'ನಗುವ ಸದ್ದಿನಲ್ಲೇ ಹೃದಯ ಒಡೆದೆಯಾ...' ಮೋಸ ಮಾಡಿದ ಗರ್ಲ್‌ಫ್ರೆಂಡ್‌ ಹೆಸರು ಹೇಳದೆ ಉಸಿರುಬಿಟ್ಟ ಹುಡುಗ!

ಪ್ರೀತಿ ಮಾಡುತ್ತಿದ್ದ ಹುಡುಗ ಬ್ರೇಕಪ್‌ ಮಾಡಲು ನಿರಾಕರಿಸಿದ ಎನ್ನುವ ಕಾರಣಕ್ಕಾಗಿ ಹುಡುಗಿಯೊಬ್ಬಳು ಆತನಿಗೆ ವಿಷವಿಟ್ಟು ಸಾಯಿಸಿದ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ. 23 ವರ್ಷದ ರೇಡಿಯಾಲಜಿ ವಿದ್ಯಾರ್ಥಿ ಶರೋನ್‌ ರಾಜ್‌ ಮೃತಪಟ್ಟ ಹುಡುಗ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಆತನ ಗೆಳತಿ ಗ್ರೀಷ್ಮಾರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ಪ್ರಕರಣ ಟ್ವಿಸ್ಟ್‌ ಏನೆಂದರೆ, ಸಾಯುವ ಕೊನೆ ಸಮಯದಲ್ಲೂ ಹುಡುಗ, ವಿಷ ಹಾಕಿದ್ದು ತನ್ನ ಗೆಳತಿ ಎಂದು ಹೇಳಲು ನಿರಾಕರಿಸಿದ್ದ ಎನ್ನುವುದು. 

In Kerala Thiruvananthapuram College student Sharon Raj poisoned by girlfriend Greeshma for refusing to breakup san

ತಿರುವನಂತಪುರ (ನ.1): ಪ್ರೀತಿ ಅಂದಾಗ ಅದರ ಬೆನ್ನಲ್ಲೇ ಮೋಸ, ಅನುಮಾನ ಬರುವುದು ಇಂಥ ಪ್ರಕರಣಗಳ ಕಾರಣದಿಂದಾಗಿ. ಬ್ರೇಕಪ್‌ ಮಾಡಿಕೊಳ್ಳಲು ನಿರಾಕರಿಸಿದ ಎನ್ನುವ ಏಕೈಕ ಕಾರಣಕ್ಕೆ ಪ್ರೇಮಿಯಾಗಿದ್ದ 23 ವರ್ಷದ ಕಾಲೇಜ್ ಹುಡುಗನಿಗೆ ವಿಷವಿಟ್ಟು ಸಾಯಿಸಿದ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ. ಅಂದಾಜು ಎಂಟು ಗಂಟೆಗಳ ಕಾಲ ನಡೆದ ವಿಚಾರಣೆಯ ಬಳಿಕ ಆತನ ಗೆಳತಿ ತಪ್ಪೊಪ್ಪಿಕೊಂಡ ಬಳಿಕ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. 23 ವರ್ಷದ ರೇಡಿಯಾಲಜಿ ವಿದ್ಯಾರ್ಥಿಯಾಗಿದ್ದ ಶರೋನ್‌ ರಾಜ್‌ ಅಕ್ಟೋಬರ್‌ 25 ರಂದು ಸಾವು ಕಂಡಿದ್ದು, ಅಕ್ಟೋಬರ್‌ 31 ರಂದು ಪೊಲೀಸರು ಆತನಿಗೆ ವಿಷ ನೀಡಿದ್ದು ಅವನ ಗರ್ಲ್‌ಫ್ರೆಂಡ್‌ ಅನ್ನೋದನ್ನು ಖಚಿತಪಡಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಜಿತ್ ಕುಮಾರ್ ಅವರು ತಿರುವನಂತಪುರಂ ಮೂಲದ ಶರೋನ್ ರಾಜ್ ಅವರನ್ನು ಆತನ ಗೆಳತಿ ಗ್ರೀಷ್ಮಾ ಹತ್ಯೆ ಕೀಟನಾಶಕ ತಿನ್ನಿಸಿ ಕೊಲೆ ಮಾಡಿದ್ದಾರೆ ಅನ್ನೋದನ್ನು ಖಚಿತಪಡಿಸಿದ್ದಾರೆ. ಆದರೆ, ಸಾವಿನ ಹೇಳಿಕೆಯಲ್ಲಿ ಮಾತ್ರ ಶರೋನ್‌ ರಾಜ್‌ ಎಲ್ಲಿಯೂ ತನ್ನ ಗೆಳತಿಯ ಹೆಸರನ್ನು ಹೇಳಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಅನುಮಾನ ಬಂದು ಪೊಲೀಸರು 8 ಗಂಟೆ ವಿಚಾರಣೆ ನಡೆಸಿದ ಬಳಿಕ ಗ್ರೀಷ್ಮಾ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಬಂಧವನ್ನು ಕೊನೆಗಾಣಿಸಲು ಆತ ಒಪ್ಪಿರಲಿಲ್ಲ. ಆ ಕಾರಣಕ್ಕಾಗಿ ಅವನನ್ನೇ ಸಾಯಿಸಿದ್ದಾಗಿ ಆಕೆ ಹೇಳಿದ್ದಾಳೆ.

'ಅವನನ್ನು ತನ್ನ ಮನೆಗೆ ಕರೆದು ಆಯುರ್ವೇದದ ಮಿಶ್ರಣದಲ್ಲಿ ಕಪಿಕ್ ಎಂಬ ಕೀಟನಾಶಕವನ್ನು ಬೆರೆಸಿ ಕುಡಿಯುವಂತೆ ಒತ್ತಾಯಿಸಿದ್ದಾಳೆ. ಇದಾದ ಕೂಡಲೇ ವಾಂತಿ ಮಾಡಿಕೊಂಡ ಆತ ಬಳಿಕ ತನ್ನ ಸ್ನೇಹಿತನೊಂದಿಗೆ ತೆರಳಿದ್ದ. ಕೊಲೆಯನ್ನು ಮೊದಲೇ ಯೋಜಿಸಲಾಗಿತ್ತು ಮತ್ತು ಅದನ್ನು ಕಾರ್ಯಗತಗೊಳಿಸಲು ಅವಳು ಅವನನ್ನು ಮನೆಗೆ ಕರೆದಿದ್ದಳು' ಎಂದು ಎಡಿಜಿಪಿ ಹೇಳಿದ್ದಾರೆ. ಅಕ್ಟೋಬರ್‌ 14 ರಂದು ಈ ಘಟನೆ ನಡೆದಿತ್ತು.

ಗ್ರೀಷ್ಮಾ ಹಾಗೂ ಶರೋನ್‌ ರಾಜ್‌ ಕಳೆದ ಒಂದು ವರ್ಷದಿಂದ ಪ್ರೀತಿ ಮಾಡುತ್ತಿದ್ದರು. 2022ರ ಫೆಬ್ರವರಿಯಲ್ಲಿ ಇವರಿಬ್ಬರ ಸಂಬಂಧದಲ್ಲಿ ಮೊದಲ ಬಾರಿಗೆ ಮನಸ್ತಾಪ ಕಾಣಿಸಿಕೊಂಡಿತ್ತು. ಈ ಹಂತದಲ್ಲಿ ಗ್ರೀಷ್ಮಾ ಅವರ  ವಿವಾಹ ಕೂಡ ಬೇರೊಬ್ಬರೊಂದಿಗೆ ನಿಶ್ಚಯವಾಗಿತ್ತು. ಮದುವೆ ನಿಶ್ಚಯವಾಗಿದ್ದರೂ ಗ್ರೀಷ್ಮಾ, ಶರೋನ್‌ ರಾಜ್‌ ಜೊತೆ ಸಂಬಂಧ ಉಳಿಸಿಕೊಂಡಿದ್ದರು. ಆದರೆ, ಇತ್ತೀಚೆಗೆ ಅವರಿಬ್ಬರ ಸಂಬಂಧದಲ್ಲಿ ಮತ್ತೊಮ್ಮೆ ಮನಸ್ತಾಪ ಕಾಣಿಸಿಕೊಂಡಿತ್ತು. ಈ ಹಂತದಲ್ಲಿ ಶರೋನ್‌ರನ್ನು ತನ್ನ ದಾರಿಯಿಂದ ಹೊರಹಾಕಲು ಕೊಲ್ಲುವ ಯೋಚನೆ ಮಾಡಿದ್ದಳು. ಗ್ರೀಷ್ಮಾ ಇದಕ್ಕೂ ಮುನ್ನ ಹೇಗಾದರೂ ಸಂಬಂಧವನ್ನು ಕೊನೆಗೊಳಿಸಲು ಒಪ್ಪುವಂತೆ ಮಾಡಲು ಮೃದುವಾದ ವಿಧಾನಗಳನ್ನು ಪ್ರಯತ್ನಿಸಿದರು.

