ಬೆಂಗಳೂರಿನ ಇಂದಿರಾನಗರದಲ್ಲಿ ವಾಕಿಂಗ್‌ಗೆ ತೆರಳಿದ್ದ ಮಹಿಳೆಯ ಎದುರು ಕಾಮುಕನೊಬ್ಬ ಹಸ್ತಮೈಥುನ ಮಾಡಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಘಟನೆ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಈ ಘಟನೆಯಿಂದ ಸ್ಥಳೀಯ ಮಹಿಳೆಯರಲ್ಲಿ ಆತಂಕ

ಬೆಂಗಳೂರು(ನ.4):ಸಾರ್ವಜನಿಕವಾಗಿ ಮಹಿಳೆಯ ಎದುರು ಕಾಮುಕನೋರ್ವ ಹಸ್ತಮೈಥುನ ಮಾಡಿ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೇಡಂ ಎಂದು ಕರೆದು ಅಸಭ್ಯ ವರ್ತನೆ:

ಇಂದು ಬೆಳಗ್ಗೆ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಿದ್ದ ಮಹಿಳೆಗೆ ಹಿಂದಿನಿಂದ ಬಂದು 'ಮೇಡಂ' ಎಂದು ಕರೆದಿದ್ದ ಆರೋಪಿ. ಯಾರು ಎಂದು ಹಿಂಬದಿ ತಿರುಗಿ ನೋಡಿದಾಗ, ಕಂದು ಬಟ್ಟೆ ಧರಿಸಿದ್ದ ಆ ವ್ಯಕ್ತಿಯು ಅಸಭ್ಯವಾಗಿ ವರ್ತಿಸುತ್ತಿದ್ದು, ಹಸ್ತಮೈಥುನ ಮಾಡಿಕೊಂಡಿದ್ದು ಕಂಡು ಮಹಿಳೆ ಆಘಾತಗೊಂಡಿದ್ದಾಳೆ.

ಆರೋಪಿ ವಿರುದ್ಧ ಎಫ್‌ಐಆರ್

ಘಟನೆ ಬಳಿಕ ಲೈಂಗಿಕ ಕಿರುಕುಳ ನೀಡಿ ಅಶ್ಲೀಲ ಕೃತ್ಯ ನಡೆಸಿದ ಆರೋಪಿಯ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಆರೋಪಿಗಾಗಿ ಹುಡುಕಾಟ:

ಆರೋಪಿಯ ಬಗ್ಗೆ ಯಾವುದೇ ಗುರುತು ಸ್ಪಷ್ಟವಾಗಿಲ್ಲ. ಘಟನೆಯ ನಡೆದ ಸ್ಥಳದಲ್ಲಿರುವ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ಆರೋಪಿಯನ್ನು ಪತ್ತೆಹಚ್ಚಲು ಮುಂದಾಗಿರುವ ಪೊಲೀಸರು. ಈ ಘಟನೆಯಿಂದಾಗಿ ಸ್ಥಳೀಯ ಮಹಿಳೆಯರು ಭಯದಲ್ಲಿ ಓಡಾಡುವಂತಾಗಿದೆ. ಬೆಳಗ್ಗೆ ವಾಕಿಂಗ್ ಹೋಗುವುದು ಕೂಡ ಸುರಕ್ಷಿತವಲ್ಲವೇ ಎಂಬ ಭಯ ಆವರಿಸಿದೆ. ಪೊಲೀಸರು ಇಂತಹ ಘಟನೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.