): ಅಲಂಕಾರಿಕ ವಸ್ತುಗಳ ಖರೀದಿಗಾಗಿ ತಮ್ಮ ಸ್ನೇಹಿತೆ ಜೊತೆ ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಉಮದಿ ಸೂಪರ್‌ ಮಾರುಕಟ್ಟೆಗೆ ಬುಧವಾರ ಸಂಜೆ ಆಗಮಿಸಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರ್ತಿ ರಾಜೇಶ್ವರಿ ಗಾಯಕವಾಡ ಅವರು, ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. 

ಅಲಂಕಾರಿಕ ವಸ್ತುಗಳ ಪರಿಶೀಲನೆ ವೇಳೆ ಸೂಪರ್‌ ಮಾರುಕಟ್ಟೆಯ ಸಿಬ್ಬಂದಿ ಹಾಗೂ ರಾಜೇಶ್ವರಿ ಗಾಯಕವಾಡ ನಡುವೆ ವಾಗ್ವಾದ ನಡೆಯಿತು. ಈ ವೇಳೆ, ರಾಜೇಶ್ವರಿ ಗಾಯಕವಾಡ ಅವರು 8ರಿಂದ 10 ಮಂದಿ ಗೂಂಡಾಗಳನ್ನು ಕರೆಸಿ ಸೂಪರ್‌ ಮಾರುಕಟ್ಟೆಯ ಮಾಲಿಕ ಮಲ್ಲಿಕಾರ್ಜುನ ಉಮದಿ ಹಾಗೂ ಅವರ ಪುತ್ರ ಪ್ರಶಾಂತ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಲಾಟೆ ನಡೆದಿರುವ ದೃಶ್ಯ ಸೂಪರ್‌ ಮಾರುಕಟ್ಟೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರ್ಶನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

VIJAYAPURA ಬೆತ್ತಲೆ ವಿಡಿಯೋ ಮಾಡಿ ಹಾಸನ 'ಪ್ರಿಯತಮೆ'ಯಿಂದ ದೋಖಾ: ₹ 40 ಲಕ್ಷ ಕಳೆದುಕೊಂಡ 'ಹೀರೋ'

ಆದರೆ, ಹಲ್ಲೆ ಆರೋಪವನ್ನು ಗಾಯಕವಾಡ ನಿರಾಕರಿಸಿದ್ದಾರೆ. ಉಮದಿ ಸೂಪರ್‌ ಮಾರುಕಟ್ಟೆಗೆ ವಸ್ತುಗಳ ಖರೀದಿಗೆ ಹೋಗಿದ್ದು ನಿಜ. ಆದರೆ, ಅಲ್ಲಿ ಸೂಪರ್‌ ಮಾರುಕಟ್ಟೆಯ ಮಾಲೀಕರ ಜೊತೆಗಾಗಲಿ, ಸಿಬ್ಬಂದಿ ಜೊತೆಗಾಗಲಿ ಯಾವುದೇ ರೀತಿ ಗಲಾಟೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 

Follow Us:
Download App:
  • android
  • ios