ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ವ್ಯಕ್ತಿಯೊಬ್ಬ ತನ್ನ ಹೆಂಡತಿ ಮೇಲೆ ಅನುಮಾನಗೊಂಡು ಆಕೆಯ ಗುಪ್ತಾಂಕ್ಕೆ ಹೊಲಿಗೆ ಹಾಕಿರುವ ದಾರುಣ ಘಟನೆ ನಡೆದಿದೆ.

ಲಖನೌ, (ಮಾ.21): ಅನುಮಾನ ಎನ್ನುವುದು ಒಮ್ಮೆ ಆವರಿಸಿದರೆ ಆದು ಸುಲಭವಾಗಿ ಹೋಗುವುದಿಲ್ಲ. ಒಮ್ಮೆ ಬಗೆಹರಿದರೂ ಪುನಃ ಅಂಥದ್ದೊಂದು ಸಂದರ್ಭ ಎದುರಾಗುತ್ತದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದರಂತೆ ಇಲ್ಲೊಬ್ಬ ವ್ಯಕ್ತಿಯೊಬ್ಬ ಪದೇ-ಪದೇ ತನ್ನ ಹೆಂಡತಿ ಶೀಲ ಶಂಕಿಸಿ ಜಗಳವಾಡುತ್ತಿದ್ದವ ಕೊನೆಗೆ ಆಕೆಯ ಗುಪ್ತಾಂಗವನ್ನೇ ದಾರದಿಂದ ಹೊಲಿದಿರುವ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ರಾಮ್​ಪುರ ಜಿಲ್ಲೆಯ ಮಿಲಾಕ್ ಪ್ರದೇಶ ವಾಸಿ ಇಂತಹ ಹೇಯ ಕೃತ್ಯವೆಸಗಿದ್ದಾನೆ. ಆತನಿಗೆ ಎರಡು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿತ್ತಂತೆ. ಆದರೆ ಹೆಂಡತಿಯನ್ನು ಸದಾ ಅನುಮಾನಿಸುತ್ತಿದ್ದ. ಅಲ್ಲದೇ ಆಕೆಗೆ ಸಾಕಷ್ಟು ಹೊಡೆಯುತ್ತಿದ್ದನಂತೆ. 

ರೇಪ್ ಮಾಡೋಕೆ ಬಂದವನ ಗುಪ್ತಾಂಗ ಕತ್ತರಿಸಿದ ಮಹಿಳೆ

ಆದ್ರೆ, ಶನಿವಾರದಂದೂ ಇದೇ ರೀತಿಯಲ್ಲಿ ಅವರಿಬ್ಬರ ಮಧ್ಯೆ ಜಗಳವಾಗಿದೆ. ಕಂಠಪೂರ್ತಿ ಕುಡಿದು ಬಂದ ಗಂಡ ಹೆಂಡತಿಯನ್ನು ಕಟ್ಟಿ ಹಾಕಿದ್ದಾನೆ. ಆಕೆಯ ಬಾಯೊಗೆ ಬಟ್ಟೆ ತುರುಕಿದ್ದಾನೆ. ಬಳಿಕ ಅಲ್ಯೂಮಿನಿಯಂ ದಾರದಿಂದ ಆಕೆಯ ಗುಪ್ತಾಂಗಕ್ಕೆ ಹೊಲಿಗೆ ಹಾಕಲು ಹಾಕಲು ಪ್ರಯತ್ನ ಮಾಡಿದ್ದಾನೆ. ಒಂದೆರೆಡು ಹೊಲಿಗೆಯನ್ನೂ ಹಾಕಿದ್ದಾನೆ. 

ಅಷ್ಟರಲ್ಲಿ ರಕ್ತಸ್ರಾವ ಹೆಚ್ಚಾಗಿದ್ದು, ಆಕೆಯನ್ನು ಅಲ್ಲಿಯೇ ಬಿಟ್ಟು ಆತ ಹೊರನಡೆದಿದ್ದಾನೆ. ನೋವಿನಿಂದ ಬಳಲುತ್ತಿದ್ದ ಹೆಂಡತಿ ಕಷ್ಟ ಪಟ್ಟು ಫೋನ್​ ಎತ್ತಿಕೊಂಡು ಪೋಷಕರಿಗೆ ಕರೆ ಮಾಡಿದ್ದಾಳೆ. ತಕ್ಷಣ ಆಕೆಯ ಕುಟುಂಬಸ್ಥರು ಸ್ಥಳಕ್ಕೆ ಬಂದಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸದ್ಯ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆರೋಪಿ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ.