ಬೆಂಗಳೂರು(ಏ. 24)  ಕೊರೋನಾ ಲಾಕ್ ಡೌನ್ ಪರಿಣಾಮ ಎಲ್ಲ ಕಡೆ ಮದ್ಯ ಬಂದ್ ಆಗಿದೆ. ಆದರೆ ಬೆಂಗಳೂರಿನಲ್ಲಿ ಸರ್ಕಾರಿ ಅಧಿಕಾರಿಗಳೆ ಮದ್ಯ ಸಾಗಾಟ ಮಾಡುತ್ತಿರವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಸರ್ಕಾರಿ ಅಧಿಕಾರಿಗಳಿಂದಲೇ ಎಣ್ಣೆ ಸಾಗಾಟ ನಡೆದಿದೆ.   ಜಿಎಸ್ಟಿ ಇಲಾಖೆಗೆ ಸೇರಿದ ವಾಹನದಲ್ಲಿ ಮದ್ಯ ಸಾಗಾಟ ಮಾಡಲಾಗುತ್ತಿತ್ತು.  ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲ ಘಟನೆಯಾಗಿದೆ.  

ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಮದ್ಯ ಕಂಡುಬಂದಿದ್ದು ಎಸಿಪಿ ವಾಸು ಮದ್ಯ ಹಾಗೂ ವಾಹನ ಸೀಜ್  ಮಾಡಿದ್ದಾರೆ .  ಚಾಲಕನ ಜತೆ ಒಬ್ಬರು ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ.

ಎರಡು ತಿಂಗಳು ಮದ್ಯ ಸಿಗದಿದ್ದರೆ ಶೇ. 50 ಜನ ಎಣ್ಣೆ ಬಿಡ್ತಾರಂತೆ!

ಮೂರು ಕೇಸ್ ಮದ್ಯ  ಕೆಎ 01 ಜಿ 5956 ವಾಹನದಲ್ಲಿ ಸಿಕ್ಕಿದೆ.  ಜಿಎಸ್ ಟಿ ಎನ್ಪೋರ್ಸಮೆಂಟ್ ವಾಹನದಲ್ಲಿ  ಮದ್ಯ ಸಾಗಾಟ ಮಾಡುತ್ತಿದ್ದ ವಿಚಾರ ನಿಜಕ್ಕೂ ಹೊಸ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮೇ 3ರವರೆಗೆ ಈಗಾಗಲೇ ಲಾಕ್ ಡೌನ್ ಮುಂದುವರಿಯಲಿದೆ ಎಂದು ತಿಳಿಸಲಾಗಿದ್ದು ಕೆಲ ಸಡಿಲಿಲಕೆ ಮಾತ್ರ ಮಾಡಲಾಗಿದೆ. ಬೆಂಗಳೂರು ಮಹಾನಗರಕ್ಕೆ ಪಾದರಾಯನಪುರ ಮತ್ತು ಸೋಂಕಿತ ಬಿಹಾರಿ ವ್ಯಕ್ತಿ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ.