ಒಂದೇ ಹೆಸರಿನ ಇಬ್ಬರಿಗೆ ಒಂದೇ ಖಾತೆ: ಬ್ಯಾಂಕ್‌ ಮಹಾ ಎಡವಟ್ಟು| ಒಬ್ಬ ಕಷ್ಟಪಟ್ಟು ಹಣ ಕಟ್ಟಿದ, ಮತ್ತೊಬ್ಬ ಮಜಾ ಮಾಡಿದ| ‘ಮೋದಿ ಹಣ ಕಳುಹಿಸಿದ್ದಾರೆಂದು ನಾನು ಭಾವಿಸಿದ್ದೆ’

ಭಿಂಡ್‌(n.23): ಬ್ಯಾಂಕ್‌ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗಿ ಯಾರೋ ಕಷ್ಟಪಟ್ಟು ಸಂಪಾದನೆ ಮಾಡಿ ಬ್ಯಾಂಕ್‌ ಖಾತೆಯಲ್ಲಿಟ್ಟಹಣದಲ್ಲಿ ಇನ್ಯಾರೋ ಮಜಾ ಮಾಡಿದ ಘಟನೆ ಮಧ್ಯಪ್ರದೇಶದ ಭಿಂಡ್‌ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಇಲ್ಲಿನ ಅಲಂಪುರ ಪಟ್ಟಣದಲ್ಲಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ)ನಲ್ಲಿ ಅಕ್ಕಪಕ್ಕದ ರೂರೈ ಮತ್ತು ರೌನಿ ಊರಿನವರಾದ ಒಂದೇ ಹೆಸರು ಹೊಂದಿದ ಹುಕುಂ ಸಿಂಗ್‌ ಎಂಬ ಇಬ್ಬರು ವ್ಯಕ್ತಿಗಳು ಖಾತೆ ತೆರೆದಿದ್ದರು. ಈ ಇಬ್ಬರಿಗೂ ಪ್ರತ್ಯೇಕ ಖಾತೆ ಸಂಖ್ಯೆ ನೀಡಬೇಕಿದ್ದ ಬ್ಯಾಂಕ್‌ ಸಿಬ್ಬಂದಿ ಇಬ್ಬರಿಗೂ ಒಂದೇ ಸಂಖ್ಯೆಯ ಬ್ಯಾಂಕ್‌ ಖಾತೆಯನ್ನು ನೀಡಿ ಎಡವಟ್ಟು ಮಾಡಿದ್ದರು. ಈ ಬಗ್ಗೆ ಏನೂ ತಿಳಿಯದಿದ್ದ ರುರೈ ಗ್ರಾಮದ ಹುಕುಂ ಸಿಂಗ್‌ ಅವರು ಜಮೀನು ಖರೀದಿಗಾಗಿ ಆಗ್ಗಾಗ್ಗೆ ತಮ್ಮ ಖಾತೆಗೆ ಹಣ ಜಮಾವಣೆ ಮಾಡುತ್ತಾ ಹೋಗಿದ್ದಾರೆ. ರೌನಿ ಗ್ರಾಮದ ಮತ್ತೋರ್ವ ಹುಕುಂ ಸಿಂಗ್‌ ತನ್ನ ಖಾತೆಗೆ ಪದೇ ಪದೇ ಹಣ ಬರುತ್ತಿದ್ದನ್ನು ಗಮನಿಸಿ, ಪ್ರಧಾನಿ ನರೇಂದ್ರ ಮೋದಿ ಕಳುಹಿಸುತ್ತಿರಬಹುದು ಎಂದು ಭಾವಿಸಿ ಆ ಹಣ ತೆಗೆದು ಮಜಾ ಮಾಡಿದ್ದಾನೆ.

ಮೋದಿ ಊರಲ್ಲಿಲ್ಲ: ಸರ್ಕಾರ ಈ ಆಘಾತ ಖಂಡಿತ ನಿರೀಕ್ಷಿಸಿರಲಿಲ್ಲ!

ರುರೈ ಗ್ರಾಮದ ಹುಕುಂ ಸಿಂಗ್‌ ಅ.16ರಂದು ತನ್ನ ಖಾತೆಯನ್ನು ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. 2016ರಲ್ಲಿ ಈ ಬ್ಯಾಂಕ್‌ನಲ್ಲಿ ತಾನು ಖಾತೆ ತೆರೆದು, ಜಮೀನು ಖರೀದಿಗಾಗಿ ಹಣ ಜಮಾವಣೆ ಮಾಡುತ್ತಿದ್ದೆ. ಆದರೆ, ಈ ಪೈಕಿ 89 ಸಾವಿರ ರು. ಅನ್ನು ಮತ್ತೊಬ್ಬರು ಮಜಾ ಮಾಡಿದ್ದಾರೆ ಎಂದು ಖಾತೆಯಲ್ಲಿರುವ ಹಣ ಕಳೆದುಕೊಂಡ ಸಂತ್ರಸ್ತ ಹುಕಂ ಸಿಂಗ್‌ ಅವಲತ್ತುಕೊಂಡಿದ್ದಾರೆ.

ನ.01ರವೆರೆಗೆ ಕಾಯಿರಿ: ಎಸ್‌ಬಿಐ ಕೊಡುವ ಕಹಿ ಸುದ್ದಿ ಏನೆಂದು ನೋಡಿರಿ!