Asianet Suvarna News Asianet Suvarna News

New York: ಅಗ್ನಿಗೆ ಆಹುತಿಯಾದ ಭಾರತೀಯ ಮೂಲದ ಮಹಿಳಾ ಉದ್ಯಮಿ

ಈ ಅವಘಡದಲ್ಲಿ, 32 ವರ್ಷದ ಮಹಿಳಾ ಉದ್ಯಮಿ ತಾನ್ಯಾ ಬತಿಜಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು, ಬೆಂಕಿಯ ಜ್ವಾಲೆಯು ಹೆಚ್ಚಿದ್ದ ಕಾರಣ, ಆ ಮನೆಯೊಳಗೆ ಪ್ರವೇಶಿಸಲು ಪೊಲೀಸ್ ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ ಎಂದೂ ಹೇಳಲಾಗಿದೆ. 

indian american businesswoman tanya bathija killed in new york house fire ash
Author
First Published Dec 18, 2022, 7:59 PM IST

ಅಮೆರಿಕದ (United States of America) ನ್ಯೂಯಾರ್ಕ್‌ನ (New York) ಲಾಂಗ್ ಐಲ್ಯಾಂಡ್‌ನಲ್ಲಿರುವ (Long Island) ಡಿಕ್ಸ್ ಹಿಲ್ಸ್ ಕಾಟೇಜ್‌ನಲ್ಲಿ 32 ವರ್ಷದ ಭಾರತೀಯ-ಅಮೆರಿಕನ್ (India - American) ಮಹಿಳಾ ಉದ್ಯಮಿ (Business Women) ಮತ್ತು ಅಕೆಯ ಶ್ವಾನ ಮೃತಪಟ್ಟಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಡಿಸೆಂಬರ್ 14 ರಂದು ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಈ ಅವಘಡದಲ್ಲಿ, 32 ವರ್ಷದ ಮಹಿಳಾ ಉದ್ಯಮಿ ತಾನ್ಯಾ ಬತಿಜಾ (Tanya Bathija) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಇನ್ನು, ಬೆಂಕಿಯ ಜ್ವಾಲೆಯು ಹೆಚ್ಚಿದ್ದ ಕಾರಣ, ಆ ಮನೆಯೊಳಗೆ ಪ್ರವೇಶಿಸಲು ಪೊಲೀಸ್ ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ ಎಂದೂ ಹೇಳಲಾಗಿದೆ. 

ಗಸ್ತು ಅಧಿಕಾರಿಗಳು 2:53 ಕ್ಕೆ ಕರೆಯೊಂದಕ್ಕೆ ಪ್ರತಿಕ್ರಿಯಿಸಿದರು ಎಂದು ತಿಳಿದುಬಂದಿದ್ದು, ಈ ಮಧ್ಯೆ, ಈ ಪ್ರಕರಣದಲ್ಲಿ ಯಾವುದೇ ಕ್ರಿಮಿನಲ್ ಪಿತೂರಿಯ ಕೃತ್ಯವನ್ನು ಸಫೋಲ್ಕ್ ಕೌಂಟಿ ಪೊಲೀಸ್ ಇಲಾಖೆಯು ತಳ್ಳಿಹಾಕಿದೆ. ತಾನ್ಯಾ ಬತೀಜಾ ಕಾರ್ಲ್ಸ್ ಸ್ಟ್ರೈಟ್ ಪಾತ್‌ನಲ್ಲಿರುವ ತನ್ನ ಪೋಷಕರ ಮನೆಯ ಹಿಂದಿನ ಕಾಟೇಜ್‌ನಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸ್‌ ಇಲಾಖೆಯ ನರಹತ್ಯೆ ಘಟಕದ ಮುಖ್ಯಸ್ಥ ಸಫೋಲ್ಕ್ ಪೊಲೀಸ್ ಇಲಾಖೆಯ ಲೆಫ್ಟಿನೆಂಟ್ ಕೆವಿನ್ ಬೇರೆರ್ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಅಮೆರಿಕದ ಗೋಲ್ಡನ್‌ ಗೇಟ್‌ ಬ್ರಿಡ್ಜ್‌ಗೆ ಜಿಗಿದು ಮೃತಪಟ್ಟ ಭಾರತ ಮೂಲದ ಯುವಕ..!

ತಾನ್ಯಾ ಬತಿಜಾ ಅವರು ಇತ್ತೀಚೆಗೆ ಲಾಂಗ್ ಐಲ್ಯಾಂಡ್‌ನ ಬೆಲ್‌ಪೋರ್ಟ್‌ನಲ್ಲಿ ಡಂಕಿನ್ ಡೊನಟ್ಸ್ ಔಟ್‌ಲೆಟ್ ಅನ್ನು ತೆರೆದಿದ್ದರು. ಅಕೌಂಟಿಂಗ್ ಮತ್ತು ಫೈನಾನ್ಸ್‌ನಲ್ಲಿ ಎಂಬಿಎ ಮುಗಿಸಿದ ನಂತರ ಆಕೆ ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದರು ಎಂದೂ ತಿಳಿದುಬಂದಿದೆ.  ತಮ್ಮ ಎಂದಿನ ಬೆಳಗ್ಗೆಯ ವ್ಯಾಯಾಮಕ್ಕಾಗಿ ಎಚ್ಚರಗೊಂಡ ತಾನ್ಯಾ ಬತಿಜಾ ಅವರ ತಂದೆ ಗೋಬಿಂದ್ ಬತಿಜಾ ಅವರು ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ್ದಾರೆ. ಮತ್ತು ತಕ್ಷಣ 911 ಗೆ ಡಯಲ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗೋಬಿಂದ್ ಬತಿಜಾ ಸಹ ಒಬ್ಬರು ಉದ್ಯಮಿ ಮತ್ತು ಸಮುದಾಯವೊಂದರ ನಾಯಕರು ಎಂದು ತಿಳಿದುಬಂದಿದೆ.

ಗೋಬಿಂದ್ ಬತಿಜಾ ಅವರು 911 ಗೆ ಕರೆ ಮಾಡಿದ ಅದೇ ಸಮಯದಲ್ಲಿ ಅವರ ಹೆಂಡತಿಯನ್ನು ಎಚ್ಚರಿಸಿದರು. ಅಲ್ಲದೆ, ಅವರು ಕಾಟೇಜ್‌ ಬಳಿ ಓಡಿ ಮಗಳನ್ನು ಹೊರಗೆ ತರಲು ಪ್ರಯತ್ನಿಸಿದರು. ಆದರೆ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿತ್ತು" ಎಂದೂ ಪೊಲೀಸ್‌ ಇಲಾಖೆ ವರದಿ ನೀಡಿದೆ. ಇನ್ನು, ಸ್ಥಳೀಯ ದಿನಪತ್ರಿಕೆ, ನ್ಯೂಸ್‌ಡೇ ಪ್ರಕಾರ, ಗಸ್ತು ಅಧಿಕಾರಿಗಳು ಮತ್ತು ಸಾರ್ಜೆಂಟ್ ಒಬ್ಬರು ತಾನ್ಯಾ ಬತಿಜಾ ಅವರ ಕಾಟೇಜ್‌ಗೆ ಪ್ರವೇಶಿಸಲು ಪ್ರಯತ್ನಿಸಿದರು ಆದರೆ ಬೆಂಕಿ ಅವರನ್ನು ಹಿಮ್ಮೆಟ್ಟಿಸಿತು ಎಂದೂ ಹೇಳಲಾಗಿದೆ. ನಂತರ ಹೊಗೆಯನ್ನು ಕುಡಿದಿದ್ದ ಕಾರಣ ಇವರನ್ನು ಸ್ಟೋನಿ ಬ್ರೂಕ್ ಯೂನಿವರ್ಸಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: Shivamogga: ರೌಡಿಶೀಟರ್‌ಗಳಿಂದ ಮಹಿಳೆ ಮೇಲೆ ಹಲ್ಲೆ, ಕಾರಿಗೆ ಬೆಂಕಿ

ಇನ್ನು, ಸ್ಥಳದಲ್ಲಿ ಬೆಂಕಿಯನ್ನುಆರಿಸಲು 60 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಣಾ ಕಾರ್ಯಕರ್ತರನ್ನು ಕರೆಸಲಾಯಿತು ಎಂದು ಡಿಕ್ಸ್ ಹಿಲ್ಸ್ ಅಗ್ನಿಶಾಮಕ ಇಲಾಖೆಯ ವಕ್ತಾರರು ಹೇಳಿದರು. ತಾನ್ಯಾ ಬತಿಜಾ ಅವರ ಅಂತ್ಯಕ್ರಿಯೆಯನ್ನು ರೊಂಕೊಂಕೋಮಾ ಸರೋವರದಲ್ಲಿರುವ ಮಲೋನಿಯ ಲೇಕ್ ಫ್ಯೂನರಲ್ ಹೋಮ್ ಮತ್ತು ಶವಸಂಸ್ಕಾರ ಕೇಂದ್ರದಲ್ಲಿ ನಡೆಸಲಾಗುವುದು ಎಂದೂ ವರದಿ ತಿಳಿಸಿದೆ.

Follow Us:
Download App:
  • android
  • ios