Asianet Suvarna News Asianet Suvarna News

ಕೊಡಗಿನಲ್ಲಿ ಅಕ್ರಮ ನಾಡ ಬಂದೂಕು ತಯಾರಿಸಿ ಮಾರಾಟ: ಮೂವರ ಬಂಧನ

ಅಕ್ರಮ ನಾಡ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿ ಸೇರಿ ಬಂದೂಕು ಖರೀದಿಸಿದ್ದ ಮೂವರನ್ನು ಕೊಡಗು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಮೂಲತಃ ಕೇರಳ ರಾಜ್ಯದ ಇಡುಕ್ಕಿಯವನಾದ ಸುರೇಶ್ ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ಬಂಧಿತ ಆರೋಪಿ. 
 

Illegal gun manufacture and sale in Kodagu Three arrested gvd
Author
First Published Aug 15, 2024, 10:59 PM IST | Last Updated Aug 15, 2024, 10:59 PM IST

ಕೊಡಗು (ಆ.15): ಅಕ್ರಮ ನಾಡ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿ ಸೇರಿ ಬಂದೂಕು ಖರೀದಿಸಿದ್ದ ಮೂವರನ್ನು ಕೊಡಗು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಮೂಲತಃ ಕೇರಳ ರಾಜ್ಯದ ಇಡುಕ್ಕಿಯವನಾದ ಸುರೇಶ್ ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ಬಂಧಿತ ಆರೋಪಿ. ಮಡಿಕೇರಿ ತಾಲ್ಲೂಕಿನ ಸಣ್ಣಪುಲಿಕೋಟು ಗ್ರಾಮದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದಿದ್ದ ಸುರೇಶ್ ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ. ಇವನಿಂದ ಬಂದೂಕುಗಳನ್ನು ಖರೀದಿಸಿದ್ದ ಮೂವರನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ. 

ಅಕ್ರಮವಾಗಿ ಬಂದೂಕು ಖರೀದಿಸಿದ್ದ ಕರಿಕೆ ನಿವಾಸಿ ಎನ್.ಜೆ ಶಿವರಾಮ(45), ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಎಸ್.ರವಿ(35), ಮಡಿಕೇರಿ ತಾಲ್ಲೂಕಿನ ದೊಡ್ಡಪುಲಿಕೋಟು ಗ್ರಾಮದ ಕೋಟಿ(55) ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಬಂದೂಕು ತಯಾರಿಸಲು ಬಳಸುತ್ತಿದ್ದ ಸಾಮಗ್ರಿಗಳು, 5 ನಾಡ ಬಂದೂಕು, 1 ಪಿಸ್ತೂಲನ್ನು ವಶಕ್ಕೆ ಪಡೆದಿದ್ದಾರೆ. ಕೊಡಗು ಎಸ್ಪಿ ರಾಮರಾಜನ್ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆಸಿ, ಆರೋಪಿಗಳನ್ನ ಬಂಧಿಸಿ ಸೆರೆಮನೆಗೆ ಅಟ್ಟಲಾಗಿದೆ. 

ಒಳಮೀಸಲಾತಿ ಬಗ್ಗೆ ಖರ್ಗೆಯಿಂದ ಗೊಂದಲ ಸೃಷ್ಟಿ ಬೇಡ: ಸಂಸದ ಗೋವಿಂದ ಕಾರಜೋಳ

ನಕಲಿ ಯುಪಿಐ ಬಳಸಿ ವಂಚನೆ, ನಾಲ್ವರ ಬಂಧನ: ಹೊಟೆಲ್‌ಗಳಲ್ಲಿ ಭರ್ಜರಿಯಾಗಿ ಬಾಡೂಟ ಮಾಡಿ ನಕಲಿ ಯುಪಿಐ ಮೂಲಕ ಬಿಲ್‌ ಪಾವತಿಸಿ ಹೊಟೆಲ್‌ ಮಾಲೀಕರಿಗೆ ವಂಚಿಸುತ್ತಿದ್ದ ತಂಡವೊಂದನ್ನು ಹೊಟೆಲ್‌ ಮಾಲೀಕನೇ ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಎಡೆಯೂರು ಬಳಿಯ ವಾಸು ನಮ್ಮ ಮನೆ ಬಾಡೂಟದ ಹೊಟೆಲ್ ನಲ್ಲಿ ನಡೆದಿದೆ. ಬಂಧಿತರು ತುರುವೇಕರೆ ಮೂಲದವರಾಗಿದ್ದು ಮೂವರು ಯುವಕರು ಹಾಗೂ ಓರ್ವ ಯುವತಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ವಾಸು ನಮ್ಮ ಮನೆ ಬಾಡೂಟದ ಹೋಟೆಲ್ ಗೆ ಊಟಕ್ಕೆ ಬಂದಿದ್ದ ಮೂವರು ಯುವಕರು,

ಹಾಗೂ ಓರ್ವ ಯುವತಿ 700 ರೂಪಾಯಿ ಬಿಲ್ ಆಗುವರೆಗೂ ಮಾಂಸಹಾರ ಸೇವನೆ ಮಾಡಿದ್ದು, ಬಳಿಕ ನಕಲಿ ಪೋನ್ ಪೇ ಆ್ಯಪ್ ಮೂಲಕ ಹಣ ಪಾವತಿ ಮಾಡಿರುವುದಾಗಿ ತಿಳಿಸಿದ್ದರು. ಆದರೆ ಮಾಲೀಕ ಸಂದೀಪಗೆ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಹಣ ಫೋನ್ ಪೇಯಲ್ಲಿ ಪಾವತಿಯಾಗದೆ ಇರುವುದು ಪತ್ತೆಯಾಗಿದೆ. ಕೂಡಲೇ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು ವಿಚಾರಣೆ ವೇಳೆ ಮೋಸ ಮಾಡಿರುವುದು ಖಚಿತವಾಗಿದೆ. ಈ ರೀತಿ ಈ ಹಿಂದೆಯೂ ವಂಚನೆ ಮಾಡಿರುವ ಕುರಿತು ಮಾಹಿತಿ ಸಿಕ್ಕಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios