Asianet Suvarna News Asianet Suvarna News

'ನಾನು ನಿನ್ನ ತಾಯಿ, ದಿನ ಕಾಲುಮುಟ್ಟಿ ನಮಸ್ಕಾರ ಮಾಡು' ಫರ್ಸ್ಟ್‌ ನೈಟ್‌ನಲ್ಲಿ ಹೆಂಡ್ತಿ ಹೇಳಿದ ಮಾತಿಗೆ ಬೆಸ್ತುಬಿದ್ದ ಗಂಡ


ಮೊದಲ ರಾತ್ರಿ ಅಂದ್ಕೊಂಡು ಖುಷ್‌ ಖುಷಿಯಲ್ಲಿದ್ದ ಗಂಡ. ಪತ್ನಿಯ ಜೊತೆ ಸಮ್ಮಿಲನದ ಖುಷಿಯಲ್ಲಿದ್ದ ಗಂಡನಿಗೆ ಪತ್ನಿ ಉಲ್ಟಾ ಹೊಡೆದು ಬಿಟ್ಟಿದ್ದಳು. ಕೋಣೆಗೆ ಬಂದಾಕೆಯೇ, ನಾನು ನಿನ್ನ ತಾಯಿ ಇದ್ದಂತೆ, ಪ್ರತಿದಿನ ನೀನು ನನ್ನ ಕಾಲು ಮುಟ್ಟಿ ಆಶೀರ್ವಾದ ಪಡೆದುಕೊಳ್ಳಬೇಕು ಎಂದು ಹೇಳಿದ್ದಾಳೆ.
 

In First Night Wife says Consider Me as Mother Touch Feet and Worship Husband in Police station san
Author
First Published Sep 25, 2023, 4:59 PM IST

ನವದೆಹಲಿ (ಸೆ.25): ಇಂದು ಡಿಫರೆಂಟ್‌ ಸ್ಟೋರಿ. ಫರ್ಸ್ಟ್‌ ನೈಟ್‌ನ ಖುಷಿಯಲ್ಲಿದ್ದ ಗಂಡ ಅದಕ್ಕಾಗಿ ಸಂಪೂರ್ಣವಾಗಿ ತಯಾರಾಗಿದ್ದ. ಆದರೆ, ಹಾಲು ಹಿಡಿದುಕೊಂಡು ಕೋಣೆಗೆ ಬಂದ ಪತ್ನಿ. ನಾನು ನಿನ್ನ ಹೆಂಡತಿಯಲ್ಲ. ನಿನ್ನ ತಾಯಿ ಇದ್ದಂತೆ. ಪ್ರತಿ ದಿನ ನೀನು ನನ್ನ ಕಾಲು ಹಿಡಿದು ನಮಸ್ಕಾರ ಮಾಡಬೇಕು. ಪ್ರತಿ ದಿನ ನನ್ನ ಪೂಜಿಸಬೇಕು ಎಂದು ಹೇಳಿದಾಗ ಕಂಗಾಲಾಗಿ ಹೋಗಿದ್ದಾನೆ. ಮೊದಮೊದಲಿಗೆ ಇದು ತಮಾಷೆ ಇರಬಹುದು ಎಂದುಕೊಂಡ ಪತಿಗೆ ಆಕೆ ಹೇಳುತ್ತಿರುವುದು ನಿಜ ಎನ್ನುವುದು ಕೆಲ ದಿನಗಳ ಬಳಿಕ ಅರಿವಾಗಿದೆ. ಉತ್ತರ ಪ್ರದೇಶದ ಗೋರಖ್‌ಪುರದ ಜಂಘಾ ಪ್ರದೇಶದ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರವೀಂದ್ರ ಕುಮಾರ್‌ ಅವರ ಮದುವೆ ವಿಚಾರವೀಗ ಊರಿನಲ್ಲಿ ವೈರಲ್‌ ಆಗಿದೆ. 2023ರ ಫೆಬ್ರವರಿ 24 ರಂದು ಮದುವೆಯಾಗಿದ್ದ ರವೀಂದ್ರ ಕುಮಾರ್‌, ಏಳೇ ತಿಂಗಳ ಮದುವೆಯಿಂದ ನನ್ನನ್ನು ಕಾಪಾಡಿ ಎಂದು ಪೊಲೀಸ್‌ ಠಾನೆಯ ಮೆಟ್ಟಿಲೇರಿದ್ದಾರೆ. ಪ್ರತಿದಿನ ಪೂಜೆ ಮಾಡದೇ ಇದ್ದ ಕಾರಣಕ್ಕೆ ಪತ್ನಿಯಿಂದ ರವೀಂದ್ರ ಕುಮಾರ್‌ ಹಲ್ಲೆಗೂ ಒಳಗಾಗಿದ್ದ. ಪತ್ನಿಯ ಮನಯವರಿಗೆ ರವೀಂದ್ರ ಕುಮಾರ್‌ ಈ ವಿಚಾರ ತಿಳಿಸಿದರೆ, ಅವರೂ ಕೂಡ ಈತನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ಇದರಿಂದಾಗಿ ಜಂಘಾ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 323, 452, 504 ಹಾಗೂ 506ರ ಪ್ರಕಾರ ಇವರು ಪತ್ನಿಯ ವಿರುದ್ಧ ದೂರು ದಾಖಲು ಮಾಡಿದ್ದಾರೆ.

