ಛತ್ತೀಸ್ ಘಡ(ಏ. 22)  ಈತ ಅಂತಿಂಥ ಚಾಲಾಕಿ ವ್ಯಕ್ತಿ ಅಲ್ಲ. ಮಹಿಳೆ ಹೆಸರಲ್ಲಿ ಫೇಕ್ ಫೇಸ್ ಬುಕ್ ಖಾತೆ ತೆರೆದಿದ್ದ. ಖಾತೆ ತೆರೆದಿದ್ದು ಮಾತ್ರ ಅಲ್ಲ ಅಶ್ಲೀಲ ಕಮೆಂಟ್ ಗಳನ್ನು ಸಿಕ್ಕಾಪಟ್ಟೆ ಹಾಕುತ್ತಿದ್ದ. ಸಾಮಾಜಿಕ ಸ್ವಾಸ್ಥ್ಯ ಕದಡುವ ಕಮೆಂಟ್ ಗಳು ಇರ್ತಿದ್ದವು.  ಈಗ ಪೊಲೀಸರಿಂದಲೂ ಸಿಕ್ಕಾಪಟ್ಟೆ ಟ್ರೀಟ್ ಮೆಂಟ್ ಪಡೆದುಕೊಂಡಿದ್ದಾನೆ.

ಮಹಿಳೆ ಹೆಸರಲ್ಲಿ ಫೇಕ್ ಅಕೌಂಟ್  ಕ್ರಿಯೇಟ್ ಮಾಡಿದ್ದ 31 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಛತ್ತೀಸಘಡ ಪೊಲೀಸರು ಬಂಧಿಸಿದ್ದಾರೆ.  ನಿಶಾ ಜಿಂದಾಲ್ ಎಂಬ ಹೆಸರಿನಲ್ಲಿ ಖಾತೆ ಮಾಡಿದ್ದು 4000 ಫ್ರೆಂಡ್ಸ್ ಮತ್ತು 10 ಸಾವಿರಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿತ್ತು. ಉದ್ಯಮಿಗಳು ಮತ್ತು ಪತ್ರಕರ್ತರು ಸಹ ಫಾಲೋವರ್ಸ್ ಆಗಿದ್ದರು.

ಪಾದರಾಯನಪುರ ಪುಂಡರು ಒಬ್ಬೊಬ್ಬರಾಗಿ ಬರ್ತಿದ್ದಾರೆ ನೋಡಿ

ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಆರೋಪಿಯ ಹೆಸರು ರವಿ ಪೂಜಾರ್. ಕಬೀರ್ ನಗರ್ ಏರಿಯಾದಲ್ಲಿ ಆತನನ್ನು ಬಂಧಿಸಲಾಗಿದೆ.  ಬಿಜಿನಸ್ ಮೆನ್ ಗಳ ಜತೆ  ಮಹಿಳೆ ಹೆಸರಿನಲ್ಲಿ ಚಾಟ್ ಮಾಡುತ್ತಿದ್ದ. 

ಈ ಬಗ್ಗೆ ದೂರುಗಳು ಕೇಳಿಬಂದ ನಂತರ ಪೊಲೀಸರೇ ಒಬ್ಬರ ಮೂಲಕ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಚಾಟ್ ಮಾಡಿಸುತ್ತಾರೆ. ಸಕಲ ಮಾಃಇತಿ ಕಲೆಹಾಕಿ ಆರೋಪಿಯನ್ನು ಬಂಧಿಸಲಾಗುತ್ತದೆ.

ಇದಾದ ಮೇಲೆ ಅಕೌಂಟ್ ಕೈಗೆ ತೆಗೆದುಕೊಂಡ ಪೊಲೀಸರು ಆರೋಪಿಯ ಪೋಟೋ ಹಾಕಿ ನಾನು ನಿಶಾ ಜಿಂದಾಲ್ ಎಂದು ಪೋಸ್ಟ್ ಮಾಡಿಸುತ್ತಾರೆ.

ಆರೋಪಿ ಪಾಕಿಸ್ತಾನದ ಮಾಡೆಲ್ ಒಬ್ಬರ ಪೋಟೋ ಬಳಸಿ ನಕಲಿ ಖಾತೆ ಕ್ರಿಯೇಟ್ ಮಾಡಿಕೊಂಡಿದ್ದ. ಇದೇ ಬಗೆಯಲ್ಲಿ ಒಟ್ಟು 5ನಕಲಿ ಖಾತೆ ಹ್ಯಾಂಡಲ್ ಮಾಡುತ್ತಿದೆ. ಮತ್ತೊಂದು ಮಜಾ ಎಂದರೆ ಆರೋಪಿಯದ್ದು ಯಾವುದೇ ಅಸಲಿ ಸೋಶಿಯಲ್ ಮೀಡಿಯಾ ಖಾತೆಯೇ ಇಲ್ಲ.