Asianet Suvarna News Asianet Suvarna News

Karnataka crimes: ಅಕ್ರಮವಾಗಿ ಸಾಗಿಸುತ್ತಿದ್ದ 15.55ಲಕ್ಷ ರು. ಮೌಲ್ಯದ ಗುಟ್ಕಾ ಜಪ್ತಿ!

 ಪೊಲೀಸರ ತಂಡ ದಾಳಿ ನಡೆ​ಸಿ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಕಂಟೇ​ನರ್‌ ಲಾರಿ​ಯ​ಲ್ಲಿ ಸಾಗಿ​ಸು​ತ್ತಿ​ದ್ದ 15.55ಲಕ್ಷ ರು. ಮೌಲ್ಯದ ಗುಟ್ಕಾ ಜಪ್ತಿ ಮಾಡಿ ಇಬ್ಬರನ್ನು ಬಂಧಿಸಿದೆ.

Illegal transportation: 15.55 lakhs. Confiscation of Gutka worth at basavakalyan bidar rav
Author
First Published Jul 15, 2023, 6:08 AM IST

ಬಸವಕಲ್ಯಾಣ (ಜು.15) :  ಪೊಲೀಸರ ತಂಡ ದಾಳಿ ನಡೆ​ಸಿ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಕಂಟೇ​ನರ್‌ ಲಾರಿ​ಯ​ಲ್ಲಿ ಸಾಗಿ​ಸು​ತ್ತಿ​ದ್ದ 15.55ಲಕ್ಷ ರು. ಮೌಲ್ಯದ ಗುಟ್ಕಾ ಜಪ್ತಿ ಮಾಡಿ ಇಬ್ಬರನ್ನು ಬಂಧಿಸಿದೆ.

ಖಚಿತ ಮಾಹಿತಿ ಮೇರೆಗೆ ಇಲ್ಲಿಯ ಬಸವಕಲ್ಯಾಣ ಗ್ರಾಮೀಣ ಠಾಣೆ ಪಿಎಸ್‌ಐ ಅಂಬ್ರೀಷ ವಾಗಮೋಡೆ ಅವರ ನೇತೃತ್ವದ ಪೊಲೀಸ್‌ ತಂಡ ತಾಲೂಕಿನ ಉಮಾಪೂರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 65ರ ಮೇಲೆ ದಾಳಿ ನಡೆಸಿ ಬೆಂಗಳೂರು ಮೂಲದ ಶಾರುಖ್‌ ಹಾಗೂ ಹುಮನಾಬಾದ್‌ ತಾಲೂಕಿನ ಮರಕುಂದಾ ಗ್ರಾಮದ ನಿವಾಸಿ ಅಬ್ದುಲ್‌ ಫಯಾಜ್‌ ಅವರನ್ನು ಶುಕ್ರ​ವಾ​ರ ಬಂಧಿಸಿದೆ.

ಕಂಟೇನರ್‌ ಲಾರಿಯನ್ನೂ ವಶಕ್ಕೆ ಪಡೆ​ಯ​ಲಾ​ಗಿ​ದೆ. ಈ ಕುರಿತು ಇಲ್ಲಿಯ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

'ಕೆಎಎಸ್‌ ನೇಮಕ ನೀತಿ ಪಿಎಸ್‌ಐಗೂ ಬರಲಿ' ಹೈಕೋರ್ಟ್‌ನಲ್ಲಿ ಪ್ರಬಲ ವಾದ

ಅಕ್ರಮ ಹಣ ವರ್ಗಾವಣೆ: 4 ಕೋಟಿ ರೂ. ನಗದು ಜಪ್ತಿ

ಬೆಂಗಳೂರು:  ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಪಿಜನ್‌ ಎಜುಕೇಶನ್‌ ಟೆಕ್ನಾಲಜಿ ಇಂಡಿಯಾ ಪ್ರೈ. ಲಿ.ಗೆ ಸೇರಿದ 4 ಕೋಟಿ ರು.ನಗದನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಒಡಾ ಕ್ಲಾಸ್‌ ಆ್ಯಪ್‌ ಮೂಲಕ ಆನ್‌ಲೈನ್‌ ಶಿಕ್ಷಣ ಒದಗಿಸುತ್ತಿದ್ದ ಪಿಜನ್‌ ಎಜುಕೇಶನ್‌ ಟೆಕ್ನಾಲಜಿ ಇಂಡಿಯಾ ಪ್ರೈ. ಲಿ. ಚೀನಾ ಮೂಲದ ಲಿಯು ಕ್ಯಾನ್‌ ಮತ್ತು ಭಾರತದ ವೇದಾಂತ್‌ ಹಮಿರ್ವಾಸಿಯನ್ನು ತನ್ನ ನಿರ್ದೇಶಕರನ್ನಾಗಿ ಹೊಂದಿ, ಬೆಂಗಳೂರಿನಿಂದ ಕಾರ್ಯ ನಿರ್ವಹಿಸುತ್ತಿತ್ತು. ಜಾಹೀರಾತು ವೆಚ್ಚದ ಹೆಸರಲ್ಲಿ ಕಂಪನಿಯ ಖಾತೆಯಿಂದ 82.72 ಕೋಟಿ ರು. ಚೀನಾ ಮತ್ತು ಹಾಂಕಾಂಗ್‌ ಮೂಲದ ಖಾತೆಗಳಿಗೆ ವರ್ಗಾವಣೆಯಾಗಿರುವುದು ಇಡಿ ತನಿಖೆ ವೇಳೆ ಗೊತ್ತಾಗಿದೆ.

ವಂಶಿಕಾ ಹೆಸರಲ್ಲಿ ವಂಚಿಸಿದವಳು ಅರೆಸ್ಟ್, 14 ದಿನಗಳು ನ್ಯಾಯಾಂಗ ಬಂಧನ

ಕಳೆದ ಏಪ್ರಿಲ್‌ ತಿಂಗಳಲ್ಲಿ ಸಂಸ್ಥೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಸಂಸ್ಥೆಯ ಎಲ್ಲಾ ವ್ಯವಹಾರಗಳು, ಹಣಕಾಸು ತೀರ್ಮಾನಗಳು ಸೇರಿ ಎಲ್ಲ ನಿರ್ಧಾರಗಳನ್ನು ಚೀನಾದ ವ್ಯಕ್ತಿಗಳು ತೆಗೆದುಕೊಳ್ಳುತ್ತಿದ್ದಾರೆ. ಜಾಹೀರಾತು ಮತ್ತು ಮಾರುಕಟ್ಟೆವೆಚ್ಚದ ಹೆಸರಲ್ಲಿ 82.72 ಕೋಟಿ ರು. ನಷ್ಟುಎರಡು ರಾಷ್ಟ್ರಗಳಿಗೆ ವರ್ಗಾವಣೆಯಾಗಿರುವುದು ಸಾಬೀತಾಗಿದೆ ಎಂದು ಇಡಿ ಹೇಳಿದೆ. ಮೇ ತಿಂಗಳಲ್ಲಿಯೂ ಇಡಿ ಅಧಿಕಾರಿಗಳು 8.26 ಕೋಟಿ ರು. ಅನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿಸಿದೆ.

Follow Us:
Download App:
  • android
  • ios