ಮುಜಾಫರ್‌ನಗರ ಜಿಲ್ಲೆಯ ಘಟಪನ್‌ ಉತ್ತರ ಪ್ರದೇಶದ ನಿವಾಸಿಯಾಗಿರುವ ರವೀಂದ್ರ ಕುಮಾರ್‌ ವೃತ್ತಿಯಲ್ಲಿ ಶಿಕ್ಷಕ. ಇದೇ ವರ್ಷದ ಫೆಬ್ರವರಿ 24ರಂದು ಶಾಮ್ಲಿ ಜಿಲ್ಲೆಯ ಅದರ್ಶ್ ಮಂಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ತನ್ನ ವಿವಾಹವಾಗಿತ್ತು ಎಂದು ತಿಳಿಸಿದ್ದಾರೆ. ಮದುವೆಯ ಬಳಿಕ ತನ್ನ ಪತ್ನಿ, 'ನಾನು ನಿನ್ನ ತಾಯಿಯಿದ್ದಂತೆ, ಅದೇ ರೀತಿಯಲ್ಲಿ ಪೂಜೆ ಮಾಡಬೇಕು. ನನ್ನ ಕಾಲುಗಳನ್ನು ಮುಟ್ಟಿ ಪ್ರತಿ ದಿನ ನಮಸ್ಕಾರ ಮಾಡಬೇಕು. ಇಲ್ಲದೇ ಇದ್ದಲ್ಲಿ ನಾನು ನಿಮ್ಮೆಲ್ಲರನ್ನೂ ಸಾಯಿಸುತ್ತೇನೆ. ಇಲ್ಲದೇ ಇದ್ದಲ್ಲಿ ನಾನೇ ಆತ್ಮಹತ್ಯೆ ಮಾಡಿಕೊಂಡು ಅದಕ್ಕೆ ನೀವೇ ಕಾರಣ ಎಂದು ಬರೆದಿಡುತ್ತೇನೆ' ಎಂದು ಹೇಳಲು ಆರಂಭಿಸಿದ್ದಾಗಿ ರವೀಂದ್ರ ಕುಮಾರ್ ಹೇಳಿದ್ದಾರೆ.

ಈ ಕುರಿತಾಗಿ ರವೀಂದ್ರ ಕುಮಾರ್,‌ ಪತ್ನಿಯ ಮನೆಯವರಿಗೂ ತಿಳಿಸಿದ್ದಾರೆ. ಇನ್ನು ಆಕೆಯ ಮನೆಯವರು, ಆಕೆ ಹೇಳಿದಂತೆ ಮಾಡು ಎಂದಿದ್ದಾರೆ. 2023ರ ಮಾರ್ಚ್‌ನಲ್ಲಿ ನನ್ನ ಮನೆಗೆ ಬಂದಿದ್ದಳು ಎನ್ನುವ ರವೀಂದ್ರ ಕುಮಾರ್‌, ತನ್ನ ಪತ್ನಿ ಮಾನಸಿಕ ಅಸ್ವಸ್ಥೆಯಾಗಿದ್ದಾಳೆ ಎಂದು ದೂರಿದ್ದಾರೆ.

ರಾಯಚೂರು: ಪತ್ನಿ ಕೊಲೆ ಮಾಡಿ ಪತಿ ಆತ್ಮಹತ್ಯೆ, ಪಾಲಕರನ್ನು ಕಳೆದುಕೊಂಡ ಇಬ್ಬರು ಮಕ್ಕಳು ಅನಾಥ

ಇದೇ ಜಂಘಾ ಪ್ರದೇಶದಲ್ಲಿ ನಾನೊಂದು ಬಾಡಿಗೆ ಮನೆ ಪಡೆದುಕೊಂಡು ಅದರಲ್ಲಿ ವಾಸವಾಗಿದ್ದೇನೆ ಎಂದು ಹೇಳಿದ್ದಾರೆ. ಹೀಗಿರುವಾಗ ಸೆಪ್ಟೆಂಬರ್‌ 18 ರಂದು ನನ್ನ ಮನೆಗೆ ಬಂದಿದ್ದ ಆಕೆ ಮತ್ತು ಆಕೆಯ ಇಬ್ಬರು ಸಹೋದರರು ನನ್ನನ್ನು ನಿಂದಿಸಿದ್ದಲ್ಲದೆ,  ಚೂರಿಯಿಂದ ನನ್ನನ್ನು ಕೊಲ್ಲಲು ಪ್ರಯತ್ನ ಪಟಿದ್ದಾರೆ ಎಂದು ದೂರಿದ್ದಾರೆ. ರವೀಂದ್ರ ಕುಮಾರ್‌ ಅವರ ದೂರಿನ ಮೇರೆಗೆ ಕೇಸ್‌ ದಾಖಲು ಮಾಡಿರುವ ಪೊಲೀಸರು, ತನಿಖೆ ಆರಂಭ ಮಾಡಿದ್ದಾರೆ.

 

ಅಪ್ಪನೋರ್ವನ ಸುದೀರ್ಘ ಹೋರಾಟಕ್ಕೆ ಸಿಕ್ತು ಜಯ: ಬಾಲಕನ ಕೊಂದ ಅಮ್ಮ ಚಿಕ್ಕಪ್ಪ ಕಡೆಗೂ ಅಂದರ್

Follow Us:
Download App:
  • android
  • ios