ಅಬ್ಬಾ ಇವಳೆಂತಾ ಪಾಕಡಾ ಹುಡುಗಿ, ಬಾಯ್‌ಫ್ರೆಂಡ್‌ಗೆ ವಿಷ ಹಾಕಿ ಕೊಲೆಮಾಡಿ ಮಳ್ಳಿ ತರ ಇದ್ದವಳ ಬಂಧನ

 

ಇದಕ್ಕಾಗಿ ತಾನೇ ಒಂದು ಕಥೆ ಹಣೆದಿದ್ದ ಗ್ರೀಷ್ಮಾ, ನನ್ನ ಜಾತಕದ ಪ್ರಕಾರ ನನ್ನ ಮೊದಲ ಪತಿ ಬೇಗನೆ ಸಾಯುತ್ತಾನೆ ಎಂದು ಹೇಳುವ ಮೂಲಕ ಆತನನ್ನು ಹೆದರಿಸುವ ಪ್ರಯತ್ನ ಮಾಡಿದ್ದಳು. ಆದರೆ, ಶರೋನ್‌ ರಾಜ್‌ ಇದ್ಯಾವುದನ್ನೂ ನಂಬಿರಲಿಲ್ಲ. "ಶರೋನ್ ಅವರ ಸಹೋದರ ಅವರು ಗ್ರೀಷ್ಮಾ ಅವರಿಗೆ ಪ್ರತಿನಿತ್ಯ ಕರೆ ಮಾಡಿ, ಆ ದಿನ ಶರೋನ್‌ಗೆ ತಿನ್ನೋಕೆ ಕೊಟ್ಟಿದ್ದೇನು ಅನ್ನೋದನ್ನು ಕೇಳುತ್ತಿದ್ದರು. ಆದರೆ, ಭಯದಿಂದ ಏನನ್ನೂ ಹೇಳಿರಲಿಲ್ಲ. ಹಾಗೇನಾದರೂ ಈ ವಿಚಾರ ಆತನಿಗೆ ಹೇಳಿದ್ದರೆ ಅವನನ್ನು ಬದುಕಿಸಬಹುದಿತ್ತು' ಎಂದು ಎಡಿಜಿಪಿ ಹೇಳಿದ್ದಾರೆ.

'ನಿನ್‌ ಹೆಂಡ್ತಿಗೆ ಪ್ರೆಗ್ನೆಂಟ್‌ ಮಾಡಿದ್ದು ನಾನು..': ಯಾವ ಸಿನಿಮಾ ಕಥೆಗೂ ಕಡಿಮೆಯಿಲ್ಲ ಈ ಕ್ರೈಮ್‌ ಸ್ಟೋರಿ

ಶರೋನ್ ಅಕ್ಟೋಬರ್ 25 ರಂದು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾಗುದ್ದ. ಇದು ಆತನ ಗೆಳತಿಯ ಯೋಜಿತ ಕೊಲೆ ಎಂದು ಆತನ ಕುಟುಂಬದವರು ಆರೋಪಿಸಿದ್ದಾರೆ. ಮ್ಯಾಜಿಸ್ಟ್ರೇಟ್ ಅಕ್ಟೋಬರ್ 20 ರಂದು ಅವರ ಸಾವಿನ ಹೇಳಿಕೆಯನ್ನು ದಾಖಲಿಸಿದ್ದಾರೆ ಮತ್ತು ಪೊಲೀಸರು ಅಕ್ಟೋಬರ್ 21 ರಂದು ಹೇಳಿಕೆಯನ್ನು ತೆಗೆದುಕೊಂಡರು. ಶರೋನ್‌ ರಾಜ್‌ ತನ್ನ ಕೊನೆಯ ಹೇಳಿಕೆಯಲ್ಲೂ ನನ್ನ ಸಾವಿಗೆ ಯಾರನ್ನೂ ಅನುಮಾನಿಸುವುದಿಲ್ಲ ಎಂದು ಹೇಳುವ ಮೂಲಕ ಗೆಳತಿಯ ಹೆಸರನ್ನು ಹೇಳಲು ನಿರಾಕರಿಸಿದ್ದರು. ಪೊಲೀಸರು ಪದೇ ಪದೇ ಪ್ರಶ್ನೆ ಮಾಡಿದ್ದರೂ ಆಕೆಯ ಹೆಸರು ಹೇಳಿರಲಿಲ್ಲ. ಆದರೆ, ಅನುಮಾನ ಬಂದು 8 ಗಂಟೆಗಳ ವಿಚಾರಣೆಯ ನಂತರ ತಪ್ಪೊಪ್ಪಿಕೊಂಡ ಗೆಳತಿಯನ್ನು ಪೊಲೀಸರು ಬಂಧಿಸಿದ್ದಾರೆ

Latest Videos
Follow Us:
Download App:
  • android
  • ios