ಮಾರ್ಚ್ 29 ರಂದು ನಡೆದಿದ್ದ ಘಟನೆ, ವಿನೋದ್ ಜೀವಕ್ಕೆ ಸೊಳ್ಳೆ ಬತ್ತಿ ಕುತ್ತು ತಂದಿದೆ ಅಂತ ಪೊಲೀಸರು ತನಿಖೆಯಿಂದ ತಿಳಿದು ಬಂದಿದೆ. 

ಬೆಂಗಳೂರು(ಏ.06): ಒಳ ಉಡುಪಿನಿಂದ ಮೃತ ವ್ಯಕ್ತಿ ಗುರುತು ಪತ್ತೆಯಾಗಿದೆ. ಹೌದು, ಮಾರ್ಚ್ 29 ರಂದು ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದೇವಿನಗರದಲ್ಲಿ ನಿಂತಿದ್ದ ಕಾರಿನಲ್ಲಿ ಮಲಗಿದ್ದ ವ್ಯಕ್ತಿ ಸಜೀವ ದಹನವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿ ಗುರುತನ್ನ ಪೊಲೀಸರು ಪತ್ತೆ ಮಾಡಿದ್ದಾರೆ. ವಿನೋದ್ ಮೃತ ವ್ಯಕ್ತಿ ಅನ್ನೋದು ಗೊತ್ತಾಗಿದೆ. 

ಮಾರ್ಚ್ 29 ರಂದು ಘಟನೆ ನಡೆದಿತ್ತು. ವಿನೋದ್ ಜೀವಕ್ಕೆ ಸೊಳ್ಳೆ ಬತ್ತಿ ಕುತ್ತು ತಂದಿದೆ ಅಂತ ಪೊಲೀಸರು ತನಿಖೆಯಿಂದ ತಿಳಿದು ಬಂದಿದೆ. 

ಬೆಂಗಳೂರು: ರಸ್ತೆ ಬದಿ ನಿಂತಿದ್ದ ಕಾರಿಗೆ ಆಕಸ್ಮಿಕ ಬೆಂಕಿ, ನಿರ್ಗತಿಕ ವ್ಯಕ್ತಿ ಸಜೀವ ದಹನ

ಮೃತ ವಿನೋದ್‌ನ ಪತ್ನಿ ದೂರವಾಗಿದ್ದರು. ಹೀಗಾಗಿ ದೊಡ್ಡಬೊಮ್ಮಸಂದ್ರದಲ್ಲಿ ತಾಯಿ ಜೊತೆಗೆ ವಿನೋದ್‌ ವಾಸವಿದ್ದ. ಮದ್ಯ ವ್ಯಸನಿಯಾಗಿದ್ದ ವಿನೋದ್ ಎಲ್ಲೆಂದರಲ್ಲಿ ಕುಡಿದು ಮಲಗುತ್ತಿದ್ದನಂತೆ. ಸ್ಕ್ರಾಪ್ ಕಾರಿನಲ್ಲಿ ಸೊಳ್ಳೆ ಬತ್ತಿ ಹಚ್ಚಿಕೊಂಡು ವಿನೋದ್ ಮಲಗಿದ್ದನಂತೆ. ಸೊಳ್ಳೆ ಬತ್ತಿಯಿಂದ ಬೆಂಕಿ ತಗುಲಿದ ಪರಿಣಾಮ ವಿನೋದ್‌ ಸಜೀವ ದಹನವಾಗಿದ್ದ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ.